ಶ್ರುತಿ-ಸರ್ಜಾ ಮೀಟೂ ವಿವಾದಕ್ಕೆ ಚರಣ್ ರಾಜ್ 'ಸಂಧಾನ'ದ ಸಲಹೆ
Recommended Video

ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ಮೇಲೆ ಶ್ರುತಿ ಹರಿಹರನ್ ಮೀಟೂ ಆರೋಪ ಮಾಡಿ ಇಡೀ ದಕ್ಷಿಣ ಭಾರತದ ಚಿತ್ರರಂಗವನ್ನ ದಿಗ್ಬ್ರಮೆಗೊಳಿಸಿದ್ದರು. ಅದಾದ ನಂತರ ನಡೆದ ಬೆಳವಣಿಗೆಗಳ ಬಗ್ಗೆ ನಿಮಗೆ ಗೊತ್ತಿದೆ.
ಸದ್ಯ ಶ್ರುತಿ ಮತ್ತು ಅರ್ಜುನ್ ಸರ್ಜಾ ಇಬ್ಬರು ಕೋರ್ಟ್ ಮೊರೆ ಹೋಗಿದ್ದಾರೆ. ಆದ್ರೆ, ಇದು ನ್ಯಾಯಾಲಯದಲ್ಲಿ ಬಗೆಹರಿಯುವ ಪ್ರಕರಣವಲ್ಲ ಎಂದು ಚಿತ್ರರಂಗದ ಹಿರಿಯರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಇದೀಗ, ಸರ್ಜಾ ಮತ್ತು ಶ್ರುತಿ ಪ್ರಕರಣದ ಬಗ್ಗೆ ಹಿರಿಯ ನಟ ಚರಣ್ ರಾಜ್ ಮಾತನಾಡಿದ್ದಾರೆ. ಸುಮಾರು 35 ವರ್ಷದಿಂದ ಆಕ್ಷನ್ ಕಿಂಗ್ ಸ್ನೇಹಿತರಾಗಿರುವ ಚರಣ್ ರಾಜ್ ಇವರಿಬ್ಬರ ಈ ವಿವಾದಕ್ಕೆ ಸಂಧಾನವೇ ಪರಿಹಾರ ಎನ್ನುತ್ತಿದ್ದಾರೆ. ಹಾಗಿದ್ರೆ, ಚರಣ್ ರಾಜ್ ಹೇಳ್ತಿರೋದೇನು.? ಮುಂದೆ ಓದಿ....

ಅವರಿಬ್ಬರ ಮಧ್ಯೆ ಏನು ನಡೆದಿದೆ ನಮಗೆ ಗೊತ್ತಿಲ್ಲ
'ಅರ್ಜುನ್ ಸರ್ಜಾ 35 ವರ್ಷದಿಂದ ಪರಿಚಯ. ಅವರ ಬಗ್ಗೆ ನನಗೆ ಚೆನ್ನಾಗಿ ಗೊತ್ತು. ಶ್ರುತಿ ಹರಿಹರನ್ ಅವರು ಒಳ್ಳೆಯವರು. ಆದ್ರೆ, ನಾವು ನೀವು ಹೇಳೋದ್ರಿಂದ ಈ ಸಮಸ್ಯೆ ಪರಿಹಾರ ಆಗಲ್ಲ. ಅವರಿಬ್ಬರ ಮಧ್ಯೆ ಏನು ಇದೆಯೋ ನಮಗೆ ಗೊತ್ತಿಲ್ಲ. ಅದನ್ನ ನಾವು ಕೂಡ ನೋಡಿಲ್ಲ' ಎಂದು ಹಿರಿಯ ನಟ ಚರಣ್ ರಾಜ್ ಸಲಹೆ ನೀಡಿದ್ದಾರೆ.

ಕೋರ್ಟ್ ನಲ್ಲಿ ಬಗೆಹರಿಯಲ್ಲ
'ನ್ಯಾಯಾಲಯದಲ್ಲಿ ಇದು ಇತ್ಯಾರ್ಥವಾಗಲ್ಲ. ಇನ್ನು ಅವರು, ಇವರು ಯಾರೇ ಮಾತನಾಡಿದ್ರು ಸಮಸ್ಯೆ ನಿವಾರಣೆಯಾಗಲ್ಲ. ಈ ಸಮಸ್ಯೆಯನ್ನ ಪರಿಹರಿಸಿಕೊಳ್ಳು ಅವರಿಬ್ಬರಿಂದ ಮಾತ್ರ ಸಾಧ್ಯ. ಯಾವುದೇ ಈಗೋ ಸಮಸ್ಯೆಯಿದ್ರೂ ಮಾತನಾಡಿದ್ರೆ ಒಳ್ಳೆಯದಾಗುತ್ತೆ. ಅವರಿಬ್ಬರೇ ಒಂದು ಕಡೆ ಕೂತು ಈ ಬಗ್ಗೆ ಮಾತನಾಡಬೇಕು'

ಎಳೆಯುವುದು ಸರಿಯಲ್ಲ
'ನಾವೆಲ್ಲ ಸಮುದ್ರದಲ್ಲಿ ಈಜಿ ಬಂದಿರೋರು. ಕೆರೆಯಲ್ಲಿ ಬಂದು ಸಿಕ್ಕಿಹಾಕಿಕೊಂಡಿದ್ದೇವೆ ಅಂದ್ರೆ ಅಸಹ್ಯವೆನಿಸುತ್ತೆ. ಮನುಷ್ಯ ತಪ್ಪು ಮಾಡುವುದಲ್ಲದೇ ಮರಗಳು ತಪ್ಪು ಮಾಡಲ್ಲ. ಮರಕ್ಕೆ ಕಷ್ಟ ಬಂದ್ರೆ ಹೇಳಲು ಸಾಧ್ಯವಿಲ್ಲ. ಮನುಷ್ಯರೇ ಹೇಳಿಕೊಳ್ಳುವುದು'

ಜೀವನದಲ್ಲಿ ಚೆನ್ನಾಗಿರಬೇಕು ಅಂದ್ರೆ....
'ಅರ್ಜುನ್ ಸರ್ಜಾಗೂ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಶ್ರುತಿ ಅವರಿಗೆ ಮದುವೆ ಆಗಿದೆ. ಸುಮ್ಮನೆ ಈ ವಿವಾದವನ್ನ ಎಳೆಯುತ್ತಾ ಹೋದ್ರೆ, ಅವರ ಲೈಫ್ ಚೆನ್ನಾಗಿರಲ್ಲ. ಜೀವನದಲ್ಲಿ ಒಂದು ಕಪ್ಪುಚುಕ್ಕೆಯಾಗಿ ಉಳಿದುಬಿಡುತ್ತೆ. ನಾನು ವೈಯಕ್ತಿಕವಾಗಿ ಹೇಳೋದು ಒಂದೇ ಇಬ್ಬರು ಮಾತನಾಡಿ ಬಗೆಹರಿಸಿ'' ಎಂದು ಅಭಿಪ್ರಾಯ ಪಟ್ಟರು'


Click it and Unblock the Notifications











