"ಬಿಜೆಪಿಗೆ ಅಧಿಕಾರಕ್ಕೆ ಬರಲು NDA ಅಗತ್ಯವಿದೆ, ಇದು ಬಿಜೆಪಿಗೆ ದೊಡ್ಡ ಪಾಠ": ಚೇತನ್ ಅಹಿಂಸಾ
ಲೋಕಸಭೆ ಚುನಾವಣೆಯ ಫಲಿತಾಂಶ ಬಹುತೇಕ ಹೊರಬಿದ್ದಿದೆ. ಮತ್ತೊಮ್ಮೆ ಪ್ರಧಾನಿಯಾಗಿ ಮೋದಿ ಅಧಿಕಾರ ಸ್ವೀಕರಿಸುವುದು ಖಾತ್ರಿ ಆಗುತ್ತಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 295 ಸ್ಥಾನಗಳಗೆ ತೃಪ್ತಿಪಡುವಂತಾಗಿದ್ದು INDIA ಮೈತ್ರಿಕೂಟ ಕೂಡ ಸರ್ಕಾರ ರಚಿಸಲು ಕಸರತ್ತು ಆರಂಭಿಸಿದೆ.
ಸರ್ಕಾರ ರಚನೆಗೆ 272 ಸ್ಥಾನಗಳು ಸರಳ ಬಹುಮತವಾಗಿದೆ. ಎನ್‌ಡಿಎ ಮೈತ್ರಕೂಟ 296 ಸ್ಥಾನಗಳಲ್ಲಿ ಗೆಲುವುದು ಖಚಿತವಾಗಿದ್ದು ಸರ್ಕಾರ ರಚಿಸುವುದು ನಿಶ್ಚಿತ. ಆದರೂ 228 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿರುವ ಇಂಡಿಯಾ ಮೈತ್ರಿಕೂಟ ಎನ್‌ಡಿಎ ಹೊರಗಿಟ್ಟು ಸರ್ಕಾರ ರಚಿಸುವ ಲೆಕ್ಕಾಚಾರದಲ್ಲಿದೆ. ಇನ್ನು ಲೋಕಸಭೆ ಚುನಾವಣೆ ಫಲಿತಾಂಶದ ಬಗ್ಗೆ ನಟ ಚೇತನ್ ಅಹಿಂಸಾ ಪ್ರತಿಕ್ರಿಯಿಸಿದ್ದಾರೆ.

"ನಿರೀಕ್ಷೆಯಂತೆ ಮೋದಿ 3ನೇ ಬಾರಿಗೆ ಪ್ರಧಾನಿಯಾಗಲಿದ್ದಾರೆಆದರೆ, ಸಕಾರಾತ್ಮಕವಾಗಿ, ಬಿಜೆಪಿಗೆ ಅಧಿಕಾರಕ್ಕೆ ಬರಲು ಎನ್ ಡಿಎ ಅಗತ್ಯವಿದೆ- ಇದೊಂದು ಬಿಜೆಪಿಗೆ ದೊಡ್ಡ ಪಾಠ. ಇದರರ್ಥ ಬಿಜೆಪಿ ಹಿಂದುತ್ವ ಮತ್ತು 'ಒಂದು ರಾಷ್ಟ್ರ, ಒಂದು ಚುನಾವಣೆ' ಯಂತಹ ಒಕ್ಕೂಟ ವಿರೋಧಿ ನೀತಿಗಳನ್ನು ಅಷ್ಟು ಸುಲಭವಾಗಿ ಜಾರಿಗೆ ತರುವುದಿಲ್ಲ. ಇದು ಒಳ್ಳೆಯದೇ, ಇದು ಮೋದಿಯವರ ವಿಜಯವಲ್ಲ, ಪ್ರಜಾಪ್ರಭುತ್ವದ ವಿಜಯ" ಎಂದು ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಚೇತನ್ ಬರೆದುಕೊಂಡಿದ್ದಾರೆ.


Click it and Unblock the Notifications











