ಪವರ್ ಸ್ಟಾರ್ ಪುನೀತ್ ಗೆ ಮದುವೆ ಆಮಂತ್ರಣ ನೀಡಿದ 'ಆ ದಿನಗಳು' ಚೇತನ್

ಸ್ಯಾಂಡಲ್ ವುಡ್ ನಟ, ಆ ದಿನಗಳು ಖ್ಯಾತಿಯ ಚೇತನ್ ಮದುವೆ ತಯಾರಿಯಲ್ಲಿದ್ದಾರೆ. ಅಸ್ಸಾಂ ಮೂಲದ ಯುವತಿ ಮೇಘಾ ಕೈಹಿಡಿಯುತ್ತಿರುವ ಚೇತನ್ ಸದ್ಯ ಮದುವೆ ಕರೆಯೋಲೆಯಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೆ ಸಾಕಷ್ಟು ಗಣ್ಯರಿಗೆ ಮದುವೆ ಆಮಂತ್ರಣ ನೀಡಿರುವ ಚೇತನ್, ಇತ್ತೀಚಿಗೆ ಪವರ್ ಸ್ಟಾರ್ ಮನೆಗೆ ಭೇಟಿ ನೀಡಿ ಮದುವೆಗೆ ಆಹ್ವಾನಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಚೇತನ್ ಪವರ್ ಸ್ಟಾರ್ ಪುನೀತ್ ಮತ್ತು ಪತ್ನಿ ಅಶ್ವಿನಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ. "02/02/2020 ರಂದು ನಮ್ಮ ವಿವಾಹ ಸಂಭ್ರಮಾಚರಣೆಗೆ ನಾನು ಅವರನ್ನು ಆಹ್ವಾನಿಸಿದಾಗ ನನಗೆ ಸಮಯ ಮತ್ತು ಪ್ರೀತಿಯನ್ನು ನೀಡಿದ ಪುನೀತ್ ರಾಜ್ ಕುಮಾರ್ ಮತ್ತು ಅಶ್ವಿನಿ ಮೇಡಂ ಅವರಿಗೆ ಧನ್ಯವಾದಗಳು" ಎಂದು ಬರೆದುಕೊಂಡಿದ್ದಾರೆ.

Actor Chetan Invited To Power Star Puneeth Rajkumar For His Marriage

ಮುಂದಿನ ತಿಂಗಳು ಫೆಬ್ರವರಿ 2 ಭಾನುವಾರ ಚೇತನ್ ಗೆಳತಿ ಮೇಘಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಸಮಾಜಮುಖಿ ಕೆಲಸಗಳಲ್ಲಿ ಗುರುತಿಸಿಕೊಂಡಿರುವ ಚೇತನ್, ಸರಳವಾಗಿ ಮದುವೆ ಆಗಲು ನಿರ್ಧರಿಸಿದ್ದಾರೆ. ವಲ್ಲಭ್ ನಿಕೇತನ ವಿನೋಬಾ ಭಾವೆ ಆಶ್ರಮದ ಮಕ್ಕಳು ಮತ್ತು ವೃದ್ಧರ ಸಮ್ಮುಖದಲ್ಲಿ ವಿವಾಹಬಂಧನಕ್ಕೆ ಒಳಗಾಗಲಿದ್ದಾರೆ.

Actor Chetan Invited To Power Star Puneeth Rajkumar For His Marriage

ಸಂಜೆ 6 ಗಂಟೆಗೆ ಇಬ್ಬರ ಮದುವೆ ನಡೆಯಲಿದ್ದು ಚಿತ್ರರಂಗದ ಗಣ್ಯರು ಭಾಗಿಯಾಗಿ ನವ ದಂಪತಿಗೆ ಶುಭ ಕೋರಲಿದ್ದಾರೆ. ಮದುವೆಗೆ ಯಾರೆಲ್ಲ ಭಾಗಿಯಾಗಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ. ಇನ್ನು ಚೇತನ್ ಕೂಡ ಪುನೀತ್ ರಾಜ್ ಕುಮಾರ್ ದಂಪತಿಗೆ ಮದುವೆ ಆಮಂತ್ರಣ ನೀಡಿರುವ ಫೋಟೋವನ್ನು ಮಾತ್ರ ಅಪ್ ಲೋಡ್ ಮಾಡಿದ್ದಾರೆ. ಹಾಗಾಗಿ ಯಾರಿಗೆಲ್ಲ ಮದುವೆ ಆಮಂತ್ರಣ ಹೋಗಿದೆ ಎನ್ನುವುದು ಕುತೂಹಲ.

More from Filmibeat

English summary
Actor Chetan invited to Power Star Puneeth Rajkumar for his marriage. Chetan Kumar to tie the knot with his sweetheart Megha in February 2nd.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X