ಚೇತನ್ ಮದುವೆಯ ಆಮಂತ್ರಣ ಪತ್ರಿಕೆಯ ವಿಶೇಷ: ಮಣ್ಣಲ್ಲಿ ಬಿತ್ತಿದ್ದರೆ ಚಿಗುರೊಡೆಯುತ್ತೆ
'ಆ ದಿನಗಳು' ಖ್ಯಾತಿಯ ನಟ ಚೇತನ್ ಸಿನಿಮಾ ಜೊತೆಗೆ ಸಾಮಾಜಿಕ ಕಾರ್ಯಗಳನ್ನು ಮಾಡುತ್ತ ಕನ್ನಡ ಅಭಿಮಾನಿಗಳ ಮನಗೆದ್ದಿದ್ದಾರೆ. ಸದ್ಯ ಹಸೆಮಣೆ ಏರಲು ಸಜ್ಜಾಗಿರುವ ಚೇತನ್ ಮದುವೆ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಆದರ್ಶಗಳ ಬಗ್ಗೆ ಮಾತನಾಡುತ್ತ, ಅನೇಕರ ನೋವಿಗೆ ನೆರವಾಗಿ, ಅವರ ಪರ ಹೋರಾಟ ಮಾಡುತ್ತಿರುವ ಚೇತನ್ ಮದುವೆ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇತ್ತು.
Recommended Video
ಚೇತನ್ ತೀರ ಸರಳವಾಗಿ ಹಸೆಮಣೆ ಏರುತ್ತಿದ್ದಾರೆ. ವಲ್ಲಭ್ ನಿಕೇತನ ವಿನೋಬಾ ಭಾವೆ ಆಶ್ರಮದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಚೇತನ್ ಮದುವೆ ಆಮಂತ್ರಣ ಪತ್ರಿಕೆ ಎಲ್ಲರ ಗಮನ ಸೆಳೆಯುತ್ತಿದೆ. ಮದುವೆ ಪತ್ರಿಕೆಯನ್ನು ಹೇಗೆಲ್ಲ ಮಾಡಿಸುತ್ತಾರೆ ಎನ್ನುವುದು ಅನೇಕರಿಗೆ ಗೊತ್ತಿರುವ ವಿಚಾರ. ಅದರಲ್ಲೂ ಸೆಲೆಬ್ರಿಟಿಗಳ ಮದುವೆ ಅಂದ್ಮೇಲೆ ಕೇಳಬೇಕ ಒಂದು ಆಮಂತ್ರಣ ಪತ್ರಿಕೆಗೆ ಸಾವಿರ, ಲಕ್ಷ ಗಟ್ಟಲೆ ಖರ್ಚು ಮಾಡುತ್ತಾರೆ. ಆದರೆ ನಟ ಚೇತನ್ ಮದುವೆ ಪತ್ರಿಕೆ ನೋಡಿದರೆ ನಿಜಕ್ಕು ಅಚ್ಚರಿ ಪಡುತ್ತೀರಿ.

ಮಣ್ಣಲ್ಲಿ ಬಿತ್ತಿದ್ದರೆ ಚಿಗುರೊಡೆಯುತ್ತೆ
ಚೇತನ್ ಮದುವೆ ಸರಳವಾಗಿ ಮದುವೆ ಆಗುತ್ತಿದ್ದಾರೆ. ಅದರಂತೆ ಮದುವೆ ಆಮಂತ್ರಣ ಪತ್ರಿಕೆ ಕೂಡ ಅಷ್ಟೆ ಸರಳ ಮತ್ತು ಆಕರ್ಷವಾಗಿದೆ. ಆಮಂತ್ರಣ ಪತ್ರಿಕೆಯನ್ನು ನೆಲಕ್ಕೆ ಎಸೆದರು ಅದು ಚಿಗುರೊಡೆಯುತ್ತೆ. ಆಹ್ವಾನ ಪತ್ರಿಕೆಯೊಳಗೆ ಬೀಜವನ್ನು ಹುದುಗಿಸಿ ಇಡಲಾಗಿದೆ. ಪತ್ರಿಕೆಯನ್ನು ಓದಿ ಎಸೆದರು ಅದು ಅಲ್ಲೆ ಚಿಗುರೊಡೆಯುತ್ತೆ. ಪರಿಸರದ ಬಗ್ಗೆ ಅಪಾರ ಕಾಳಜಿ ಇಟ್ಟುಕೊಂಡಿರುವ ಚೇತನ್ ಮದುವೆ ಆಮಂತ್ರಣ ಪತ್ರಿಕೆಯಲ್ಲಿಯೂ ಪರಿಸರ ಕಾಳಜಿ ಮೆರೆದಿದ್ದಾರೆ.

ಪರಿಸರ ಸ್ನೇಹಿ ಆಮಂತ್ರಣ ಪತ್ರಿಕೆ
ಆಮಂತ್ರಣ ಪತ್ರಿಕೆಯಲ್ಲಿ ನಿಮ್ಮ "ಶುಭ ಹಾರೈಕೆಯೇ ನಮಗೆ ಹೂಗುಚ್ಚ ಮತ್ತು ಉಡುಗೊರೆಯಾಗಿರಲಿ" ಎಂದು ಬರೆದಿದೆ. ಜೊತೆಗೆ ಎಲ್ಲರ ಗಮನ ಸೆಳೆಯುವಂತ ಸಾಲುಗಳು ಅಂದರೆ "ಬೀಜವನ್ನು ಹುದುಗಿಕೊಂಡಿರುವ ಪರಿಸರ ಸ್ನೇಹಿ ಈ ಆಹ್ವಾನ ಪತ್ರವನ್ನು ಮಣ್ಣಲ್ಲಿ ಬಿತ್ತಿ ಚಿಗುರೊಡೆಯುತ್ತದೆ" ಎಂದು ಬರೆಯಲಾಗಿದೆ. ಈ ಸಾಲು ನೋಡಿ ಅನೇಕರು ಅಚ್ಚರಿ ಪಡುತ್ತಿದ್ದಾರೆ.

ಪತ್ರಿಕೆಯಲ್ಲಿ ಕಸೂತಿಹೊದ್ದ ಹೊದಿಕೆ
ಚೇತನ್ ಮದುವೆಯ ಆಮಂತ್ರಣ ಪತ್ರಿಕೆ ಪರಿಸರ ಸ್ನೇಹಿ ಜೊತೆಗೆ ಸುಂದರ ಕಸೂತಿ ಕೂಡ ಗಮನ ಸೆಳೆಯುತ್ತಿದೆ. ಒಂದೇ ಪುಟದ ಕಾರ್ಡ್ ಇದಾಗಿದ್ದು, ಈ ಕಾರ್ಡ್ ಮೇಲೆ ಒಂದು ಹೊದಿಕೆ ಇದೆ. ಸುಂದರವಾದ ಕಸೂತಿ ಇರುವ ಹೊದಿಕೆ ಇದಾಗಿದೆ. ಪತ್ರಿಕೆ ತುಂಬ ಸರಳವಾಗಿದ್ದರು, ಆಕರ್ಷವಾಗಿದೆ. ಸಾಕಷ್ಟು ಜನ ಆಮಂತ್ರಣ ಪತ್ರಿಕೆ ಜೊತೆಗೆ ಗಿಡವನ್ನು ಕೊಡುವುದನ್ನು ನೋಡಿದ್ದೀರಿ. ಆದರೆ ಚೇತನ್ ಬೀಜವನ್ನು ಹುದುಗಿಸಿರುವ ಪತ್ರಿಕೆಯನ್ನೆ ನೀಡುತ್ತಿದ್ದಾರೆ.

ಫೆಬ್ರವರಿಯಲ್ಲಿ ಮದುವೆ
ಚೇತನ್ ಮತ್ತು ಮೇಘಾ ಮದುವೆ ಮುಂದಿನ ತಿಂಗಳು ಅಂದರೆ ಫೆಬ್ರವರಿ 2 ಭಾನುವಾರ ಸಂಜೆ ನಡೆಯಲಿದೆ. ವಲ್ಲಭ್ ನಿಕೇತನ ವಿನೋಬಾ ಭಾವೆ ಆಶ್ರಮದ ಮಕ್ಕಳು ಮತ್ತು ವೃದ್ಧರ ಸಮ್ಮುಖದಲ್ಲಿ ವಿವಾಹ ಬಂಧನಕ್ಕೆ ಒಳಗಾಗಲಿದ್ದಾರೆ. ಆಡಂಬರ, ಅಬ್ಬರ ವಿಲ್ಲದೆ ಸರಳವಾಗಿ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಡುತ್ತಿರುವ ಚೇತನ್ ಮದುವೆಯಲ್ಲಿ ಒಂದಿಷ್ಟು ವಿಶೇಷತೆಗಳು ಇವೆ. ವಚನ ಗಾಯನ, ಸೂಫಿ ಗಾಯನ, ಕೊರಗ ನೃತ್ಯ, ಲಂಬಾಣಿ ನೃತ್ಯ, ಸಿದ್ಧಿ ನೃತ್ಯ ಮತ್ತು ಪುಸ್ತಕ ಪ್ರದರ್ಶನ ಏರ್ಪಡಿಸಲಾಗಿದೆ.


Click it and Unblock the Notifications