For Quick Alerts
  ALLOW NOTIFICATIONS  
  For Daily Alerts

  ನಟ ಚೇತನ್ ಮದುವೆ ದಿನಾಂಕ ಬಹಿರಂಗ: ಅನಾಥಾಶ್ರಮದಲ್ಲಿ ನಡೆಯಲಿದೆ ವಿವಾಹ

  |
  ಆ ದಿನಗಳು ಚೇತನ್ ಆಗುತ್ತಿರೋದು ಎಲ್ಲಿ ಗೊತ್ತಾ..? | Chethan | Meghana | Marriage | Filmibeat Kannada

  ಸ್ಯಾಂಡಲ್ ವುಡ್ ನಟ ಚೇತನ್ ಮದುವೆ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. ಈ ವರ್ಷದ ಆರಂಭದಲ್ಲೆ ಚೇತನ್ ಮದುವೆ ಸುದ್ದಿ ಕೊಡುವ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಮಂಗಳ ವಾದ್ಯದ ಸದ್ದು ಮೂಡಿಸಿದ್ದಾರೆ. ಕಳೆದ ವರ್ಷ ಚಂದನವನದಲ್ಲಿ ಮದುವೆ ಸಂಭ್ರಮ ಜೋರಾಗಿತ್ತು. ಸಾಕಷ್ಟು ಸ್ಟಾರ್ ಕಲಾವಿದರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

  ಸದ್ಯ ಚೇತನ್ ಮದುವೆ ಆಗುತ್ತಿದ್ದಾರೆ ಎನ್ನುವ ಸುದ್ದಿ ಕೇಳಿದ್ದೀರಿ, ಆದರೆ ಯಾವಾಗ ಎಲ್ಲಿ ಎನ್ನುವ ಸುದ್ದಿ ಹೊರಬಿದ್ದಿರಲಿಲ್ಲ. ಆದರೀಗ ಚೇತನ್ ಮದುವೆ ದಿನಾಂಕ ಮತ್ತು ಎಲ್ಲಿ ಎನ್ನುವ ಮಾಹಿತಿ ಬಹಿರಂಗವಾಗಿದೆ. ಅಸ್ಸಾಂ ಮೂಲದ ಯುವತಿಯನ್ನು ಕೈ ಹಿಡಿಯುತ್ತಿರುವ ಚೇತನ್ ಮದುವೆ ತಯಾರಿ ಹೇಗಿದೆ, ಯಾವಾಗ, ಎಲ್ಲಿ ಹಸೆಮಣೆ ಏರುತ್ತಿದ್ದಾರೆ ಗೊತ್ತಾ? ಮುಂದೆ ಓದಿ..

  ಅನಾಥಾಶ್ರಮದ ಮಕ್ಕಳ ಸಮ್ಮುಖದಲ್ಲಿ ಮದುವೆ ಆಗಲಿದ್ದಾರೆ ಚೇತನ್: ಹುಡುಗಿ ಯಾರು.?ಅನಾಥಾಶ್ರಮದ ಮಕ್ಕಳ ಸಮ್ಮುಖದಲ್ಲಿ ಮದುವೆ ಆಗಲಿದ್ದಾರೆ ಚೇತನ್: ಹುಡುಗಿ ಯಾರು.?

  ಫೆಬ್ರವರಿಯಲ್ಲಿ ಮದುವೆ

  ಫೆಬ್ರವರಿಯಲ್ಲಿ ಮದುವೆ

  ನಟ ಚೇತನ್ ಮದುವೆ ಆಗುತ್ತಿದ್ದಾರೆ ಎನ್ನುವ ಸುದ್ದಿ ಈಗಾಗಲೆ ಬಹುತೇಕರಿಗೆ ಗೊತ್ತಾಗಿದೆ. ಆದರೆ ಯಾವಗ ಎನ್ನುವ ಮಾಹಿತಿ ಬಹಿರಂಗವಾಗಿರಲಿಲ್ಲ. ಚೇತನ್ ಫೆಬ್ರವರಿ ತಿಂಗಳಲ್ಲಿ ಹಸೆ ಮಣೆ ಏರುತ್ತಿದ್ದಾರೆ. ಫೆಬ್ರವರಿ 2 ಭಾನುವಾರ ಸಂಜೆ ಗೆಳತಿ ಮೇಘಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

  ಅನಾಥಾಶ್ರಮದ ಮಕ್ಕಳ ಸಮ್ಮುಖದಲ್ಲಿ ಮದುವೆ

  ಅನಾಥಾಶ್ರಮದ ಮಕ್ಕಳ ಸಮ್ಮುಖದಲ್ಲಿ ಮದುವೆ

  ಸಮಾಜಮುಖಿ ಕೆಲಸಗಳಲ್ಲಿ ಗುರುತಿಸಿಕೊಂಡಿರುವ ಚೇತನ್, ಸರಳವಾಗಿ ಮದುವೆ ಆಗಲು ನಿರ್ಧರಿಸಿದ್ದಾರೆ. ವಲ್ಲಭ್ ನಿಕೇತನ ವಿನೋಬಾ ಭಾವೆ ಆಶ್ರಮದ ಮಕ್ಕಳು ಮತ್ತು ವೃದ್ಧರ ಸಮ್ಮುಖದಲ್ಲಿ ವಿವಾಹಬಂಧನಕ್ಕೆ ಒಳಗಾಗಲಿದ್ದಾರೆ. ಚೇತನ್ ಮತ್ತು ಮೇಘಾ ಮದುವೆ ಫೆಬ್ರವರಿ 2 ರಂದು ನಡೆಯುತ್ತಿದ್ದು, ಸಂಜೆ 6 ಗಂಟೆಗೆ ಇಬ್ಬರು ಹಸೆಮಣೆ ಏರಲಿದ್ದಾರೆ.

  'ಆ ದಿನಗಳು' ಚೇತನ್ ಮದುವೆ ಆಗಲಿರುವ ಅಸ್ಸಾಂ ಮೂಲದ ಹುಡುಗಿ ಇವರೇ.!'ಆ ದಿನಗಳು' ಚೇತನ್ ಮದುವೆ ಆಗಲಿರುವ ಅಸ್ಸಾಂ ಮೂಲದ ಹುಡುಗಿ ಇವರೇ.!

  ಮದುವೆಯ ವಿಶೇಷತೆಗಳು

  ಮದುವೆಯ ವಿಶೇಷತೆಗಳು

  ಆಡಂಬರ, ಅಬ್ಬರ ವಿಲ್ಲದೆ ಸರಳವಾಗಿ ಅನಾಥಾಶ್ರಮದಲ್ಲಿ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಡುತ್ತಿರುವ ಚೇತನ್ ಮದುವೆಯಲ್ಲಿ ಒಂದಿಷ್ಟು ವಿಶೇಷತೆಗಳು ಇವೆ. ವಚನ ಗಾಯನ, ಸೂಫಿ ಗಾಯನ, ಕೊರಗ ನೃತ್ಯ, ಲಂಬಾಣಿ ನೃತ್ಯ, ಸಿದ್ಧಿ ನೃತ್ಯ ಮತ್ತು ಪುಸ್ತಕ ಪ್ರದರ್ಶನ ಏರ್ಪಡಿಸಲಾಗಿದೆ.

  ಸುಮಲತಾ ಪರ ನಿಂತಿರುವ ಸ್ಟಾರ್ ನಟರ ನಡೆ ಪ್ರಶ್ನಿಸಿದ ನಟ ಚೇತನ್ಸುಮಲತಾ ಪರ ನಿಂತಿರುವ ಸ್ಟಾರ್ ನಟರ ನಡೆ ಪ್ರಶ್ನಿಸಿದ ನಟ ಚೇತನ್

  ಅಸ್ಸಾಂ ಮೂಲದ ಯುವತಿ ಮೇಘಾ

  ಅಸ್ಸಾಂ ಮೂಲದ ಯುವತಿ ಮೇಘಾ

  ನಟ ಚೇತನ್ ಅವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಎರಡು ವರ್ಷಗಳಿಂದ ಅಸ್ಸಾಂ ಮೂಲದ ಯುವತಿ ಮೇಘಾ ಅವರನ್ನು ಚೇತನ್ ಪ್ರೀತಿಸುತ್ತಿದ್ದಾರೆ. ಇಬ್ಬರ ಪ್ರೀತಿಗೆ ಕುಟುಂಬ ಸಮ್ಮತಿ ಸಿಕ್ಕಿಮೇಲೆ ಮದುವೆ ನಿರ್ಧಾರ ಮಾಡಿದ್ದಾರೆ. ಮೇಘಾ ಕೂಡ ಸಾಮಾಜಿಕ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ.

  English summary
  Kannada Actor Chetan Kumar to tie the knot with his sweetheart Megha in February 2nd.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X