ಅನಾಥಾಶ್ರಮದ ಮಕ್ಕಳಿಗೆ ಹಾಸಿಗೆ ನೀಡಿದ ನಟ ಚೇತನ್
ನಟ ಚೇತನ್ ಈಗಾಗಲೇ ತಮ್ಮ ಸಾಮಾಜಿಕ ಕೆಲಸಗಳ ಮೂಲಕ ಹಾಗೂ ಹೋರಾಟಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಇದೀಗ ಅವರ ಸಾಮಾಜಿಕ ಕೆಲಸಕ್ಕೆ ಅವರ ಭಾವಿ ಪತ್ನಿ ಕೂಡ ಕೈ ಜೋಡಿಸಿದ್ದಾರೆ.
Recommended Video
ಅನಾಥಾಶ್ರಮದ ಮಕ್ಕಳಿಗೆ ಚೇತನ್ ಹಾಸಿಗೆ ನೀಡಿದ್ದಾರೆ. ಮಕ್ಕಳಿಗೆ ಸರಿಯಾಗಿ ಮಲಗಲು ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಈ ಕೆಲಸದ ಮೂಲಕ ಈ ಜೋಡಿ ಖುಷಿಪಟ್ಟಿದೆ. ಈ ಬಗ್ಗೆ ಫೇಸ್ ಬುಕ್ ನಲ್ಲಿ ಚೇತನ್ ಬರೆದುಕೊಂಡಿದ್ದಾರೆ.
''ಮೇಘ, ವಿನಯ್, ಮತ್ತು ನಾನು ಕೆಲಸ ಮಾಡುತ್ತಿದ್ದೇವೆ. ಆಶ್ರಮ ಮಕ್ಕಳಿಗೆ ಹಾಸಿಗೆ ನೀಡಲು ನಾವು ತಯಾರಾಗುತ್ತಿದ್ದೇವೆ.'' ಎಂದಿರುವ ಅವರು ಹಾಸಿಗೆ ಹೊತ್ತ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಕೆಲಸಕ್ಕೆ ಸಹಕಾರ ನೀಡಿದ ಪುನೀತ್ ಎಂಬುವವರಿಗೆ ಧನ್ಯವಾದ ತಿಳಿಸಿದ್ದಾರೆ.

ಚೇತನ್ ಹಾಗೂ ಮೇಘ ಮದುವೆಗೆ ಕೆಲವೇ ದಿನಗಳು ಬಾಕಿ ಇದೆ. ಫೆಬ್ರವರಿ 2 ರಂದು ಚೇತನ್ ಮತ್ತು ಮೇಘ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಅನಾಥಾಶ್ರಮದಲ್ಲಿ ಅವರ ವಿವಾಹ ಮಹೋತ್ಸವ ನಡೆಯಲಿದೆ.
ಚೇತನ್ ಭಾವಿ ಪತ್ನಿ ಮೇಘ ಅಸ್ಸಾಂ ರಾಜ್ಯದವರು. ಪರಸ್ಪರ ಇಷ್ಟಪಟ್ಟ ಈ ಜೋಡಿಯದ್ದು ಪ್ರೇಮ ವಿವಾಹವಾಗಿದೆ.


Click it and Unblock the Notifications











