For Quick Alerts
  ALLOW NOTIFICATIONS  
  For Daily Alerts

  ಅನಾಥಾಶ್ರಮದ ಮಕ್ಕಳಿಗೆ ಹಾಸಿಗೆ ನೀಡಿದ ನಟ ಚೇತನ್

  |

  ನಟ ಚೇತನ್ ಈಗಾಗಲೇ ತಮ್ಮ ಸಾಮಾಜಿಕ ಕೆಲಸಗಳ ಮೂಲಕ ಹಾಗೂ ಹೋರಾಟಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಇದೀಗ ಅವರ ಸಾಮಾಜಿಕ ಕೆಲಸಕ್ಕೆ ಅವರ ಭಾವಿ ಪತ್ನಿ ಕೂಡ ಕೈ ಜೋಡಿಸಿದ್ದಾರೆ.

  ಅನಾಥ ಮಕ್ಕಳೊಂದಿಗೆ ಚೇತನ್ ಪ್ರೀ ವೆಡ್ಡಿಂಗ್ ಫೋಟೋ ಶೂಟ್ | FILMIBEAT KANNADA

  ಅನಾಥಾಶ್ರಮದ ಮಕ್ಕಳಿಗೆ ಚೇತನ್ ಹಾಸಿಗೆ ನೀಡಿದ್ದಾರೆ. ಮಕ್ಕಳಿಗೆ ಸರಿಯಾಗಿ ಮಲಗಲು ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಈ ಕೆಲಸದ ಮೂಲಕ ಈ ಜೋಡಿ ಖುಷಿಪಟ್ಟಿದೆ. ಈ ಬಗ್ಗೆ ಫೇಸ್ ಬುಕ್ ನಲ್ಲಿ ಚೇತನ್ ಬರೆದುಕೊಂಡಿದ್ದಾರೆ.

  'ಆ ದಿನಗಳು' ಚೇತನ್ ಮದುವೆ ಆಗಲಿರುವ ಅಸ್ಸಾಂ ಮೂಲದ ಹುಡುಗಿ ಇವರೇ.!'ಆ ದಿನಗಳು' ಚೇತನ್ ಮದುವೆ ಆಗಲಿರುವ ಅಸ್ಸಾಂ ಮೂಲದ ಹುಡುಗಿ ಇವರೇ.!

  ''ಮೇಘ, ವಿನಯ್, ಮತ್ತು ನಾನು ಕೆಲಸ ಮಾಡುತ್ತಿದ್ದೇವೆ. ಆಶ್ರಮ ಮಕ್ಕಳಿಗೆ ಹಾಸಿಗೆ ನೀಡಲು ನಾವು ತಯಾರಾಗುತ್ತಿದ್ದೇವೆ.'' ಎಂದಿರುವ ಅವರು ಹಾಸಿಗೆ ಹೊತ್ತ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಕೆಲಸಕ್ಕೆ ಸಹಕಾರ ನೀಡಿದ ಪುನೀತ್ ಎಂಬುವವರಿಗೆ ಧನ್ಯವಾದ ತಿಳಿಸಿದ್ದಾರೆ.

  ಚೇತನ್ ಹಾಗೂ ಮೇಘ ಮದುವೆಗೆ ಕೆಲವೇ ದಿನಗಳು ಬಾಕಿ ಇದೆ. ಫೆಬ್ರವರಿ 2 ರಂದು ಚೇತನ್ ಮತ್ತು ಮೇಘ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಅನಾಥಾಶ್ರಮದಲ್ಲಿ ಅವರ ವಿವಾಹ ಮಹೋತ್ಸವ ನಡೆಯಲಿದೆ.

  ಅನಾಥಾಶ್ರಮದ ಮಕ್ಕಳ ಸಮ್ಮುಖದಲ್ಲಿ ಮದುವೆ ಆಗಲಿದ್ದಾರೆ ಚೇತನ್: ಹುಡುಗಿ ಯಾರು.?ಅನಾಥಾಶ್ರಮದ ಮಕ್ಕಳ ಸಮ್ಮುಖದಲ್ಲಿ ಮದುವೆ ಆಗಲಿದ್ದಾರೆ ಚೇತನ್: ಹುಡುಗಿ ಯಾರು.?

  ಚೇತನ್ ಭಾವಿ ಪತ್ನಿ ಮೇಘ ಅಸ್ಸಾಂ ರಾಜ್ಯದವರು. ಪರಸ್ಪರ ಇಷ್ಟಪಟ್ಟ ಈ ಜೋಡಿಯದ್ದು ಪ್ರೇಮ ವಿವಾಹವಾಗಿದೆ.

  English summary
  Kannada actor Chetan provide mattresses to Anathashrama children.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X