ಸರ್ಜಾ ಮಗಳ ಪರೋಕ್ಷ ಆರೋಪಕ್ಕೆ 'ಆ ದಿನಗಳು' ಚೇತನ್ ನೇರ ಉತ್ತರ
ಶ್ರುತಿ ಹರಿಹರನ್ ಮತ್ತು ಅರ್ಜುನ್ ಸರ್ಜಾ ನಡುವಿನ ಮೀಟೂ ವಿವಾದ ದಿನದಿಂದ ದಿನಕ್ಕೆ ಸ್ವರೂಪ ಬದಲಿಸುತ್ತಿದೆ. ನಟ ಸರ್ಜಾ ಪರವಾಗಿ ಮಾತನಾಡಿದ್ದ ಅರ್ಜುನ್ ಸರ್ಜಾ ಮಗಳು ಐಶ್ವರ್ಯ ನಟ ಚೇತನ್ ಮೇಲೆ ಗಂಭೀರ ಆರೋಪ ಮಾಡಿದ್ದರು.
'ಪ್ರೇಮ ಬರಹ' ಚಿತ್ರದ ಫೋಟೋಶೂಟ್ ವೇಳೆ ನಟ ಚೇತನ್ 'ನನ್ನ ಬೆನ್ನು, ಸೊಂಟ ಮುಟ್ಟಿದ್ದರು, ಡಿನ್ನರ್ ಕರೆದಿದ್ದರು' ಎಂದು ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದರು.
ಶೂಟ್ ಮಾಡಬೇಕಾದರೇ ಇದು ಸಾಮನ್ಯ. ಆದ್ರೆ, ಮೀಟೂ ಆರೋಪ ಮಾಡಿದ್ರೆ ಸರಿನಾ ಎಂದು ಪಶ್ನಿಸಿದ್ದರು. ಇದಕ್ಕೀಗ ನಟ ಚೇತನ್ ಪ್ರತಿಕ್ರಿಯಿಸಿದ್ದಾರೆ. ಸರ್ಜಾ ಮಗಳ ಪರೋಕ್ಷ ಆರೋಪಕ್ಕೆ ನೇರವಾಗಿ ಉತ್ತರಿಸಿದ್ದಾರೆ. ಹಾಗಿದ್ರೆ, ಸರ್ಜಾ ಮಗಳ ಮಾತಿಗೆ ಚೇತನ್ ಏನಂದ್ರು.? ಮುಂದೆ ಓದಿ.....

ನಾನು ಸೊಂಟ ಮುಟ್ಟಿಲ್ಲ
'ನಾನು ಐಶ್ವರ್ಯ ಸರ್ಜಾ ಅವರ ಸೊಂಟ ಮತ್ತು ಬೆನ್ನು ಮುಟ್ಟಿಲ್ಲ, ನಾನು ಚಿತ್ರದ ನಿರ್ದೇಶಕ ಹಾಗೂ ಐಶ್ವರ್ಯ ಅವರ ತಂದೆ ಅರ್ಜುನ್ ಸರ್ಜಾ ಅವರ ಸೂಚನೆಯಂತೆ ನಡೆದುಕೊಂಡಿದ್ದೇನೆ. ಇನ್ನೂ ಊಟಕ್ಕೆ ನಾನು ಕರೆದಿಲ್ಲ, ನಾವೆಲ್ಲರೂ ಜೊತೆಯಲ್ಲಿ ಕೂತು ಊಟ ಮಾಡಿದ್ದೀವಿ. ಸರ್ಜಾ ಅವರೇ ಅವರ ಮನೆಗೆ ಊಟಕ್ಕೆ ಕರೆದಿದ್ದರು'' ಎಂದು ಚೇತನ್ ಸ್ಪಷ್ಟನೆ ನೀಡಿದ್ದಾರೆ.

ಹೇಳಿಕೆಯ ಉದ್ದೇಶ ಗೊತ್ತಿಲ್ಲ
'ಐಶ್ವರ್ಯ ಅವರು ಯಾವ ಉದ್ದೇಶದಿಂದ ಈ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ಅವರೊಬ್ಬ ಒಳ್ಳೆಯ ಕಲಾವಿದೆ. 'ಪ್ರೇಮ ಬರಹ' ಚಿತ್ರದಲ್ಲಿ ಬಹಳ ಚೆನ್ನಾಗಿ ಅಭಿನಯಿಸಿದ್ದಾರೆ. ಒಳ್ಳೆಯ ಭವಿಷ್ಯ ಇದೆ' ಎಂದು ಮೆಚ್ಚಿಕೊಂಡ ಚೇತನ್ ಗೌರವಯುತವಾಗಿ ನಡೆದುಕೊಳ್ಳಿ ಎಂದರು.

ಇದು ಗಂಭೀರವಾದ ಸಮಸ್ಯೆ
''ಆದ್ರೆ, ಈ ರೀತಿ ಹೇಳಿಕೆಗಳನ್ನ ನೀಡುವುದ್ರಿಂದ ಅವರ ಕುಟುಂಬದ ಮೇಲೆ ಗೌರವ ಕಡಿಮೆ ಮಾಡುತ್ತೆ. ಈ ರೀತಿ ಮಾತುಗಳು ಬರದೇ ಇರಲಿ. ಮೀಟೂ ಎನ್ನುವುದು ಬಹಳ ಗಂಭೀರವಾದ ವಿಷ್ಯ ಈ ಸಮಸ್ಯೆಗೆ ಎಲ್ಲಿ ಪರಿಹಾರ ಸಿಗುತ್ತೆ ಎಂದು ಗಮನಿಸಿ ನ್ಯಾಯ ಒದಗಿಸುವುದು ನಮ್ಮೆಲ್ಲರ ಕರ್ತವ್ಯ'' ಎಂದು ಚೇತನ್ ಪ್ರತಿಕ್ರಿಯಿಸಿದ್ದಾರೆ.

'ಪ್ರೇಮ್ ಬರಹ'ದಿಂದ ದೂರವಾಗಿದ್ದ ಚೇತನ್
ಅರ್ಜುನ್ ಸರ್ಜಾ ಅವರ ಮಗಳು ಐಶ್ವರ್ಯ ಅಭಿನಯದ ಚೊಚ್ಚಲ ಕನ್ನಡ ಸಿನಿಮಾ 'ಪ್ರೇಮ ಬರಹ'. ಈ ಚಿತ್ರದಲ್ಲಿ ಚಂದನ್ ನಾಯಕನಾಗಿ ಕಾಣಿಸಿಕೊಂಡಿದ್ದರು. ಚಂದನ್ ಗೂ ಮುಂಚೆ 'ಆ ದಿನಗಳು' ಖ್ಯಾತಿಯ ಚೇತನ್ ನಾಯಕನಾಗಿ ಆಯ್ಕೆಯಾಗಿದ್ದರು. ಫೋಟೋಶೂಟ್ ಕೂಡ ಆಗಿತ್ತು. ಆದ್ರೆ, ಅಂತಿಮ ಕ್ಷಣದಲ್ಲಿ ಚೇತನ್ ಅವರನ್ನ ಈ ಚಿತ್ರದಿಂದ ಕೈಬಿಡಲಾಗಿತ್ತು.

ದ್ವೇಷದ ನಂಟು ಅಂಟಿತ್ತು
ಇನ್ನು 'ಪ್ರೇಮ ಬರಹ' ಚಿತ್ರದಿಂದ ಕೈಬಿಟ್ಟ ಕಾರಣ ನಟ ಚೇತನ್ ಅವರು, ಶ್ರುತಿ ಹರಿಹರನ್ ಜೊತೆ ಸೇರಿ ಸರ್ಜಾ ಮೇಲೆ ಮೀಟೂ ಆರೋಪ ಮಾಡಿದ್ದಾರೆ. ಅರ್ಜುನ್ ಸರ್ಜಾ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರಬೇಕು ಎಂದು ಷಡ್ಯಂತ್ರ ಮಾಡಿದ್ದಾರೆ ಎಂದು ಅವರ ಕುಟುಂಬಸ್ಥರು ಆರೋಪಿಸಿದ್ದರು. ಇದನ್ನ ತಳ್ಳಿ ಹಾಕಿದ್ದ ಚೇತನ್ ನಾನು ನೊಂದ ಹೆಣ್ಣಿನ ಪರವಾಗಿ ಇದ್ದೀನಿ ಅಷ್ಟೇ ಎಂದಿದ್ದರು.


Click it and Unblock the Notifications











