For Quick Alerts
  ALLOW NOTIFICATIONS  
  For Daily Alerts

  ಸರ್ಜಾ ಮಗಳ ಪರೋಕ್ಷ ಆರೋಪಕ್ಕೆ 'ಆ ದಿನಗಳು' ಚೇತನ್ ನೇರ ಉತ್ತರ

  |

  ಶ್ರುತಿ ಹರಿಹರನ್ ಮತ್ತು ಅರ್ಜುನ್ ಸರ್ಜಾ ನಡುವಿನ ಮೀಟೂ ವಿವಾದ ದಿನದಿಂದ ದಿನಕ್ಕೆ ಸ್ವರೂಪ ಬದಲಿಸುತ್ತಿದೆ. ನಟ ಸರ್ಜಾ ಪರವಾಗಿ ಮಾತನಾಡಿದ್ದ ಅರ್ಜುನ್ ಸರ್ಜಾ ಮಗಳು ಐಶ್ವರ್ಯ ನಟ ಚೇತನ್ ಮೇಲೆ ಗಂಭೀರ ಆರೋಪ ಮಾಡಿದ್ದರು.

  'ಪ್ರೇಮ ಬರಹ' ಚಿತ್ರದ ಫೋಟೋಶೂಟ್ ವೇಳೆ ನಟ ಚೇತನ್ 'ನನ್ನ ಬೆನ್ನು, ಸೊಂಟ ಮುಟ್ಟಿದ್ದರು, ಡಿನ್ನರ್ ಕರೆದಿದ್ದರು' ಎಂದು ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದರು.

  ಶ್ರುತಿ ಹರಿಹರನ್ ಗೆ ಪ್ರಶ್ನೆಗಳ ಬಾಣಗಳನ್ನು ತೂರಿದ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ.! ಶ್ರುತಿ ಹರಿಹರನ್ ಗೆ ಪ್ರಶ್ನೆಗಳ ಬಾಣಗಳನ್ನು ತೂರಿದ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ.!

  ಶೂಟ್ ಮಾಡಬೇಕಾದರೇ ಇದು ಸಾಮನ್ಯ. ಆದ್ರೆ, ಮೀಟೂ ಆರೋಪ ಮಾಡಿದ್ರೆ ಸರಿನಾ ಎಂದು ಪಶ್ನಿಸಿದ್ದರು. ಇದಕ್ಕೀಗ ನಟ ಚೇತನ್ ಪ್ರತಿಕ್ರಿಯಿಸಿದ್ದಾರೆ. ಸರ್ಜಾ ಮಗಳ ಪರೋಕ್ಷ ಆರೋಪಕ್ಕೆ ನೇರವಾಗಿ ಉತ್ತರಿಸಿದ್ದಾರೆ. ಹಾಗಿದ್ರೆ, ಸರ್ಜಾ ಮಗಳ ಮಾತಿಗೆ ಚೇತನ್ ಏನಂದ್ರು.? ಮುಂದೆ ಓದಿ.....

  ನಾನು ಸೊಂಟ ಮುಟ್ಟಿಲ್ಲ

  ನಾನು ಸೊಂಟ ಮುಟ್ಟಿಲ್ಲ

  'ನಾನು ಐಶ್ವರ್ಯ ಸರ್ಜಾ ಅವರ ಸೊಂಟ ಮತ್ತು ಬೆನ್ನು ಮುಟ್ಟಿಲ್ಲ, ನಾನು ಚಿತ್ರದ ನಿರ್ದೇಶಕ ಹಾಗೂ ಐಶ್ವರ್ಯ ಅವರ ತಂದೆ ಅರ್ಜುನ್ ಸರ್ಜಾ ಅವರ ಸೂಚನೆಯಂತೆ ನಡೆದುಕೊಂಡಿದ್ದೇನೆ. ಇನ್ನೂ ಊಟಕ್ಕೆ ನಾನು ಕರೆದಿಲ್ಲ, ನಾವೆಲ್ಲರೂ ಜೊತೆಯಲ್ಲಿ ಕೂತು ಊಟ ಮಾಡಿದ್ದೀವಿ. ಸರ್ಜಾ ಅವರೇ ಅವರ ಮನೆಗೆ ಊಟಕ್ಕೆ ಕರೆದಿದ್ದರು'' ಎಂದು ಚೇತನ್ ಸ್ಪಷ್ಟನೆ ನೀಡಿದ್ದಾರೆ.

  ಸರ್ಜಾ ವಿರುದ್ಧ ಆರು ಜನರನ್ನ ಸಾಕ್ಷಿಯನ್ನಾಗಿಸಿದ ಶ್ರುತಿ ಹರಿಹರನ್.! ಸರ್ಜಾ ವಿರುದ್ಧ ಆರು ಜನರನ್ನ ಸಾಕ್ಷಿಯನ್ನಾಗಿಸಿದ ಶ್ರುತಿ ಹರಿಹರನ್.!

  ಹೇಳಿಕೆಯ ಉದ್ದೇಶ ಗೊತ್ತಿಲ್ಲ

  ಹೇಳಿಕೆಯ ಉದ್ದೇಶ ಗೊತ್ತಿಲ್ಲ

  'ಐಶ್ವರ್ಯ ಅವರು ಯಾವ ಉದ್ದೇಶದಿಂದ ಈ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ಅವರೊಬ್ಬ ಒಳ್ಳೆಯ ಕಲಾವಿದೆ. 'ಪ್ರೇಮ ಬರಹ' ಚಿತ್ರದಲ್ಲಿ ಬಹಳ ಚೆನ್ನಾಗಿ ಅಭಿನಯಿಸಿದ್ದಾರೆ. ಒಳ್ಳೆಯ ಭವಿಷ್ಯ ಇದೆ' ಎಂದು ಮೆಚ್ಚಿಕೊಂಡ ಚೇತನ್ ಗೌರವಯುತವಾಗಿ ನಡೆದುಕೊಳ್ಳಿ ಎಂದರು.

  ಸರ್ಜಾ ವಿರುದ್ಧ ಇಷ್ಟು ದಿನ ಹೇಳಿದ್ದು ಒಂದೇ, ಈಗ ಹೇಳ್ತಿರೋದು ಐದು ಆರೋಪ.! ಸರ್ಜಾ ವಿರುದ್ಧ ಇಷ್ಟು ದಿನ ಹೇಳಿದ್ದು ಒಂದೇ, ಈಗ ಹೇಳ್ತಿರೋದು ಐದು ಆರೋಪ.!

  ಇದು ಗಂಭೀರವಾದ ಸಮಸ್ಯೆ

  ಇದು ಗಂಭೀರವಾದ ಸಮಸ್ಯೆ

  ''ಆದ್ರೆ, ಈ ರೀತಿ ಹೇಳಿಕೆಗಳನ್ನ ನೀಡುವುದ್ರಿಂದ ಅವರ ಕುಟುಂಬದ ಮೇಲೆ ಗೌರವ ಕಡಿಮೆ ಮಾಡುತ್ತೆ. ಈ ರೀತಿ ಮಾತುಗಳು ಬರದೇ ಇರಲಿ. ಮೀಟೂ ಎನ್ನುವುದು ಬಹಳ ಗಂಭೀರವಾದ ವಿಷ್ಯ ಈ ಸಮಸ್ಯೆಗೆ ಎಲ್ಲಿ ಪರಿಹಾರ ಸಿಗುತ್ತೆ ಎಂದು ಗಮನಿಸಿ ನ್ಯಾಯ ಒದಗಿಸುವುದು ನಮ್ಮೆಲ್ಲರ ಕರ್ತವ್ಯ'' ಎಂದು ಚೇತನ್ ಪ್ರತಿಕ್ರಿಯಿಸಿದ್ದಾರೆ.

  ಶ್ರುತಿ ಈಗ 'ವೈಫ್ ಆಫ್ ರಾಮ್ ಕುಮಾರ್', ಯಾವಾಗ ಮದ್ವೆ ಆಯ್ತು.? ಶ್ರುತಿ ಈಗ 'ವೈಫ್ ಆಫ್ ರಾಮ್ ಕುಮಾರ್', ಯಾವಾಗ ಮದ್ವೆ ಆಯ್ತು.?

  'ಪ್ರೇಮ್ ಬರಹ'ದಿಂದ ದೂರವಾಗಿದ್ದ ಚೇತನ್

  'ಪ್ರೇಮ್ ಬರಹ'ದಿಂದ ದೂರವಾಗಿದ್ದ ಚೇತನ್

  ಅರ್ಜುನ್ ಸರ್ಜಾ ಅವರ ಮಗಳು ಐಶ್ವರ್ಯ ಅಭಿನಯದ ಚೊಚ್ಚಲ ಕನ್ನಡ ಸಿನಿಮಾ 'ಪ್ರೇಮ ಬರಹ'. ಈ ಚಿತ್ರದಲ್ಲಿ ಚಂದನ್ ನಾಯಕನಾಗಿ ಕಾಣಿಸಿಕೊಂಡಿದ್ದರು. ಚಂದನ್ ಗೂ ಮುಂಚೆ 'ಆ ದಿನಗಳು' ಖ್ಯಾತಿಯ ಚೇತನ್ ನಾಯಕನಾಗಿ ಆಯ್ಕೆಯಾಗಿದ್ದರು. ಫೋಟೋಶೂಟ್ ಕೂಡ ಆಗಿತ್ತು. ಆದ್ರೆ, ಅಂತಿಮ ಕ್ಷಣದಲ್ಲಿ ಚೇತನ್ ಅವರನ್ನ ಈ ಚಿತ್ರದಿಂದ ಕೈಬಿಡಲಾಗಿತ್ತು.

  ಸರ್ಜಾ ವಿರುದ್ಧ ಶ್ರುತಿ ದೂರು: ಯುಬಿ ಸಿಟಿ ಘಟನೆ ಬಿಚ್ಚಿಟ್ಟ ನಟಿ ಸರ್ಜಾ ವಿರುದ್ಧ ಶ್ರುತಿ ದೂರು: ಯುಬಿ ಸಿಟಿ ಘಟನೆ ಬಿಚ್ಚಿಟ್ಟ ನಟಿ

  ದ್ವೇಷದ ನಂಟು ಅಂಟಿತ್ತು

  ದ್ವೇಷದ ನಂಟು ಅಂಟಿತ್ತು

  ಇನ್ನು 'ಪ್ರೇಮ ಬರಹ' ಚಿತ್ರದಿಂದ ಕೈಬಿಟ್ಟ ಕಾರಣ ನಟ ಚೇತನ್ ಅವರು, ಶ್ರುತಿ ಹರಿಹರನ್ ಜೊತೆ ಸೇರಿ ಸರ್ಜಾ ಮೇಲೆ ಮೀಟೂ ಆರೋಪ ಮಾಡಿದ್ದಾರೆ. ಅರ್ಜುನ್ ಸರ್ಜಾ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರಬೇಕು ಎಂದು ಷಡ್ಯಂತ್ರ ಮಾಡಿದ್ದಾರೆ ಎಂದು ಅವರ ಕುಟುಂಬಸ್ಥರು ಆರೋಪಿಸಿದ್ದರು. ಇದನ್ನ ತಳ್ಳಿ ಹಾಕಿದ್ದ ಚೇತನ್ ನಾನು ನೊಂದ ಹೆಣ್ಣಿನ ಪರವಾಗಿ ಇದ್ದೀನಿ ಅಷ್ಟೇ ಎಂದಿದ್ದರು.

  ಶ್ರುತಿ ಮೀಟೂ ವಿವಾದದ ಬಗ್ಗೆ ಪ್ರಿಯಾಂಕಾಗೂ ಕಾಡ್ತಿದೆ 2 ಅನುಮಾನ.! ಶ್ರುತಿ ಮೀಟೂ ವಿವಾದದ ಬಗ್ಗೆ ಪ್ರಿಯಾಂಕಾಗೂ ಕಾಡ್ತಿದೆ 2 ಅನುಮಾನ.!

  English summary
  I Haven't Touched Aishwarya Sarja's Waist Or Back, It Was Just A Photoshoot: Actor Chetan reply to arjun sarja daughter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X