ಅನಾಥ ಮಕ್ಕಳೊಂದಿಗೆ ಚೇತನ್ ಪ್ರೀ ವೆಡ್ಡಿಂಗ್ ಫೋಟೋ ಶೂಟ್
Recommended Video
ಅನಾಥಾಶ್ರಮದಲ್ಲಿ ಮದುವೆ ಆಗುತ್ತೇನೆ ಎಂದು ತಿಳಿಸಿದ್ದ ನಟ ಚೇತನ್ ಈಗ ಆ ಮಕ್ಕಳ ಜೊತೆಗೆಯೇ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಮಕ್ಕಳ ಜೊತೆ ಚೇತನ್ ಹಾಗೂ ಭಾವಿ ಪತ್ನಿ ಇರುವ ಫೋಟೋಗಳನ್ನು ಕ್ಯಾಮರಾ ಮ್ಯಾನ್ ಕ್ಲಿಕ್ ಮಾಡಿದ್ದಾರೆ.
ಮದುವೆಗೆ ಮುನ್ನ ಮಾಡಿಸುವ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಈಗ ಟ್ರೆಂಡ್. ಸಿನಿಮಾ ಸ್ಟಾರ್ ಗಳು ಬೇರೆ ಬೇರೆ ರೀತಿ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಪ್ಲಾನ್ ಮಾಡುತ್ತಾರೆ. ಆದರೆ, ಚೇತನ್ ಅನಾಥ ಮಕ್ಕಳ ಜೊತೆಗೆ ಫೋಟೋ ತೆಗೆಸಿಕೊಂಡಿದ್ದಾರೆ.
ಮಕ್ಕಳ ಜೊತೆ ಆಟ ಆಡುವ ಫೋಟೋಗಳು ಕ್ಯೂಟ್ ಆಗಿದೆ. ಮದುವೆ ಸಂಭ್ರಮವನ್ನು ಮಕ್ಕಳ ಜೊತೆಗೆ ಚೇತನ್ ಪ್ರಾರಂಭ ಮಾಡಿದ್ದಾರೆ. ಫೋಟೋಗಳು ತುಂಬ ನೈಜವಾಗಿ ಮೂಡಿಬಂದಿದೆ.

ಫೆಬ್ರವರಿ 2 ರಂದು ಚೇತನ್ ಹಾಗೂ ಮೇಘ ವಿವಾಹ ನಡೆಯಲಿದೆ. ವಲ್ಲಭ್ ನಿಕೇತನ ವಿನೋಬಾ ಭಾವೆ ಆಶ್ರಮದ ಮಕ್ಕಳು ಮತ್ತು ವೃದ್ಧರ ಸಮ್ಮುಖದಲ್ಲಿ ವಿವಾಹ ಬಂಧನಕ್ಕೆ ಒಳಗಾಗಲಿದ್ದಾರೆ. ಫೆಬ್ರವರಿ 2 ರಂದು, ಸಂಜೆ 6 ಗಂಟೆಗೆ ಇಬ್ಬರು ಹಸೆಮಣೆ ಏರಲಿದ್ದಾರೆ.

ನಟ ಚೇತನ್ ಅವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಎರಡು ವರ್ಷಗಳಿಂದ ಅಸ್ಸಾಂ ಮೂಲದ ಯುವತಿ ಮೇಘಾ ಅವರನ್ನು ಚೇತನ್ ಪ್ರೀತಿಸುತ್ತಿದ್ದಾರೆ. ಇಬ್ಬರ ಪ್ರೀತಿಗೆ ಕುಟುಂಬ ಸಮ್ಮತಿ ಸಿಕ್ಕಿ ಮದುವೆ ನಿರ್ಧಾರ ಮಾಡಿದ್ದಾರೆ. ಮೇಘಾ ಕೂಡ ಸಾಮಾಜಿಕ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ.


Click it and Unblock the Notifications











