For Quick Alerts
  ALLOW NOTIFICATIONS  
  For Daily Alerts

  ಹಾರರ್ ಚಿತ್ರಕ್ಕೆ ದರ್ಶನ್ ಕ್ಲಾಪ್ ಮಾಡಿದ್ರು

  By Suneetha
  |

  'ಪ್ಲಸ್' ಮತ್ತು 'ಜಾತ್ರೆ', ಚಿತ್ರಗಳ ಸತತ ಸೋಲಿನಿಂದ ಕಂಗೆಟ್ಟಿರುವ ನಟ ಚೇತನ್ ಚಂದ್ರ ಅವರು ಇದೀಗ 'ಸಂಯುಕ್ತ 2' ಎಂಬ ಸಿನಿಮಾದ ಮೂಲಕ ಮತ್ತೆ ತಮ್ಮ ಅದೃಷ್ಟ ಪರೀಕ್ಷೆ ಮಾಡಲು ಗಾಂಧಿನಗರಕ್ಕೆ ವಾಪಸಾಗಿದ್ದಾರೆ ಎಂದು ನಾವೇ ನಿಮಗೆ ಹೇಳಿದ್ವಿ.

  ಇದೀಗ 'ಸಂಯುಕ್ತ 2' ಎಂಬ ಹೊಸ ಪ್ರಾಜೆಕ್ಟ್ ಗೆ ಕಳೆದ ಶನಿವಾರ (ಫೆಬ್ರವರಿ 27) ರಂದು ಮೂಹೂರ್ತ ಕೂಡ ನೆರವೇರಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕ್ಲಾಪ್ ಮಾಡಿದ್ದಾರೆ.[ದರ್ಶನ್ ಅವರಿಗೆ ಚೇತನ್ ಚಂದ್ರ 'ಥ್ಯಾಂಕ್ಸ್' ಅಂದಿದ್ದೇಕೆ]

  ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಚೇತನ್ ಚಂದ್ರ ಅವರ 'ಸಂಯುಕ್ತ 2' ಚಿತ್ರಕ್ಕೆ ಮುಹೂರ್ತ ನೆರವೇರುವ ಮೂಲಕ ಚಿತ್ರದ ಶೂಟಿಂಗ್ ಗೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ.

  Actor Chethan Chandra is Thankful to Darshan

  ಅಂದಹಾಗೆ ಈ ಕಾರ್ಯಕ್ರಮಕ್ಕೆ ಬಾಕ್ಸಾಫೀಸ್ ಸುಲ್ತಾನ ದರ್ಶನ್ ಅವರು ಆಗಮಿಸಿ ಕ್ಲಾಪ್ ಮಾಡಿದ್ದಕ್ಕೆ ಹಾಗೂ ದರ್ಶನ್ ಅವರ ಸಂಪೂರ್ಣ ಸಹಕಾರ ಹಾಗು ಸಪೋರ್ಟ್ ನೋಡಿ ಫುಲ್ ಖುಷ್ ಆಗಿರುವ ಚೇತನ್ ಚಂದ್ರ ಅವರು ಮತ್ತೆ ಫೇಸ್ ಬುಕ್ಕಿನಲ್ಲಿ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.

  My #movie #Samyuktha2 was clapped n started by our #challenging_star_Darshan_anna. Thanks for ur support Anna 󾍛🏼.I...

  Posted by Chethan Chandra on Saturday, February 27, 2016

  ನಿರ್ದೇಶಕ ಅಭಿರಾಮ್ ಕಥೆ-ಚಿತ್ರಕಥೆ ಬರೆದು ಆಕ್ಷನ್-ಕಟ್ ಹೇಳಿರುವ 'ಸಂಯುಕ್ತ 2' ಚಿತ್ರಕ್ಕೆ ಚಿಕ್ಕೋಡಿ ಸಂಜಯ್ ಅವರು ಬಂಡವಾಳ ಹೂಡುತ್ತಿದ್ದಾರೆ. ಸಂಗೀತ ನಿರ್ದೇಶಕ ಕೆ.ವಿ ರವಿಚಂದ್ರ ಅವರು ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ.

  English summary
  After Jathre. Chethan Chandra is all set to sign a new movie. The actor's upcoming movie has been titled as 'Samyuktha 2' and it has been officially launched Feb 27 at Venkateshwara temple , Mahalalshmi layout. Special guest invited for the function is the 'Box Office Sultan' Darshan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X