ಅಪ್ಪು ಇಲ್ಲದೆ ಬಡವಾಯಿತು ಕನ್ನಡ ಚಿತ್ರರಂಗ

ಅಪ್ಪು ಇಲ್ಲದ ಚಿತ್ರರಂಗ ಬಡವಾಗಿದೆ. ಕನ್ನಡ ಚಿತ್ರ ತಾರೆಯರು ಅಪ್ಪು ಸಲುವಾಗಿ ಹಾಕುತ್ತಿದ್ದಾರೆ. ಪ್ರತಿಯೊಬ್ಬರು ಇದು ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಅವರು ಮತ್ತೇ ಹುಟ್ಟಿ ಬರಲಿ ಎನ್ನುತ್ತಿದ್ದಾರೆ.

ನಟ ಚೇತನ್‌ ಅಪ್ಪು ಬಗ್ಗೆ ತಮ್ಮ ಅಂತಾರಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. 'ಪುನೀತ್ ಅವರು ಹೇಳುವ ಸಾಕಷ್ಟು ವಿಚಾರಗಳು ನನಗೆ ದಾರಿ ದೀಪವಾಗಿದೆ. ಅವರಿಗೆ ವಿದ್ಯೆಯ ಪ್ರಾಮುಖ್ಯತೆ ತುಂಬಾ ಚೆನ್ನಾಗಿ ಗೊತ್ತಿತ್ತು. ವಿದ್ಯೆಗೆ ಹೆಚ್ಚಿನ ಮಹತ್ವವನ್ನು ನೀಡುತ್ತಿದ್ದರು. ಜೊತೆಗೆ ಗ್ರಾಮೀಣ ಭಾಗದ ಮಕ್ಕಳೆಲ್ಲರೂ ವಿದ್ಯಾವಂತರಾಗಬೇಕು ಅನ್ನುವ ಉದ್ದೇಶ ಇತ್ತು. ಅವರಿಗೆ ಇರೋ ಸ್ಟಾರ್ಟ್ ಡಮ್‌ಗೆ ದುಡ್ಡು ಮಾಡಲು ಎಂತಹ ಸಿನಿಮಾ ಬೇಕಾದರು ಮಾಡಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಕುಟುಂಬಗಳು ಕುಳಿತು ನೋಡುವಂತಹ ಸಿನಿಮಾಗಳನ್ನು ಮಾಡಿದ್ದಾರೆ. ಮನೆಯಲ್ಲಿ ಅಪ್ಪ, ಅಮ್ಮ ಮಕ್ಕಳು, ಅಜ್ಜಿ ಎಲ್ಲರೂ ಕೂತು ಅವರ ಸಿನಿಮಾಗಳನ್ನು ನೋಡಬಹುದು. ತಮ್ಮ ಸಿನಿಮಾಗಳಿಗೆ ಅವರೇ ಬಂಡವಾಳ ತೊಡಗಿಸಿಕೊಂಡು ಸಿನಿಮಾ ಮಾಡಬಹುದಿತ್ತು. ಆದರೆ ಅವರು ಪ್ರೊಡಕ್ಷನ್ ಮಾಡಿ ಬೇರೆಯವರಿಗೆ ಅವಕಾಶವನ್ನು ಕೊಟ್ಟರು. ತಮ್ಮ ತಂದೆಯ ಲೆಗೆಸಿ ಯನ್ನು ಮುಂದುವರೆಸಿ ಕೊಂಡು ಬಂದಂತಹವರು. ಜೊತೆಗೆ ಸಾಮಾಜಿಕ ಕಾರ್ಯಗಳ ಬಗ್ಗೆ ಕಾಳಜಿ ಇತ್ತು. ನಾನು ಕೈಗೊಂಡಂತಹ ಸಾಮಾಜಿಕ ಕಾರ್ಯಗಳಿಗೆ ಬೆನ್ನೆಲುಬಾಗಿದ್ದು ತನ್ನ ಕೈಲಾದ ಸಹಾಯವನ್ನು ಮಾಡುತ್ತೇನೆ ಅಂತ ಮುಂದೆ ಬಂದಿದ್ದರು. ಪುನೀತ್ ರಾಜಕುಮಾರ್ ಅವರು ಸಿನಿಮಾರಂಗವನ್ನು ಉತ್ತಮ ಸಿನಿಮಾರಂಗ ಆಗಿ ಮಾಡಬೇಕು ಅಂದುಕೊಂಡಿದ್ದರು ಆ ಕನಸನ್ನು ನಾವೆಲ್ಲ ಈಡೇರಿಸಬೇಕು. ಅವರು ನಮ್ಮ ಇಂಡಸ್ಟ್ರಿಯಲ್ಲಿ ಇದ್ದದ್ದೆ ನಮ್ಮ ಅದೃಷ್ಟ - ನಟ ಚೇತನ್

Actor Chethan, Pooja Gandhi, V.Nagendra Prasad condolence To Actor Puneeth Rajkumar

'ನಾನು ಏನು ಮಾತನಾಡುವ ಪರಿಸ್ಥಿತಿಯಲ್ಲಿ ಇಲ್ಲ. ದೇವರಿಗೆ ಕರುಣೆನೇ ಇಲ್ಲ'- ನಟ ದುನಿಯಾ ವಿಜಯ್

'ಮೂರು ದಿನದ ನಂತರ ನಮ್ಮ ಸಿನಿಮಾ ಸಾಂಗ್ ಹಾಡಿ ಕೊಡುತ್ತೇನೆ ಎಂದು ಹೇಳಿದ್ದರು. ರಾಘಣ್ಣ ನಮ್ಮ ಸಿನಿಮಾದಲ್ಲಿ ಅಭಿನಯಿಸುತ್ತಿದ್ದರು ಆಗ ರಾಘಣ್ಣ ಅವರನ್ನ ತುಂಬಾ ಮುತುವರ್ಜಿಯಿಂದ ಪುನೀತ್ ರಾಜಕುಮಾರ್ ವಿಚಾರಿಸುತ್ತಾ ಇದ್ದರು. ಫೋನ್ ಮಾಡಿ ಊಟ ತಿಂಡಿ ಏನ್ ಮಾಡಿದ್ರು, ಏನಿಲ್ಲ ಅಂತಾ ಸದಾ ಕೇಳುತ್ತಿದ್ದರು. ನಾವೆಲ್ಲರೂ ಶಾಂತರೀತಿಯಲ್ಲಿ ಅಪ್ಪು ಸರ್ ಅವರನ್ನು ಕಳಿಸಿಕೊಡೋಣ. ನೂರರಿಂದ ನೂರೈವತ್ತು ಬಾರಿ ಅಪ್ಪು ಸರ್ ಅವರನ್ನು ಭೇಟಿ ಮಾಡಿದ್ದೇನೆ. ಎಲ್ಲವೂ ನೆನಪಿದೆ. 3 ದಿನದಲ್ಲಿ ಸಾಂಗ್ ಮಾಡಿಕೊಡ್ತೀನಿ ಅಂತ ಹೇಳಿದವರು. ಇಂದು ಇಲ್ಲ ಎನ್ನುವುದು ದುಃಖದ ಸಂಗತಿ. ಎಲ್ಲರಿಗೂ ಕನೆಕ್ಟ್‌ ಆಗ್ತಾ ಇದ್ದಂತಹ ಸೂಪರ್‌ ಸ್ಟಾರ್‌. ಇವರ ನಿಧನ ಭಾರತೀಯ ಚಿತ್ರರಂಗಕ್ಕೆ ಇದು ದೊಡ್ಡ ನಷ್ಟ' - ನಟ ಪ್ರಥಮ್

Actor Chethan, Pooja Gandhi, V.Nagendra Prasad condolence To Actor Puneeth Rajkumar

'ಅಪ್ಪು ಸರ್ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಅಂತ ಗೊತ್ತಾದಾಗ ಇದು ಸುಳ್ಳು ಸುದ್ದಿ ಆಗಲಿ ಅಂತ ನಾನು ಕೂಡ ಕೇಳಿಕೊಂಡೆ. ನಾನು ಚಿಕ್ಕವಯಸ್ಸಿನಿಂದ ಅವರ ಡಾನ್ಸ್‌ ನೋಡಿಕೊಂಡು ಬೆಳೆದಂತಹ ಹುಡುಗಿ. ಕಹಿ ಸುದ್ದಿ ಕೇಳಿದಾಗ ಜೀರ್ಣಸಿಕೊಳ್ಳಲು ಸಾಧ್ಯವಾಗಲಿಲ್ಲ. ಜೀವನ ಇಷ್ಟೇನಾ ಅಂತ ಅನಿಸಿಬಿಡ್ತು. ನನಗೆ ಸತ್ಯ ಇನ್ ಲವ್ ಸಿನಿಮಾದಲ್ಲಿ ಅವರ ಕುಟುಂಬದ ಜೊತೆಗೆ ಕೆಲಸ ಮಾಡುವಂತಹ ಅವಕಾಶ ಸಿಕ್ಕಿತು. ವಜ್ರೇಶ್ವರಿ ಕಂಬೈನ್ಸ್ ಅಡಿಯಲ್ಲಿ ಸೀರಿಯಲ್ ಮಾಡುವ ಅವಕಾಶ ಸಿಕ್ಕಿತು. ಜಾಕಿ ಸಿನಿಮಾದ ಗೆಟಪ್ ಹಾಕೊಂಡು ಅಪ್ಪು ಸರ್ ಮುಂದೆ ನಟಿಸಿದ್ದೆ. ಅವರ ಡೌನ್‌ ಟು ಅರ್ತ್ ವ್ಯಕ್ತಿತ್ವವನ್ನ ಅಳವಡಿಸಿಕೊಳ್ಳಬೇಕು. ಸಾಧ್ಯವಾದರೆ ಅವರು ಮತ್ತೆ ವಾಪಸ್ಸು ಮರಳಲಿ ಎಂದು ಕೇಳಿಕೊಳ್ಳುತ್ತೇನೆ. ಅವರೊಬ್ಬ ದೊಡ್ಡ ಲೆಜೆಂಡ್- ನಟಿ ರೂಪಿಕಾ

'ತುಂಬಾ ಶಾಕ್‌ ಆಯ್ತು. ಪುನೀತ್‌ ನಮ್ಮ ಜೊತೆ ಇಲ್ಲ ಅನ್ನುವ ವಿಚಾರವನ್ನು ಇಗಲೂ ಕೂಡ ನಂಬಲು ಸಾಧ್ಯವಾಗುತ್ತಿಲ್ಲ. ಮಿಲನ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಜೊತೆ ಅಭಿನಯಿಸಿದ್ದೇನೆ. ಪುನೀತ್ ಅಂದರೆನೆ ಒಂದು ಗೌರವ. ಪುನೀತ್ ಒಬ್ಬ ಒಳ್ಳೆಯ ವ್ಯಕ್ತಿ ಅಂತ ಹೇಳಲು ಇಷ್ಟಪಡುತ್ತೇನೆ. ತುಂಬಾ ವಿನಮ್ರತೆ ಯಿಂದ ಅವರು ಜೀವನವನ್ನು ನಡೆಸಿದ್ದರು. ಇದು ನಮ್ಮ ಚಿತ್ರರಂಗಕ್ಕೆ ಒಂದು ಕರಾಳ ದಿನ - ಪೂಜಾಗಾಂಧಿ

More from Filmibeat

English summary
Kannada Celebreties Condolence To Puneeth Rajkumar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X