ಚಿಕ್ಕಣ್ಣನನ್ನು ಹೀರೋ ಮಾಡ್ತಿದ್ದಾರೆ 'ಮಾಸ್ಟರ್ ಪೀಸ್' ಡೈರೆಕ್ಟರ್
Recommended Video

ಹಾಸ್ಯ ನಟ ಚಿಕ್ಕಣ್ಣ ಕಳೆದ ವಾರ 'ವಿಕೇಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಬಂದಿದ್ದರು. ಇದೇ ಕಾರ್ಯಕ್ರಮದಲ್ಲಿ ಚಿಕ್ಕಣ್ಣ ಹೀರೋ ಆಗುವ ವಿಷಯ ಕೂಡ ಹೊರಬಂತು.
ಚಿಕ್ಕಣ್ಣಗೆ ಸದ್ಯ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಹೀರೋಗಳ ಮಟ್ಟಿಗೆ ಬ್ಯುಸಿ ಇರುವ ಕಲಾವಿದ ಅವರಾಗಿದ್ದಾರೆ. ನಾಯಕ ನಟರ ಜೊತೆಗೆ ಸಿನಿಮಾ ಮಾಡುತ್ತಿದ್ದ ಅವರು ಈಗ ಒಂದು ಸಿನಿಮಾಗೆ ತಾವೇ ಹೀರೋ ಆಗುತ್ತಿದ್ದಾರೆ.
'ಮಾಸ್ಟರ್ ಪೀಸ್' ಸಿನಿಮಾದ ನಿರ್ದೇಶಕ ಮಂಜು ಮಾಂಡವ್ಯ ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. 'ಹೆಬ್ಬುಲಿ' ಹಾಗೂ 'ರಾಬರ್ಟ್' ಚಿತ್ರಗಳ ನಿರ್ಮಾಪಕ ಉಮಾಪತಿ ಈ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ.

ಮಂಜು ಮಾಂಡವ್ಯ ಜೊತೆಗೆ 'ರಾಜಹುಲಿ' ಸಿನಿಮಾದಲ್ಲಿ ಚಿಕ್ಕಣ್ಣ ನಟಿಸಿದ್ದರು. ಬಳಿಕ ಮಂಜು ನಿರ್ದೇಶನದ 'ಮಾಸ್ಟರ್ ಪೀಸ್' ನಲ್ಲಿ ಚಿಕ್ಕಣ್ಣಗೆ ಒಳ್ಳೆಯ ಪಾತ್ರ ನೀಡಲಾಗಿತ್ತು. ಸದ್ಯ, ಮಂಜು ಮಾಂಡವ್ಯ ಹಾಗೂ ಚಿಕ್ಕಣ್ಣ ಕಾಂಬಿನೇಶನ್ ನಲ್ಲಿ 'ಭರತ ಬಾಹುಬಲಿ' ಸಿನಿಮಾ ಬರುತ್ತಿದೆ.
ಈ ಎಲ್ಲ ಸಿನಿಮಾಗಳ ನಂತರವೂ ಇಬ್ಬರು ಜೋಡಿಯ ಚಿತ್ರಗಳು ಮುಂದುವರೆಯುತ್ತಿದೆ. ಚಿಕ್ಕಣ್ಣನನ್ನು ಹೀರೋ ಮಾಡಲು ಮಂಜು ಮಾಂಡವ್ಯ ಪ್ಲಾನ್ ಮಾಡಿದ್ದಾರೆ.


Click it and Unblock the Notifications











