Exclusive: ಲವ್ವಾ? ಅರೇಂಜ್ಡ್ ಮ್ಯಾರೇಜಾ?; ಮದುವೆ ಬಗ್ಗೆ ಮೌನ ಮುರಿದ ನಟ ಚಿಕ್ಕಣ್ಣ

ಸ್ಯಾಂಡಲ್‌ವುಡ್ ಹಾಸ್ಯ ನಟ ಚಿಕ್ಕಣ್ಣ ಮದುವೆ ಫಿಕ್ಸ್ ಆಗಿದೆ. ಭಾನುವಾರ ಸಂಜೆ(ಆಗಸ್ಟ್ 31) ಇದ್ದಕ್ಕಿದಂತೆ ಫೋಟೊಗಳು ವೈರಲ್ ಆಗಿ ಮದುವೆ ಬಗ್ಗೆ ಸುದ್ದಿ ಹೊರ ಬಿದ್ದಿತ್ತು. ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ಪಾವನಾ ಎಂಬುವವರ ಜೊತೆ ಚಿಕ್ಕಣ್ಣ ಹೊಸ ಬಾಳಿಗೆ ಕಾಲಿಡುತ್ತಿದ್ದಾರೆ.

ನಟ ಚಿಕ್ಕಣ್ಣ ಹಾಗೂ ಪಾವನಾ ಕುಟುಂಬದವರು ಮದುವೆ ಮಾತುಕತೆ ಮುಗಿಸಿ ಹೂ ಮುಡಿಸುವ ಶಾಸ್ತ್ರ ನೆರವೇರಿಸಿದ್ದಾರೆ. ಶೀಘ್ರದಲ್ಲೇ ಮದುವೆ ನಿಶ್ಚಿತಾರ್ಥ ಸಮಾರಂಭ ನಡೆಯಲಿದೆ. ತಿಂಗಳ ಹಿಂದೆಯೇ ಚಿಕ್ಕಣ್ಣ ಹಾಗೂ ಪಾವನಾ ಮದುವೆ ನಿಶ್ಚಯವಾಗಿ ಹೂ ಮುಡಿಸುವ ಶಾಸ್ತ್ರ ನಡೆದಿತ್ತು. ಆದರೆ ತಡವಾಗಿ ಈ ವಿಷಯ ಗೊತ್ತಾಗಿದೆ. ಬರ್ತ್‌ಡೇ ಸಮಾರಂಭವೊಂದರಲ್ಲಿ ಚಿಕ್ಕಣ್ಣ, ಪಾವನಾ ಭಾಗಿ ಆಗಿ ಕೈ ಹಿಡಿದು ನಿಂತಿರುವ ಫೋಟೊ ವೈರಲ್ ಆಗಿ ಮದುವೆ ಸುದ್ದಿ ಗೊತ್ತಾಗಿದೆ.

Actor Chikkanna Confirms Marriage with Pavana Our Wedding Was Fixed a Month Ago

ತಮ್ಮ ಮದುವೆ ಹಾಗೂ ಕೈ ಹಿಡಿಯುವ ಹುಡುಗಿ ಪಾವನಾ ಬಗ್ಗೆ ಹಾಸ್ಯ ನಟ ಚಿಕ್ಕಣ್ಣ ಪ್ರತಿಕ್ರಿಯಿಸಿದ್ದಾರೆ. ಫಿಲ್ಮಿಬೀಟ್ ಕನ್ನಡ ಜೊತೆ ಈ ಬಗ್ಗೆ ಮಾತನಾಡಿದ್ದಾರೆ. "ತಿಂಗಳ ಹಿಂದೆಯೇ ನಮ್ಮ ಮದುವೆ ನಿಶ್ಚಿಯವಾಗಿತ್ತು. ಹೂ ಮುಡಿಸುವ ಶಾಸ್ತ್ರ ನಡೀತು. ತಡವಾಗಿ ಈ ವಿಚಾರ ಬಹಿರಂಗ ಆಗಿದೆ ಅಷ್ಟೆ. ನಿನ್ನೆ ಬರ್ತ್‌ಡೇ ಪಾರ್ಟಿಗೆ ಹೋಗಿದ್ದೆ. ಅಲ್ಲಿ ಯಾರೋ ಫೋಟೊ ಹಿಡಿದು ವೈರಲ್ ಮಾಡಿದ್ದಾರೆ" ಎಂದು ಚಿಕ್ಕಣ್ಣ ಹೇಳಿದ್ದಾರೆ.

ನಾನು ಮದುವೆ ಆಗುತ್ತಿರುವ ಮಹದೇವಪುರದ ನಿವಾಸಿ ಎಂದು ಚಿಕ್ಕಣ್ಣ ಮಾಹಿತಿ ನೀಡಿದ್ದಾರೆ. ಮದುವೆ ಸಿದ್ಧತೆ ನಡೀತಿದೆ. ಸಾಧ್ಯವಾದರೆ ಇದೇ ವರ್ಷ ಮದುವೆ ನಡೆಯಬಹುದು. ಅಥವಾ ಮುಂದಿನ ವರ್ಷ ಆಗಬಹುದು. ಖಚಿತವಾಗಿ ಈಗ್ಲೇ ಹೇಳುವುದು ಕಷ್ಟ. ಎರಡೂ ಕುಟುಂಬದ ಸದಸ್ಯರು ಒಪ್ಪಿ ಯಾವಾಗ ಅಂದ್ರೆ ಆಗ ಮದುವೆ ಎಂದು ತಿಳಿಸಿದ್ದಾರೆ.

Actor Chikkanna Confirms Marriage with Pavana Our Wedding Was Fixed a Month Ago

"ಪಾವನಾ ಅವ್ರು ಉದ್ಯಮಿ. ಇಂಜಿನಿಯರಿಂಗ್ ಪದವೀಧರೆ. ಬಯೋ ಡಿ ಕಾಂಪೋಸಬಲ್‌ ಮೆಟೀರಿಯಲ್ ಡಿಸ್ಟ್ರಿಬ್ಯೂಟರ್ ಆಗಿ ಗುರ್ತಿಸಿಕೊಂಡಿದ್ದಾರೆ" ಎಂದು ಚಿಕ್ಕಣ್ಣ ಮಾಹಿತಿ ನೀಡಿದ್ದಾರೆ. ಹಿರಿಯರೇ ನೋಡಿ ನಿಶ್ಚಯಿಸಿರುವ ಮದುವೆ ಇದೆ ಎಂದು ಹೇಳಿದ್ದಾರೆ. ಸದ್ಯ 'ಲಕ್ಷ್ಮಿ ಪುತ್ರ' ಎಂಬ ಚಿತ್ರದಲ್ಲಿ ನಟಿಸುತ್ತಿದ್ದೀನಿ. ಅಕ್ಟೋಬರ್‌ನಲ್ಲಿ ಮತ್ತೊಂದು ಸಿನಿಮಾ ಶುರುವಾಗಲಿದೆ ಎಂದು ಚಿಕ್ಕಣ್ಣ ವಿವರಿಸಿದ್ದಾರೆ.

ಮೈಸೂರಿನ ಬಲ್ಲಹಳ್ಳಿ ಮೂಲದ ಚಿಕ್ಕಣ್ಣ ಹಾಸ್ಯ ಕಾರ್ಯಕ್ರಮಗಳಲ್ಲಿ ನಟಿಸುತ್ತಿದ್ದರು. ಬಳಿಕ ಜೀ-ಕನ್ನಡ 'ಕಾಮಿಡಿ ಕಿಲಾಡಿಗಳು' ಶೋನಲ್ಲಿ ಮಿಂಚಿದ್ದರು. ಕನ್ನಡ ಚಿತ್ರರಂಗದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಕುರಿ ಪ್ರತಾಪ್ ಜೊತೆ ಸೇರಿ ಕಾಮಿಡಿ ಸ್ಕಿಟ್ ಮಾಡಿ ರಂಜಿಸಿದ್ದರು. ಬಳಿಕ 'ಕಿರಾತಕ' ಚಿತ್ರದಲ್ಲಿ ಅವಕಾಶ ಸಿಕ್ಕಿತ್ತು. ಅಲ್ಲಿಂದ ಮುಂದೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸೋಕೆ ಆರಂಭಿಸಿದರು. 50 ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಕನ್ನಡ ಚಿತ್ರರಂಗದ ಬಹುಬೇಡಿಕೆಯ ಹಾಸ್ಯ ನಟ ಎನಿಸಿಕೊಂಡರು.

'ಉಪಾಧ್ಯಕ್ಷ' ಚಿತ್ರದಲ್ಲಿ ಹೀರೊ ಆಗಿ ಪ್ರೇಕ್ಷಕರನ್ನು ರಂಜಿಸಿದರು. ಇದೇ ವರ್ಷ ಬಂದ 'ಛೂ ಮಂತರ್' ಹಾಗೂ 'ಫಾರೆಸ್ಟ್' ಸಿನಿಮಾಗಳಲ್ಲಿ ನಟಿಸಿ ಗೆದ್ದಿದ್ದಾರೆ. 'ಲಕ್ಕಿ', 'ರಾಜಾಹುಲಿ', 'ಬುಲ್ ಬುಲ್', 'ವಿಕ್ಟರಿ', 'ಅಧ್ಯಕ್ಷ', 'ರುದ್ರ ತಾಂಡವ', 'ರನ್ನ', 'ನಟಸಾರ್ವಭೌಮ' ಹೀಗೆ ಹಲವು ಹಿಟ್ ಸಿನಿಮಾಗಳಲ್ಲಿ ಚಿಕ್ಕಣ್ಣ ನಟಿಸಿ ಮೋಡಿ ಮಾಡಿದ್ದಾರೆ. ದರ್ಶನ್, ಸುದೀಪ್, ಯಶ್, ಪುನೀತ್ ರಾಜ್‌ಕುಮಾರ್ ಸೇರಿ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡು ಕಮಾಲ್ ಮಾಡಿದ್ದಾರೆ ಚಿಕ್ಕಣ್ಣ.

ಶಾಲಾ ದಿನಗಳಲ್ಲಿ ಗಾರೆ ಕೆಲಸ ಮಾಡಲು ಆರಂಭಿಸಿದ್ದರು. ಆದರೆ ತಮ್ಮ ಪ್ರತಿಭೆಯಿಂದ ಚಿತ್ರರಂಗಕ್ಕೆ ಬರುವಂತಾಯಿತು. ಅದೇ ಮುಂದೆ ನೇಮು ಫೇಮು ತಂದು ಕೊಟ್ಟಿದೆ. ಹಲವು ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸಿದ್ದಾರೆ.

More from Filmibeat

English summary
Kannada Comedian Chikkanna Reacts to Viral Marriage Photos with Pavana.
Read more about: chikkanna sandalwood kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X