ದರ್ಶನ್ ಗೆ ವಿಶೇಷ ಉಡುಗೊರೆ ನೀಡಿದ ಚಿರು ದಂಪತಿ
Recommended Video
ಇತ್ತೀಚಿಗಷ್ಟೆ ಚಿರಂಜೀವಿ ಸರ್ಜಾ ಅವರ 'ಸಿಂಗ' ಸಿನಿಮಾದ ಹಾಡನ್ನು ನಟ ದರ್ಶನ್ ಬಿಡುಗಡೆ ಮಾಡಿದ್ದರು. ಆ ಸಿನಿಮಾದ 'ಶಾನೆ ಟಾಪಾಗವ್ಳೆ ನಮ್ಮುಡುಗಿ..' ಹಾಡು ನಂಗೆ ತುಂಬ ಇಷ್ಟ ಎಂದಿದ್ದರು.
ಹಾಗೆ ಹಿಂದೆ ನೋಡುತ್ತಾ ಹೋದರೆ, ಚಿರಂಜೀವಿ ಸರ್ಜಾ ಅವರ ಅನೇಕ ಸಿನಿಮಾಗಳಿಗೆ ದರ್ಶನ್ ಸಹಾಯ ಮಾಡಿದ್ದಾರೆ. ಚಿರು ಪತ್ನಿ ನಟಿ ಮೇಘನಾ ಚಿತ್ರಗಳಿಗೂ ದರ್ಶನ್ ಬೆಂಬಲ ನೀಡುತ್ತಾ ಬಂದಿದ್ದಾರೆ. ಹೀಗಾಗಿ ಈ ಜೋಡಿ ದರ್ಶನ್ ಗೆ ಒಂದು ವಿಶೇಷ ಉಡುಗೊರೆ ನೀಡಿದೆ.
ದರ್ಶನ್ ಗೆ ಪ್ರಾಣಿಗಳು ಅಂದರೆ ತುಂಬ ಇಷ್ಟ. ಅದೇ ಕಾರಣಕ್ಕೆ ಡಿ ಬಾಸ್ ಗೆ ಒಂದು ನಾಯಿಮರಿಯನ್ನು ಉಡುಗೊರೆಯಾಗಿ ಚಿರು - ಮೇಘನಾ ನೀಡಿದ್ದಾರೆ. ತಮ್ಮ ಮನೆಯ ಬೀಮಾ ಎಂಬ ನಾಯಿಯ ಮಗನನ್ನು ದರ್ಶನ್ ಗೆ ಗಿಫ್ಟ್ ಆಗಿ ನೀಡಿದ್ದಾರೆ.

ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿರುವ ಮೇಘನಾ ರಾಜ್ ''ದರ್ಶನ್ ಸರ್ ನಮ್ಮ ಕುಟುಂಬ ಸದಸ್ಯ ಇದ್ದ ಹಾಗೆ. ಅವರ ಪ್ರೋತ್ಸಾಹಕ್ಕೆ ನಮ್ಮ ಉಡುಗೊರೆ ಇದು'' ಎಂದಿದ್ದಾರೆ. ದರ್ಶನ್ ಗೆ ಚಿರು ನಾಯಿಮರಿಯನ್ನು ಗಿಫ್ಟ್ ನೀಡಿದ ಫೋಟೋವನ್ನು ಹಂಚಿಕೊಂಡಿದ್ದಾರೆ.
ಅಂದಹಾಗೆ, ಸದ್ಯ ದರ್ಶನ್ ನಟನೆಯ 'ಕುರುಕ್ಷೇತ್ರ' ಸಿನಿಮಾದಲ್ಲಿ ಮೇಘನಾ ರಾಜ್ ಕೂಡ ನಟಿಸಿದ್ದಾರೆ. ಈ ಚಿತ್ರ ಆಗಸ್ಟ್ 2 ರಂದು ಬಿಡುಗಡೆಯಾಗಲಿದೆ.


Click it and Unblock the Notifications











