twitter
    For Quick Alerts
    ALLOW NOTIFICATIONS  
    For Daily Alerts

    ದರ್ಶನ್ ಗೆ ವಿಶೇಷ ಉಡುಗೊರೆ ನೀಡಿದ ಚಿರು ದಂಪತಿ

    |

    Recommended Video

    ಚಿರಂಜೀವಿ ಸರ್ಜಾ ಹಾಗು ಮೇಘನಾ ರಾಜ್ ಕಡೆಯಿಂದ ದರ್ಶನ್ ಗೆ ಸಿಕ್ತು ವಿಶೇಷ ಉಡುಗೊರೆ | FILMIBEAT KANNADA

    ಇತ್ತೀಚಿಗಷ್ಟೆ ಚಿರಂಜೀವಿ ಸರ್ಜಾ ಅವರ 'ಸಿಂಗ' ಸಿನಿಮಾದ ಹಾಡನ್ನು ನಟ ದರ್ಶನ್ ಬಿಡುಗಡೆ ಮಾಡಿದ್ದರು. ಆ ಸಿನಿಮಾದ 'ಶಾನೆ ಟಾಪಾಗವ್ಳೆ ನಮ್ಮುಡುಗಿ..' ಹಾಡು ನಂಗೆ ತುಂಬ ಇಷ್ಟ ಎಂದಿದ್ದರು.

    ಹಾಗೆ ಹಿಂದೆ ನೋಡುತ್ತಾ ಹೋದರೆ, ಚಿರಂಜೀವಿ ಸರ್ಜಾ ಅವರ ಅನೇಕ ಸಿನಿಮಾಗಳಿಗೆ ದರ್ಶನ್ ಸಹಾಯ ಮಾಡಿದ್ದಾರೆ. ಚಿರು ಪತ್ನಿ ನಟಿ ಮೇಘನಾ ಚಿತ್ರಗಳಿಗೂ ದರ್ಶನ್ ಬೆಂಬಲ ನೀಡುತ್ತಾ ಬಂದಿದ್ದಾರೆ. ಹೀಗಾಗಿ ಈ ಜೋಡಿ ದರ್ಶನ್ ಗೆ ಒಂದು ವಿಶೇಷ ಉಡುಗೊರೆ ನೀಡಿದೆ.

    ಕೊಟ್ಟಿದ್ದು ಒಂದು ಸಂಭಾವನೆ, ಮಾಡಿಸಿದ್ದು ಎರಡು ಚಿತ್ರದ ಕೆಲಸ: ದರ್ಶನ್ ಕೊಟ್ಟಿದ್ದು ಒಂದು ಸಂಭಾವನೆ, ಮಾಡಿಸಿದ್ದು ಎರಡು ಚಿತ್ರದ ಕೆಲಸ: ದರ್ಶನ್

    ದರ್ಶನ್ ಗೆ ಪ್ರಾಣಿಗಳು ಅಂದರೆ ತುಂಬ ಇಷ್ಟ. ಅದೇ ಕಾರಣಕ್ಕೆ ಡಿ ಬಾಸ್ ಗೆ ಒಂದು ನಾಯಿಮರಿಯನ್ನು ಉಡುಗೊರೆಯಾಗಿ ಚಿರು - ಮೇಘನಾ ನೀಡಿದ್ದಾರೆ. ತಮ್ಮ ಮನೆಯ ಬೀಮಾ ಎಂಬ ನಾಯಿಯ ಮಗನನ್ನು ದರ್ಶನ್ ಗೆ ಗಿಫ್ಟ್ ಆಗಿ ನೀಡಿದ್ದಾರೆ.

    actor chiranjeevi sarja gifted pet to darshan

    ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿರುವ ಮೇಘನಾ ರಾಜ್ ''ದರ್ಶನ್ ಸರ್ ನಮ್ಮ ಕುಟುಂಬ ಸದಸ್ಯ ಇದ್ದ ಹಾಗೆ. ಅವರ ಪ್ರೋತ್ಸಾಹಕ್ಕೆ ನಮ್ಮ ಉಡುಗೊರೆ ಇದು'' ಎಂದಿದ್ದಾರೆ. ದರ್ಶನ್ ಗೆ ಚಿರು ನಾಯಿಮರಿಯನ್ನು ಗಿಫ್ಟ್ ನೀಡಿದ ಫೋಟೋವನ್ನು ಹಂಚಿಕೊಂಡಿದ್ದಾರೆ.

    ದರ್ಶನ್ ಕುರುಕ್ಷೇತ್ರದಿಂದ ಮತ್ತೊಂದು ಸರ್ಪ್ರೈಸ್ ಸುದ್ದಿ ದರ್ಶನ್ ಕುರುಕ್ಷೇತ್ರದಿಂದ ಮತ್ತೊಂದು ಸರ್ಪ್ರೈಸ್ ಸುದ್ದಿ

    ಅಂದಹಾಗೆ, ಸದ್ಯ ದರ್ಶನ್ ನಟನೆಯ 'ಕುರುಕ್ಷೇತ್ರ' ಸಿನಿಮಾದಲ್ಲಿ ಮೇಘನಾ ರಾಜ್ ಕೂಡ ನಟಿಸಿದ್ದಾರೆ. ಈ ಚಿತ್ರ ಆಗಸ್ಟ್ 2 ರಂದು ಬಿಡುಗಡೆಯಾಗಲಿದೆ.

    English summary
    Kannada actor Chiranjeevi Sarja gifted pet to Darshan.
    Sunday, July 14, 2019, 11:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X