'ಏಪ್ರಿಲ್' ನಲ್ಲಿ ರಚಿತಾಗೆ ಜೋಡಿಯಾಗಲಿದ್ದಾರೆ ಚಿರಂಜೀವಿ ಸರ್ಜಾ

ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿನಯಿಸಲಿರುವ ಏಪ್ರಿಲ್ ಸಿನಿಮಾ ಬಹಳ ಹಿಂದೆಯೆ ಸೆಟ್ಟೇರಿತ್ತು. ಚಿತ್ರ ಅನೌನ್ಸ್ ಆದ ಪ್ರಕಾರ ಈಗಾಗಲೆ ಚಿತ್ರೀಕರಣ ಮುಗಿದು ರಿಲೀಸ್ ಗೆ ರೆಡಿಯಾಗಬೇಕಿತ್ತು. ಆದ್ರೆ ಕಾರಣಾಂತರಗಳಿಂದ ಚಿತ್ರೀಕರಣ ತಡವಾಗಿತ್ತು.

ಸಿನಿಮಾ ಪ್ರಾರಂಭದಲ್ಲೆ ನಿಂತು ಹೋಯಿತೇನೋ ಎಂದುಕೊಳ್ಳುವಷ್ಟೊತ್ತಿಗೆ ಮತ್ತೆ ಏಪ್ರಿಲ್ ಸದ್ದು ಮಾಡುತ್ತಿದೆ. ಹೌದು, ಚಿತ್ರಕ್ಕೆ ಮತ್ತೆ ಚಾಲನೆ ಸಿಕ್ಕಿದ್ದು ಏಪ್ರಿಲ್ ನಲ್ಲೀಗ ನಟ ಚಿರಂಜೀವಿ ಸರ್ಜಾ ಕಾಣಿಸಿಕೊಳ್ಳುತ್ತಿದ್ದಾರೆ. ರಚಿತಾ ರಾಮ್ ಚಿತ್ರಕ್ಕೆ ಚಿರಂಜೀವಿ ಸರ್ಜಾ ಎಂಟ್ರಿಯಾಗಿರುವ ಜೊತೆಗೆ ಸ್ಕ್ರಿಪ್ಟ್ ನಲ್ಲಿ ಒಂದಿಷ್ಟು ಬದಲಾವಣೆಯನ್ನು ಮಾಡಿಕೊಳ್ಳಲಾಗಿದೆಯಂತೆ.

ಈ ಮೊದಲು ಏಪ್ರಿಲ್ ನಾಯಕಿ ಪ್ರಧಾನ ಸಿನಿಮಾ ಎಂದು ಹೇಳಲಾಗುತ್ತಿತ್ತು. ಆದ್ರೀಗ ಕಥೆಗೆ ಮಾಸ್ ಕಮರ್ಷಿಯಲ್ ಟಚ್ ನೀಡಲಾಗಿದೆಯಂತೆ. ಈ ಬದಲಾವಣೆ ಸ್ವತಹ ರಚಿತಾ ಅವರಿಗೂ ಇಷ್ಟವಾಗಿದೆಯಂತೆ. ಅಂದ್ಹಾಗೆ ಏಪ್ರಿಲ್ ಸತ್ಯ ರಾಯಲು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಿನಿಮಾ.

Actor Chiranjeevi Sarja Joins For Rachita Ram Starrer April Film

ಏಪ್ರಿಲ್ ಚಿತ್ರಕ್ಕೆ '8 ಎಂಎಂ' ಖ್ಯಾತಿಯ ನಿರ್ಮಾಪಕ ನಾರಾಯಣ ಬಾಬು ಬಂಡವಾಳ ಹೂಡುತ್ತಿದ್ದಾರೆ. ನಟಿ ರಚಿತಾ ರಾಮ್ ಸದ್ಯ ರಮೇಶ್ ಅರವಿಂದ್ ನಿರ್ದೇಶನದ 100 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಆಯೂಷ್ಮಾನ್ ಭವ ಚಿತ್ರದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಇನ್ನು ಡಾಲಿ ಧನಂಜಯ್ ಜೊತೆ ಡಾಲಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಚಿತ್ರದಲ್ಲಿ ರಚಿತಾ ಪ್ರಮುಖ ಪಾತ್ರದಲ್ಲಿ ಮಿಂಚಲಿದ್ದಾರೆ.

More from Filmibeat

English summary
Actor Chiranjeevi Sarja joins for Rachita Ram starrer April film. This film is directed by Satya Rayalu.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X