ನಟಿ ರಚಿತಾ ರಾಮ್ ಸಹೋದರಿ ಮದುವೆಯಲ್ಲಿ ನಿಖಿಲ್ ಕುಮಾರ್
ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್ ರಚಿತಾ ರಾಮ್ ಮನೆಯಲ್ಲಿ ಸಂಭ್ರಮ. ರಚಿತಾ ಸಹೋದರಿ ನಟಿ ನಿತ್ಯಾ ರಾಮ್ ಇತ್ತೀಚಿಗಷ್ಟೆ ಹಸೆಮಣೆ ಏರಿದ್ದಾರೆ. ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಉದ್ಯಮಿ ಗೌತಮ್ ಎಂಬುವರ ಜೊತೆ ನಿತ್ಯಾ ರಾಮ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ನಿತ್ಯಾ ರಾಮ್ ಮತ್ತು ಗೌತಮ್ ಮದುವೆ ಸಮಾರಂಭಕ್ಕೆ ಕುಟುಂಬದವರು, ಸ್ನೇಹಿತರು ಮತ್ತು ಕಿರುತೆರೆ ಕಲಾವಿದರು ಭಾಗಿಯಾಗಿ ನವ ಜೋಡಿಗೆ ಆಶೀರ್ವಾದ ಮಾಡಿದ್ದಾರೆ. ಆದರೆ ನಿತ್ಯಾ ಮದುವೆಯಲ್ಲಿ ಸ್ಯಾಂಡಲ್ ವುಡ್ ಗಣ್ಯರು ಕಾಣಿಸಿಕೊಂಡಿದ್ದು ತೀರಾ ಕಡಿಮೆ. ರಚಿತಾ ಸಹೋದರಿ ಮದುವೆಗೆ ಸ್ಯಾಂಡಲ್ ವುಡ್ ಗಣ್ಯರಿಗೆ ಆಹ್ವಾನ ನೀಡಿರುವ ಬಗ್ಗೆಯೂ ಮಾಹಿತಿ ಇಲ್ಲ.

ನಟ ಮತ್ತು ರಾಜಕಾರಣಿ ನಿಖಿಲ್ ಕುಮಾರ್, ನಿತ್ಯಾ ರಾಮ್ ಮದುವೆ ಸಮಾರಂಭದಲ್ಲಿ ಭಾಗಿಯಾಗಿ ನಿತ್ಯಾ ಮತ್ತು ಗೌತಮ್ ಜೋಡಿಗೆ ಶುಭಹಾರಿಸಿದ್ದಾರೆ. ವಿವಾಹ ಸಂಭ್ರಮದಲ್ಲಿ ಭಾಗಿಯಾದ ಒಂದಿಷ್ಟು ಫೋಟೋಗಳನ್ನು ನಿಖಿಲ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ನವ ಜೋಡಿಗೆ ಶುಭ ಹಾರೈಸಿದ್ದಾರೆ.

ನಟಿ ನಿತ್ಯ ರಾಮ್ ಮತ್ತು ಉದ್ಯಮಿ ಗೌತಮ್ ಮದುವೆ ಇದೇ ತಿಂಗಳು 6 ರಂದು ನೆರವೇರಿದೆ. ಮದುವೆಗೆ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಸ್ಪೆಷಲ್ ಸೆಟ್ ಹಾಕಲಾಗಿತ್ತು. ನಿತ್ಯ ರಾಮ್ ತಾಯಿಯ ಸ್ನೇಹಿತರ ಮಗ ವರ ಗೌತಮ್. ಫ್ಯಾಮಿಲಿ ಮೂಲಕ ಪರಿಚಯ ಆದ ಗೌತಮ್ ರನ್ನೇ ನಿತ್ಯ ರಾಮ್ ವರಿಸಿದ್ದಾರೆ.


Click it and Unblock the Notifications











