Big Breaking: ಗಣರಾಜ್ಯದಿನವೆ ಸ್ಟೇಟಸ್ ಬದಲಾಯಿಸಿಕೊಂಡ ನಟ ನಿಖಿಲ್, ಇಂದು ನಿಶ್ಚಿತಾರ್ಥ
Recommended Video
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ, ನಟ ಮತ್ತು ರಾಜಕಾರಣಿ ನಿಖಿಲ್ ಕುಮಾರ್ ಸ್ವಾಮಿ ಮದುವೆ ಫಿಕ್ಸ್ ಆಗಿದೆ ಎನ್ನುವ ಬ್ರೇಕಿಂಗ್ ಸುದ್ದಿ 'ಫಿಲ್ಮಿ ಬೀಟ್ ಕನ್ನಡ'ದಲ್ಲಿ ನಿನ್ನೆ( ಜನವರಿ 25) ಪ್ರಕಟವಾಗಿತ್ತು. ಕುಮಾರಸ್ವಾಮಿ ಕುಟುಂಬದವರು ಗೌಪ್ಯವಾಗಿ ನಿಖಿಲ್ ಮದುವೆ ಮಾತುಕತೆ ನಡೆಸುತ್ತಿರುವುದಲ್ಲದೆ, ಇಂದು ಗಪ್ ಚುಪ್ ಆಗಿ ನಿಖಿಲ್ ನಿಶ್ಚಿತಾರ್ಥ ಕೂಡ ಮಾಡಿ ಮುಗಿಸಿದ್ದಾರೆ ಎನ್ನುವ ಮತ್ತೊಂದು ಬಿಗ್ ಬ್ರೇಕಿಂಗ್ ಸುದ್ದಿ 'ಫಿಲ್ಮಿ ಬೀಟ್ ಕನ್ನಡ'ಕ್ಕೆ ಲಭ್ಯವಾಗಿದೆ.
ಮದುವೆ ವಿಚಾರವಾಗಿ ನಿಖಿಲ್ ಇತ್ತೀಚಿಗೆ ಸಿಕ್ಕಾಪಟ್ಟಿ ಸುದ್ದಿಯಲ್ಲಿದ್ದರು. ನಟಿ ರಚಿತಾ ರಾಮ್ ಹಾಗೂ ನಿಖಿಲ್ ಕುಮಾರ್ ನಡುವೆ ಪ್ರೀತಿ ಪ್ರೇಮ ನಡೆಯುತ್ತಿದೆ, ಇಬ್ಬರು ಮದುವೆಯಾಗುತ್ತಾರೆ ಎನ್ನುವ ಮಾತು ಕೇಳಿಬರುತ್ತಿತ್ತು. ಆದರೆ ನಿಖಿಲ್ ಮದುವೆ ಆಗುವ ಹುಡುಗಿ ರಾಜಕೀಯದವರು ಅಲ್ಲ ಸಿನಿಮಾದವರೂ ಅಲ್ಲ. ಬೆಂಗಳೂರಿನ ಉದ್ಯಮಿ ಮಗಳ ಜೊತೆ ನಿಖಿಲ್ ಇಂದು ಎಂಗೇಜ್ ಆಗುವ ಮೂಲಕ ಗಣರಾಜ್ಯ ದಿನವೆ ತನ್ನ ಸ್ಟೇಟಸ್ ಬದಲಾಯಿಸಿಕೊಂಡಿದ್ದಾರೆ.

ನಿಖಿಲ್ ಕೈ ಹಿಡಿಯುವ ಹುಡುಗಿ ಯಾರು?
ನಟ ನಿಖಿಲ್ ಕುಮಾರ್ ಸ್ವಾಮಿ ಮದುವೆ ಆಗುತ್ತಿರುವ ಹುಡುಗಿ ಅಪ್ಪಟ ಕನ್ನಡತಿ. ಅದರಲ್ಲೂ ಬೆಂಗಳೂರಿನ ಸುಂದರಿ. ವಿಜಯನಗರ ಶಾಸಕ ಲೇಔಟ್ ಕೃಷ್ಣಪ್ಪ ಅವರ ಅಣ್ಣನ ಮಗನ ಮಗಳು. ಮಂಜುನಾಥ್ ಎನ್ನುವರ ಮೊದಲ ಮಗಳು ಋತು(ರೇವತಿ) ಜೊತೆ ನಿಖಿಲ್ ಇಂದು ಎಂಗೇಜ್ ಆಗಿದ್ದಾರೆ ಎನ್ನುವ ಸುದ್ದಿ ಫಿಲ್ಮಿ ಬೀಟ್ ಗೆ ಲಭ್ಯವಾಗಿದೆ.

ಇಂದು ನಿಶ್ಚಿತಾರ್ಥ
ನಿಖಿಲ್ ಮತ್ತು ರೇವತಿ ನಿಶ್ಚಿತಾರ್ಥ ದಿಢೀರನೆ ಏರ್ಪಡಿಸಲಾಗಿದೆ. ಮಲ್ಲತ್ತ ಹಳ್ಳಿ ಯಲ್ಲಿರುವ (ಋತು) ರೇವತಿ ಮನೆಯಲ್ಲಿ ಸರಳವಾಗಿ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯುತ್ತಿದೆ. ತೀರ ಗೌಪ್ಯವಾಗಿ ನಡೆಯುತ್ತಿರುವ ನಿಶ್ಚಿತಾರ್ಥ ಸಮಾರಂಭದಲ್ಲಿ ನಿಖಿಲ್ ಮನೆಯಿಂದ ನಿಖಿಲ್ ಸೇರಿದಂತೆ ದೇವೇಗೌಡ, ಹೆಚ್ ಡಿ ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ, ಚಿನ್ನಮ್ಮ ಮತ್ತು ಸಹೋದರಿಯರಾದ ಅನಸೂಯ ಮತ್ತು ಶೈಲಜಾ ಮಾತ್ರ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ.

ಏಪ್ರಿಲ್ ನಲ್ಲಿ ಮದುವೆ
ಇಂದು ಸರಳವಾಗಿ ಮತ್ತು ಯಾರಿಗೂ ಹೇಳದೆ ಗಪ್ ಚುಪ್ ಆಗಿ ನಿಶ್ಚಿತಾರ್ಥ ಮಾಡಿ ಮುಗಿಸಿರುವ ಕುಮಾರಸ್ವಾಮಿ ಕುಟುಂಬ ಮದುವೆ ದಿನಾಂಕವನ್ನು ನಿಗದಿ ಮಾಡಿದೆ. ನಿಖಿಲ್ ಮತ್ತು ರೇವತಿ ಮದುವೆ ಏಪ್ರಿಲ್ 29 ಮತ್ತು 30 ರಂದು ಅದ್ದೂರಿಯಾಗಿ ನಡೆಯಲಿದೆ. ಬೆಂಗಳೂರಿನಲ್ಲಿಯೆ ನಿಖಿಲ್ ಮದುವೆ ನಡೆಯಲಿದ್ದು ಎಲ್ಲಿ ಎನ್ನುವ ಬಗ್ಗೆ ಇನ್ನು ರಿವೀಲ್ ಆಗಿಲ್ಲ.

ಋತು(ರೇವತಿ) ಬಗ್ಗೆ
ಎಂಸಿಎ ಓದಿರುವರೇವತಿ ಸಿನಿಮಾ ಲೋಕದಿಂದ ತುಂಬಾ ದೂರ. ಬಣ್ಣದ ಲೋಕದ ನಂಟು ಇರದ ರೇವತಿ ರಾಜಕೀಯದಿಂದನೂ ದೂರ. ಆದರೀಗ ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಗ ನಿಖಿಲ್ ಕೈ ಹಿಡಿಯುವ ಮೂಲಕ ದೊಡ್ಡಗೌಡರ ಮನೆಯ ಸೊಸೆಯಾಗಿ ಹೋಗುತ್ತಿದ್ದಾರೆ. ಮಂಜುನಾಥ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳು. ರೇವತಿ ಮೊದಲನೆಯ ಮಗಳು. ರೇವತಿ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.


Click it and Unblock the Notifications











