ಸದ್ದಿಲ್ಲದೇ ಡಾಲಿ ಧನಂಜಯ್- ಧನ್ಯತಾ ಮದುವೆ ನಿಶ್ಚಿತಾರ್ಥ; ಉಂಗುರ ಬದಲಿಸಿಕೊಂಡ ಜೋಡಿ

ಇತ್ತೀಚೆಗೆ ನಟ ಧನಂಜಯ್ ತಮ್ಮ ಪ್ರೀತಿ, ಮದುವೆ ವಿಚಾರ ಬಹಿರಂಗಪಡಿಸಿದ್ದರು. ಸ್ನೇಹಿತೆ ಧನ್ಯತಾ ಜೊತೆ ಹೊಸ ಬಾಳಿಗೆ ಕಾಲಿಡುತ್ತಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಇದೀಗ ಧನಂಜಯ್- ಧನ್ಯತಾ ಮದುವೆ ನಿಶ್ಚಯವಾಗಿದ್ದು ಇಬ್ಬರ ಎಂಗೇಜ್‌ಮೆಂಟ್ ಕೂಡ ನಡೆದಿದೆ. ಕೆಲವೇ ಆಪ್ತರ ಸಮ್ಮುಖದಲ್ಲಿ ಇಬ್ಬರೂ ಉಂಗುರ ಬದಲಿಸಿಕೊಂಡಿದ್ದಾರೆ.

ಧನಂಜಯ ಹುಟ್ಟೂರು ಅರಸೀಕೆರೆಯ ಕಾಳೇನಹಳ್ಳಿಯಲ್ಲಿ ನಿಶ್ಚಿತಾರ್ಥ ನಡೀತಿದೆ. ಲಗ್ನ ಶಾಸ್ತ್ರದಲ್ಲಿ ಧನಂಜಯ್ ಹಾಗೂ ಭಾವಿ ಪತ್ನಿ ಧನ್ಯತಾ ಭಾಗಿ ಆಗಿದ್ದಾರೆ. ನಿಶ್ಚಿತಾರ್ಥದ ಜೊತೆ ಲಗ್ನಪತ್ರಿಕೆ ಬರೆಸುವ ಶಾಸ್ತ್ರ ನಡೆದಿದೆ. ಮುಂದಿನ ವರ್ಷ ಫೆಬ್ರವರಿ 16ಕ್ಕೆ ಬಹಳ ಅದ್ಧೂರಿಯಾಗಿ ಧನಂಜಯ್- ಧನ್ಯತಾ ಮದುವೆ ನಡೆಯಲಿದೆ.

Actor Daali Dhananjay and gynaecologist dhanyatha are engaged Photos goes viral

ಅಂದಹಾಗೆ ಮೈಸೂರಿನ ಎಕ್ಸಿಬಿಷನ್ ಗ್ರೌಂಡ್‌ನಲ್ಲಿ ಡಾಲಿ ಹಾಗೂ ಧನ್ಯತಾ ಮದುವೆ ಅದ್ಧೂರಿಯಾಗಿ ನಡೆಯಲಿದೆ. ಈಗಾಗಲೇ ಮದುವೆ ಸಿದ್ಧತೆ ಶುರುವಾಗಿದೆ. ದೀಪಾವಳಿ ಸಂಭ್ರಮದಲ್ಲಿ ನಟ ಧನಂಜಯ್ ತಮ್ಮ ಪ್ರೀತಿ ಹಾಗೂ ಮದುವೆ ಸಂಗತಿ ಬಿಚ್ಚಿಟ್ಟಿದ್ದರು. ಕಲರ್‌ಫುಲ್ ಫೋಟೊಶೂಟ್ ನಡೆಸಿ ತಮ್ಮ ಭಾವಿ ಪತ್ನಿಯನ್ನು ಪರಿಚಯಿಸಿದ್ದರು. ಆಗ ಮದುವೆ ಮಾತುಕತೆ ನಡೆದಿತ್ತು. ಇದೀಗ ನಿಶ್ಚಿತಾರ್ಥವೂ ನೆರವೇರಿದೆ.

ಧನಂಜಯ್- ಧನ್ಯತಾ ಕುಟುಂಬ ಸದಸ್ಯರು, ಸ್ನೇಹಿತರು ಮಾತ್ರ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಮೈಸೂರಿನಲ್ಲಿ ಅದ್ಧೂರಿಯಾಗಿ ಮದುವೆ, ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಅಲ್ಲಿ ಚಿತ್ರರಂಗದ ತಾರೆಯರೆಲ್ಲಾ ಆಗಮಿಸಿ ಜೋಡಿಗೆ ಶುಭ ಕೋರಲಿದ್ದಾರೆ. ಅಂದಹಾಗೆ ಇಬ್ಬರದ್ದು ಬಹಳ ಹಳೆಯ ಪರಿಚಯ. ಅದು ಈಗ ಮದುವೆವರೆಗೂ ಬಂದು ನಿಂತಿದೆ.

ನಟ ಧನಂಜಯ್ ಹಾಗೂ ಧನ್ಯತಾ ಇಬ್ಬರೂ ಮೈಸೂರಿನಲ್ಲಿ ಕಾಲೇಜು ವಿದ್ಯಾಭ್ಯಾಸ ಮಾಡಿದವರು. ಅದೇ ಸಮಯದಲ್ಲಿ ಮ್ಯೂಚುವಲ್ ಫ್ರೆಂಡ್ಸ್ ಮೂಲಕ ಇಬ್ಬರ ಪರಿಚಯ ಆಗಿತ್ತು. ಮೂಲತಃ ಚಿತ್ರದುರ್ಗದವರಾದ ಧನ್ಯತಾ ಒಂದಷ್ಟು ದಿನ ಅರಸೀಕೆರೆ ಸುತ್ತಾಡುತ್ತಿದ್ದರಂತೆ. ಇಬ್ಬರ ಸ್ನೇಹ ಒಂದೂವರೆ ವರ್ಷದ ಹಿಂದೆ ಪ್ರೀತಿಗೆ ತಿರುಗಿತ್ತು.

ಇನ್ನು ಧನ್ಯತಾ ಪೋಷಕರು ಸರ್ಕಾರಿ ನೌಕರರಾಗಿದ್ದವರು. ಈಗ ಬೆಂಗಳೂರಿನಲ್ಲೇ ನೆಲೆಸಿದ್ದಾರೆ. ಸದ್ಯ ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಧನ್ಯತಾ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆಕೆಗೆ ಒಬ್ಬ ಸಹೋದರಿ ಕೂಡ ಇದ್ದಾಳೆ. ಇದೀಗ ಎಬ್ಬರ ಮನೆಗಳಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ.

Actor Daali Dhananjay and gynaecologist dhanyatha are engaged Photos goes viral

ನಟ ಧನಂಜಯ್ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮುಂದಿನ ವಾರವೇ ಧನು ನಟನೆಯ 'ಜೀಬ್ರಾ' ಸಿನಿಮಾ ಬಿಡುಗಡೆ ಆಗಲಿದೆ. ತೆಲುಗು ಹಾಗೂ ಕನ್ನಡದಲ್ಲಿ ಸಿನಿಮಾ ತೆರೆಗೆ ಬರಲಿದೆ. ಚಿತ್ರದ ಪ್ರಚಾರ ಕೆಲಸಗಳಲ್ಲಿ ಧನಂಜಯ್ ಬ್ಯುಸಿಯಾಗಿದ್ದಾರೆ. ನಟನಾಗಿ ಮಾತ್ರವಲ್ಲದೇ ಧನಂಜಯ್ ನಿರ್ಮಾಪಕನಾಗಿಯೂ ಗುರ್ತಿಸಿಕೊಂಡಿದ್ದಾರೆ.

ಪುಸ್ತಕ ಓದುವ ಹವ್ಯಾಸ ರೂಢಿಸಿಕೊಂಡಿರುವ ಧನಂಜಯ್ ಚಿತ್ರಗಳಿಗೆ ಹಾಡುಗಳನ್ನು ಬರೆಯುತ್ತಾರೆ. 'ಬಡವ ರಾಸ್ಕಲ್' ಧನಂಜಯ್ ನಿರ್ಮಿಸಿದ ಮೊದಲ ಸಿನಿಮಾ. ಬಳಿಕ 'ಹೆಡ್‌ಬುಷ್' ಹಾಗೂ 'ಟಗರು ಪಲ್ಯ' ಚಿತ್ರಗಳಿಗೆ ಹಣ ಹೂಡಿದ್ದರು. ಧನಂಜಯ್ ನಟಿಸುತ್ತಿರುವ 'ಉತ್ತರಕಾಂಡ' ಸಿನಿಆ ಚಿತ್ರೀಕರಣ ತಡವಾಗುತ್ತಿದೆ.

'ಜಿಂಗೋ' ಸಿನಿಮಾ ಚಿತ್ರೀಕರಣ ಶೀಘ್ರದಲ್ಲೇ ಶುರುವಾಗಲಿದೆ. ಇನ್ನು 'ಅಣ್ಣ ಫ್ರಂ ಮೆಕ್ಸಿಕೊ' ಹಾಗೂ 'ನಾಡಪ್ರಭು ಕೆಂಪೇಗೌಡ' ಸಿನಿಮಾಗಳು ಘೋಷಣೆ ಆಗಿದೆ.

More from Filmibeat

English summary
Kannada actor Dhananjay gets engaged to dhanyatha; see pics
Read more about: dhananjay sandalwood kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X