ಹಾಲಿವುಡ್‌ನಲ್ಲಿ ನಟ ಡಾಲಿ ಧನಂಜಯ್, ಎಲ್ಲರ ಕಣ್ಣು ನಾಗಭೂಷಣ ಪಂಚೆ ಮೇಲೆ!

ಕನ್ನಡದ ಪ್ರತಿಭಾವಂತ ನಟ ಡಾಲಿ ಧನಂಜಯ್ ವಿದೇಶ ಪ್ರವಾಸದಲ್ಲಿದ್ದಾರೆ. ಶೂಟಿಂಗ್‌ಗಳಿಂದ ಬಿಡುವು ಪಡೆದುಕೊಂಡಿರುವ ಅವರು ತಮ್ಮ ಸ್ನೇಹಿತರ ಜೊತೆಯಲ್ಲಿ ಜಾಲಿ ಮೂಡ್‌ನಲ್ಲಿ ಇದ್ದಾರೆ. ಕಳೆದ ಮೂರು ದಿನಗಳಿಂದ ಅಮೆರಿಕಾ ಪ್ರವಾಸದಲ್ಲಿರುವ ಧನಂಜಯ್ ಕೆಲವು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಹಾಲಿವುಡ್ ಚಿಹ್ನೆ ಮುಂದೆ ಡಾಲಿ!

ಲಾಸ್ ಏಂಜಲೀಸ್‌ನ ಬೆಟ್ಟಗಳ ಮೇಲಿರುವ ಹಾಲಿವುಡ್ ಚಿಹ್ನೆಯ ಎದುರು ನಿಂತು ಫೋಟೋಗೆ ಫೋಸ್ ನೀಡಿದ್ದಾರೆ ನಟ ಧನಂಜಯ್. ನಟನ ಜೊತೆಗೆ ಟಗರು ಪಲ್ಯ ನಾಯಕ ನಾಗಭೂಷಣ ಸೇರಿದಂತೆ ಇನ್ನೂ ಮೂವರು ಇದ್ದಾರೆ. ಐವರ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ.

Actor Daali Dhananjaya, Nagabhushana and Friends on abroad trip

ಗುಡ್ ಮಾರ್ನಿಂಗ್ ಫ್ರಮ್ ಹಾಲಿವುಡ್ ಎಂದು ಧನಂಜಯ್ ಫೋಟೋ ಶೇರ್ ಮಾಡಿದ್ದಾರೆ. ಹಾಲಿವುಡ್ ಚಿಹ್ನೆ ಮುಂದೆ ನಿಂತಿರುವ ಧನಂಜಯ್ ಮತ್ತು ಅವರ ಹಿಂಬದಿಯಲ್ಲಿರುವ ಪರಿಸರ ತುಂಬಾ ಸುಂದರವಾಗಿ ಕಾಣಿಸುತ್ತಿದೆ. ಇನ್ನೊಂದು ಫೋಟೋದಲ್ಲಿ ನಟ ನಾಗಭೂಷಣ್ ಜೊತೆಗೆ ಸ್ನೇಹಿತರು ಇದ್ದಾರೆ. ಲಾಸ್ ಏಂಜಲೀಸ್‌ನ ಮೇಲಿನ ಬೆಟ್ಟಗಳ ಮೇಲೆ "ಹಾಲಿವುಡ್‌ಲ್ಯಾಂಡ್" ಚಿಹ್ನೆಯನ್ನು 1923 ರಲ್ಲಿ ರಿಯಲ್ ಎಸ್ಟೇಟ್ ಡೆವಲಪರ್‌ಗಳಾದ ವುಡ್‌ರಫ್ ಮತ್ತು ಶೌಲ್ಟ್ಸ್‌ ನಿರ್ಮಿಸಿದ್ದರು.

ಎಲ್ಲರ ಕಣ್ಣು ನಾಗಭೂಷಣ ಪಂಚೆ ಮೇಲೆ!

ನಟ ರಾಕ್ಷಸ ಧನಂಜಯ್ ಹಂಚಿಕೊಂಡಿರುವ ಚಿತ್ರಗಳಿಗೆ ಅಭಿಮಾನಿಗಳು ಭಾರೀ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಅದರಲ್ಲೂ ನಟ ನಾಗಭೂಷಣ್ ಪಂಚೆಯಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಸಕತ್ ಆಗಿ ಕಾಣಿಸಿಕೊಂಡಿರುವ ನಾಗಭೂಷಣ, ಗಾಢ ನೀಲಿ ಬಣ್ಣದ ಟೀ ಶರ್ಟ್ ಮೇಲೆ, ನೀಲಿ ಬಣ್ಣದ ಕಲರ್ ಪಂಚೆ ಧರಿಸಿದ್ದಾರೆ.

ಇದಕ್ಕೆ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಅಭಿಮಾನಿಯೊಬ್ಬರು 'ಭೂಷಣ ಪಂಚೆ ರಾಕ್ಸ್, ಹಾಲಿವುಡ್‌ನಲ್ಲಿ ಪಂಚೆ ಹಾಕ್ಕೊಂಡಿ ಅಲ್ಲ, ನೀನ್ ಸೂಪರ್ ಗುರು' ಎಂದು ಹೇಳಿದ್ದಾರೆ. ಮತ್ತಷ್ಟು ಮಂದಿ 'ನಾಗ್ ಅವರ ಪಂಚೆ ವೇಷಭೂಷಣ ಸಕತ್ ಆಗಿದೆ', '1 ರೂಪಾಯಿ ಪೆಪ್ಸಿ.. ನಾಗು ಭಾಯಿ ಲುಂಗಿ ಸೆಕ್ಸಿ', 'ಇದು ಇದು ಈ ಚೆಕ್ಸ್ ಲುಂಗಿ ಬೇಕಿತ್ತು ಬಾಲಿವುಡ್‌ನಲ್ಲಿ', 'ನಾಗಭೂಷಣ ಸಕತ್, ಏಕೆಂದರೆ ಅವರು ನಮ್ಮ ಸಾಂಪ್ರದಾಯಿಕ ಪಂಚೆ ಧರಿಸಿದ್ದಾರೆ' ಎಂದು ಕಾಮೆಂಟ್ ಮಾಡಿದ್ದಾರೆ.

Actor Daali Dhananjaya, Nagabhushana and Friends on abroad trip

ಡಾಲಿ ಧನಂಜಯ್

ನಟ ಡಾಲಿ ಧನಂಜಯ್ ಕನ್ನಡದ ನಟರಾದರೂ ತೆಲುಗು ಭಾಷೆಯಲ್ಲಿಯೂ ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತೆಲುಗಿನ ಬಹುನಿರೀಕ್ಷಿತ ಸಿನಿಮಾ ಪುಷ್ಪ- ದಿ ರೂಲ್ ನಲ್ಲಿ ಜಾಲಿ ರೆಡ್ಡಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಭಾಗದಲ್ಲಿ ಪುಷ್ಪರಾಜ್‌ನಿಂದ ಒದೆ ತಿಂದು ಸೇಡಿಗಾಗಿ ಕಾಯುತ್ತಿರುವವರ ಮಧ್ಯೆ ಜಾಲಿ ರೆಡ್ಡಿ ಕೂಡ ಒಬ್ಬರು. ಸದ್ಯ ಧನಂಜಯ್ ಪುಷ್ಪ - 2 ಶೂಟಿಂಗ್‌ಗೆ ತಯಾರಿ ನಡೆಸುತ್ತಿದ್ದಾರೆ.

ಸೆಪ್ಟೆಂಬರ್ 18 ರಂದು ಧನಂಜಯ್ ಮತ್ತು ಜಗ್ಗೇಶ್ ಅಭಿನಯದ ತೋತಾಪುರಿ 2 ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಧನಂಜಯ್ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಪ್ರೀತಿಗಾಗಿ ಕ್ರಿಶ್ಚಿಯನ್ ಹುಡುಗಿ ಹಿಂದೆ ಬೀಳುವ, ಆಕೆಗಾಗಿ ಧರ್ಮವನ್ನು ಬದಲಿಸಿಕೊಳ್ಳಲು ಸಿದ್ಧವಿರುವ ಪ್ರೇಮಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ನಟ ನಾಗಭೂಷಣ

ಡಾಲಿ ಧನಂಜಯ್ ಸ್ನೇಹಿತ, ನಟ ನಾಗಭೂಷಣ ಟಗರು ಪಲ್ಯ ಚಿತ್ರದ ಮೂಲಕ ತೆರೆಗೆ ಬರಲು ಸಿದ್ಧರಾಗಿದ್ದಾರೆ. ಈ ಸಿನಿಮಾ ಮೂಲಕ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ನಾಯಕಿಯಾಗಿ ಸಿನಿಮಾ ರಂಗಕ್ಕೆ ಕಾಲಿರಿಸುತ್ತಿದ್ದಾರೆ. ಡಾಲಿ ಧನಂಜಯ್ ತಮ್ಮದೆ ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿರುವ 'ಟಗರು ಪಲ್ಯ' ಶೂಟಿಂಗ್ ಮುಗಿದಿದ್ದು, ಬಿಡುಗಡೆಗೂ ಸಜ್ಜಾಗುತ್ತಿದೆ.

More from Filmibeat

English summary
Actor Daali Dhananjaya, Nagabhushana and Friends on abroad trip.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X