ಯಾಕಪ್ಪ ನಾಗಭೂಷಣ... ಜವಾಬ್ದಾರಿ ಇಲ್ಲ ನಿಂಗೆ.. ಡಾಲಿ ಧನಂಜಯ್ ಹಿಂಗ್ಯಾಕೆ ಅಂದ್ರು?
ಟಗರು ಪಲ್ಯ ನಾಯಕ ನಟ ನಾಗಭೂಷಣ ಅವರ ಮೊಬೈಲ್ ಕಾಣಿಸುತ್ತಿಲ್ಲವಂತೆ. ಹೌದು...ಅವರೇ ನನ್ನ ಮೊಬೈಲ್ ಕಾಣಿಸುತ್ತಿಲ್ಲ ಎಂದು ವಿಡಿಯೋ ಮಾಡಿ ಬಿಡುಗಡೆ ಮಾಡಿದ್ದಾರೆ. ಇದಕ್ಕೆ ನಟ ಡಾಲಿ ಧನಂಜಯ್ ಪ್ರತಿಕ್ರಿಯೆ ನೀಡಿದ್ದಾರೆ. ಅದು ಎಷ್ಟು ಚೆನ್ನಾಗಿ ಅಂತ ಗೊತ್ತಾ? ಮುಂದೆ ಓದಿ...
ಡಾಲಿ ಪಿಚ್ಚರ್ಸ್ ಹಂಚಿಕೊಂಡಿರುವ ಪೋಸ್ಟರ್‌ನಲ್ಲಿ ಮಾತನಾಡಿರುವ ನಟ ನಾಗಭೂಷಣ, "ಬೆಳಗ್ಗೆಯಿಂದ ನನ್ನ ಮೊಬೈಲ್ ಕಾಣಿಸುತ್ತಿಲ್ಲ. ಬೆಳಗ್ಗೆಯಿಂದ ಸೋಷಿಯಲ್ ಮೀಡಿಯಾದಲ್ಲಿ ನನ್ನ ಅಕೌಂಟ್‌ಯಿಂದ ಕೆಲವು ಪೋಸ್ಟ್ ಆಗ್ತಾಯಿದೆ ಅಂತಮ ಕೇಳ್ಪಟ್ಟೆ. ದಯವಿಟ್ಟು ನನ್ನ ಮೊಬೈಲ್‌ನಿಂದ ಕಾಲ್, ಮೆಸೇಜ್ ಬಂದ್ರೆ ದಯವಿಟ್ಟು ಇಗ್ನೋರ್ ಮಾಡಿ. ಧನ್ಯವಾದ" ಎಂದು ಹೇಳಿದ್ದಾರೆ.

ಈ ವಿಡಿಯೋವನ್ನು ಡಾಲಿ ಧನಂಜಯ್ ಅವರ ಡಾಲಿ ಪಿಚ್ಚರ್ಸ್ ಪೋಸ್ಟ್ ಮಾಡಿದೆ. ಜೊತೆಗೆ "ಎಲ್ಲರ ಗಮನಕ್ಕೆ ನಮ್ಮ ಟಗರು ಪಲ್ಯ ನಾಯಕ ನಾಗಭೂಷಣ ಅವರ ಫೋನ್ ಕಳೆದು ಹೋಗಿದೆ. Pls ignore his social media posts" ಎಂದು ಶೀರ್ಷಿಕೆ ನೀಡಿದೆ.
ಈ ಪೋಸ್ಟ್‌ಗೆ ನಟ ಧನಂಜಯ್ ಪ್ರತಿಕ್ರಿಯೆ ನೀಡಿದ್ದಾರೆ. ವಿಡಿಯೋ ಹಂಚಿಕೊಂಡಿರುವ ಅವರು ಒಂಥರಾ ಹಾಸ್ಯ ಮತ್ತು ಅತಂಕದ ರೀತಿಯಲ್ಲಿ, "ಯಾಕಪ್ಪ ನಾಗಭೂಷಣ, ಏನೇನಿತ್ತೊ ಮೊಬೈಲಲ್ಲಿ... ಜವಾಬ್ದಾರಿ ಇಲ್ಲ ನಿಂಗೆ... ನಮ್ದೆಲ್ಲ ಏನೇನ್ ವಿಡಿಯೋ ಕ್ಲಿಪ್ಸ್ ಇತ್ತೊ ಏನೊ" ಎಂದು ತಲೆ ಹೊಡೆದುಕೊಳ್ಳುವ ಎಮೊಜಿ ಮೂಲಕ ಪ್ರಶ್ನಿಸಿದ್ದಾರೆ. ಜೊತೆಗೆ ನಟ ನಾಗಭೂಷಣ ಅವರನ್ನು ಟ್ಯಾಗ್ ಮಾಡಿದ್ದಾರೆ.
ಸೋಮವಾರ ಬೆಳಗ್ಗೆ ನಟ ನಾಗಭೂಷಣ ಅವರ ಖಾತೆಯಿಂದ "Fance,#CyrptoLoverr ಟೆಸ್ಟ್ ಪೂರ್ಣಗೊಳಿಸಿ ಮತ್ತು ನಿಮ್ಮ ಪ್ರೀತಿಪಾತ್ರರ ಜೊತೆ ಸ್ನೇಹ ದಿನ ಆಚರಿಸಲು 500 ಡಾಲರ್ ಫಿಯನ್ಸ್ ಗಿಫ್ಟ್ ಕಾರ್ಡ್ ಅನ್ನು ಗೆಲ್ಲಿರಿ" ಎಂಬ ಪೋಸ್ಟ್ ಮತ್ತು ಇದಕ್ಕೆ ಸಂಬಂಧಿಸಿದಂತೆ ಮತ್ತೊಂದು ಪೋಸ್ಟ್ ಕಾಣಿಸಿಕೊಂಡಿದೆ.

ಇದರ ಬೆನ್ನಲ್ಲೆ ನಟ ವಿಡಿಯೋ ಮಾಡಿ ಪೋಸ್ಟ್‌ಗಳನ್ನು ನಿರ್ಲಕ್ಷಿಸಿ ಎಂದು ಹೇಳಿದ್ದಾರೆ. ಆದರೆ, ಈ ವಿಡಿಯೋಗೆ ಧನಂಜಯ್ ಅಭಿಮಾನಿಗಳು ತರಾವರಿ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಇದೆಲ್ಲಾ ಬರಿ ಗಿಮಿಕ್ ಎಂದು ಹಲವು ಮಂದಿ ಹೇಳಿದ್ದಾರೆ. ಸಿನಿಮಾವನ್ನು ಪ್ರಮೋಟ್ ಮಾಡಲು ಚಿತ್ರತಂಡದ ಪ್ಲ್ಯಾನ್ ಇದು ಎಂದು ಹೇಳಿದ್ದಾರೆ.
ಇದ್ಯಾಕೋ ಸಿನಿಮಾ ಪ್ರಮೋಷನ್ ಅನ್ನಿಸ್ತಿದೆ ನಂಗೆ ಎಂದು ಒಬ್ಬರು ಹೇಳಿದರೇ, ಮತ್ತೊಬ್ಬರು, ಪ್ರಮೋಷನ್ ಮಾಡೋಕೆ ಒಳ್ಳೆ ಪ್ಲ್ಯಾನ್ ಮಾಡಿದ್ದಿರಾ ಎಂದಿದ್ದಾರೆ. ವಿಡಿಯೋಗಳು ಇದ್ದವು ಎಂಬುದಕ್ಕೆ ಕಿಚಾಯಿಸಿರುವ ಅಭಿಮಾನಿಯಿಬ್ಬರು, ನಿಮ್ದೇಲ್ಲ ಏನೇನ್ ವಿಡಿಯೋ ಇತ್ತಣ್ಣ ಎಂದು ಪ್ರಶ್ನಿಸಿದ್ದಾರೆ. ಇನ್ನೋಬ್ಬರು ಮೊದಲು ಕೋರ್ಟ್‌ಗೆ ಹೋಗಿ ತಡೆಯಾಜ್ಞೆ ತನ್ನಿ ಎಂದು ಕಾಲೆಳೆದಿದ್ದಾರೆ.
ಟಗರು ಪಲ್ಯ
ನಟ ನಾಗಭೂಷಣ್ ನಾಯಕನಾಗಿ ಮತ್ತು ನಟಿ ಅಮೃತಾ ಪ್ರೇಮ್ ನಾಯಕಿಯಾಗಿ ಕಾಣಿಸಿಕೊಂಡಿರುವ ಸಿನಿಮಾ ಟಗರು ಪಲ್ಯ. ಡಾಲಿ ಧನಂಜಯ್ ತಮ್ಮದೆ ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿರುವ 3ನೇ ಸಿನಿಮಾ 'ಟಗರು ಪಲ್ಯ'. ಸಿನಿಮಾ ಶೂಟಿಂಗ್ ಮುಗಿದಿದ್ದು, ಬಿಡುಗಡೆಗೂ ಸಜ್ಜಾಗುತ್ತಿದೆ. ಜೊತೆಗೆ ಇತ್ತೀಚೆಗೆ ಟೈಟಲ್ ಟ್ರ್ಯಾಕ್ ರಿಲೀಸ್ ಆಗಿತ್ತು.
ಉಮೇಶ್ ಕೆ ಕೃಪಾ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಇದಯು ಅವರಿಗೆ ಮೊದಲ ಸಿನಿಮಾ. ಇನ್ನು ಟಗರು ಪಲ್ಯ ಚಿತ್ರದ ಮೂಲಕ ನಟ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಮಂಡ್ಯ ಜಿಲ್ಲೆಯ ಹಳ್ಳಿ ಭಾಗದಲ್ಲಿ ದೇವಸ್ಥಾನದ ಆವರಣದಲ್ಲಿ ಅಡುಗೆ ಮಾಡಿ ಅದನ್ನು ದೇವರಿಗೆ ಅರ್ಪಿಸುವ ಗ್ರಾಮೀಣ ಸಂಪ್ರದಾಯದ ಬಗ್ಗೆ ಸಿನಿಮಾ ಹೇಳುತ್ತದೆ ಎನ್ನಲಾಗಿದೆ.


Click it and Unblock the Notifications











