For Quick Alerts
  ALLOW NOTIFICATIONS  
  For Daily Alerts

  ದಾನಿಶ್ ಸೇಠ್ ಮದುವೆಯಾಗಲಿರುವ ಹುಡುಗಿ ಇವರೇ!

  |

  ಭಾರತದ ಸ್ಟ್ಯಾಂಡ್ ಅಪ್ ಕಾಮಿಡಿಯನ್, ಕಿರುತೆರೆ ನಿರೂಪಕ ಹಾಗೂ ಸಿನಿಮಾ ನಟ ದಾನಿಶ್ ಸೇಠ್ ಅವರ ವೈಯಕ್ತಿಕ ವಿಚಾರದ ಬಗ್ಗೆ ಸರ್ಪ್ರೈಸ್ ಸುದ್ದಿ ಹೊರಬಿದ್ದಿದೆ.

  ತನ್ನ ಪ್ರೇಯಸಿಯನ್ನು ಪರಿಚಯ ಮಾಡಿಸಿದ Danish Sait | Filmibeat Kannada

  ದಾನಿಶ್ ಸೇಠ್ ಮದುವೆಯಾಗುವ ಹುಡುಗಿಯನ್ನು ಪರಿಚಯಿಸಿದ್ದಾರೆ. ದೀರ್ಘಕಾಲದ ಗೆಳತಿ ಅನ್ಯಾ ರಂಗಸ್ವಾಮಿ ಅವರ ಜೊತೆ ಶೀಘ್ರದಲ್ಲಿ ದಾಂಪತ್ಯ ಜೀವನ ಆರಂಭಿಸುವ ಬಗ್ಗೆ ಸುಳಿವು ನೀಡಿದ್ದಾರೆ.

  ಪಾಪ ದಾನಿಶ್ ಸೇಠ್‌ಗೆ ಹೀಗಾ ಬಯ್ಯೋದು ಪುನೀತ್ ರಾಜ್‌ಕುಮಾರ್ಪಾಪ ದಾನಿಶ್ ಸೇಠ್‌ಗೆ ಹೀಗಾ ಬಯ್ಯೋದು ಪುನೀತ್ ರಾಜ್‌ಕುಮಾರ್

  ಆನ್ಯಾ ರಂಗಸ್ವಾಮಿ ಜೊತೆಗಿನ ಆತ್ಮೀಯ ಫೋಟೋ ಹಂಚಿಕೊಂಡಿರುವ ದಾನಿಶ್ ಸೇಠ್ ''ತನ್ನ ಜೀವನವನ್ನು ನನ್ನ ಜೊತೆ ಮುಂದುವರಿಸಲು ಆಕೆ ಸಮ್ಮತಿಸಿದ್ದಾಳೆ, ತುಂಬಾ ಖುಷಿ ಆಗ್ತಿದೆ, ಧನ್ಯವಾದ'' ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.

  ವೃತ್ತಿಯಲ್ಲಿ ಗ್ರಾಫಿಕ್ಸ್ ಡಿಸೈನರ್ ಆಗಿರುವ ಆನ್ಯಾ ರಂಗಸ್ವಾಮಿ ಮುಂಬೈನಲ್ಲಿ ಸ್ವತಂತ್ರವಾಗಿ ಕೆಲಸ ಮಾಡುತ್ತಿದ್ದಾರೆ. ಇನ್ನುಳಿದಂತೆ ಆನ್ಯಾ ಕುರಿತು ಹೆಚ್ಚೇನು ತಿಳಿದು ಬಂದಿಲ್ಲ.

  ಇನ್ನು ಕ್ರಿಕೆಟ್ ಕುರಿತು ಹಲವು ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿರುವ ದಾನೀಶ್ ಸೇಠ್ ಅವಾರ್ಡ್ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. 'ಹಂಬಲ್ ಪೊಲಿಟಿಶಿಯನ್ ನೊಗರಾಜ್' ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿಯಾದ ದಾನೀಶ್ ನಂತರ ಹಿಂದಿಯ ವೆಬ್‌ ಸಿರೀಸ್‌ನಲ್ಲೂ ನಟಿಸಿದರು.

  ಕನ್ನಡದಲ್ಲಿ ಬೈದ ವಿದ್ಯಾ ಬಾಲನ್! ಎಲ್ಲಾ ಶ್ರೇಯ ದಾನಿಶ್ ಸೇಠ್‌ಗೆಕನ್ನಡದಲ್ಲಿ ಬೈದ ವಿದ್ಯಾ ಬಾಲನ್! ಎಲ್ಲಾ ಶ್ರೇಯ ದಾನಿಶ್ ಸೇಠ್‌ಗೆ

  ಲಾಕ್‌ಡೌನ್ ಸಮಯದಲ್ಲಿ ತೆರೆಕಂಡ 'ಫ್ರೆಂಚ್ ಬಿರಿಯಾನಿ' ಚಿತ್ರದಲ್ಲಿ ದಾನೀಶ್ ಸೇಠ್ ಪ್ರಮುಖ ಪಾತ್ರ ನಿರ್ವಹಿಸಿದ್ದರು. ರಕ್ಷಿತ್ ಶೆಟ್ಟಿ ನಟನೆಯ ಚಾರ್ಲಿ 777 ಸಿನಿಮಾದಲ್ಲೂ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  English summary
  Indian stand-up comedian, television host, radio jockey, Actor Danish Sait Has introduce His Girlfriend.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X