ಖಿನ್ನತೆ ಬಗ್ಗೆ ಬಹಿರಂಗವಾಗಿ ಹೇಳಿಕೊಂಡ ಡ್ಯಾನಿಶ್ ಸೇಠ್ ಗೆ ದೀಪಿಕಾ ಪಡುಕೋಣೆ ಹೇಳಿದ್ದೇನು?

ಬಾಲಿವುಡ್ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಕಾರಣ ಖಿನ್ನತೆ ಎಂದು ಹೇಳಲಾಗುತ್ತಿದೆ. ಕಳೆದ 6 ತಿಂಗಳಿಂದ ಸುಶಾಂತ್ ಖಿನ್ನತೆಯಿಂದ ಬಳಲುತ್ತಿದ್ದರಂತೆ. ಸುಶಾಂತ್ ಸಾವಿನ ಬೆನ್ನಲ್ಲೆ ಅನೇಕರು ಖಿನ್ನತೆ ಬಗ್ಗೆ ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದಾರೆ.

Recommended Video

ಕೆ ಎಲ್ ರಾಹುಲ್ ಅವರನ್ನು ತರಾಟೆಗೆ ತೆಗೆದುಕೊಂಡ ಅಭಿಮಾನಿಗಳು | KL Rahul | Filmibeat Kannada

ಇದೀಗ ಸ್ಯಾಂಡಲ್ ವುಡ್ ನ 'ಹಂಬಲ್ ಪೊಲಿಟಿಶಿಯನ್ ನೋಗರಾಜ್' ಸಿನಿಮಾ ಖ್ಯಾತಿಯ ನಟ ಡ್ಯಾನಿಶ್ ಸೇಠ್ ಸಹ ಖಿನ್ನತೆಯಿಂದ ಬಳಲುತ್ತಿದ್ದ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಈ ಬಗ್ಗೆ ಸ್ವತಹ ಡ್ಯಾನಿಶ್ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ತನ್ನ ಕೆಟ್ಟ ದಿನಗಳ ಬಗ್ಗೆ ಡ್ಯಾನಿಶ್ ಬಿಚ್ಚಿಟ್ಟಿದ್ದಾರೆ. ಮುಂದೆ ಓದಿ...

ಡ್ಯಾನಿಶ್ ಗೂ ಕಾಡಿತ್ತು ಖಿನ್ನತೆ

ಡ್ಯಾನಿಶ್ ಗೂ ಕಾಡಿತ್ತು ಖಿನ್ನತೆ

ತೆರೆಮೇಲೆ ಎಲ್ಲರನ್ನೂ ನಗಿಸುತ್ತ, ನಗುತ್ತಿರುವ ಡ್ಯಾನಿಶ್ ಸಹ ಖಿನ್ನತೆಯಿಂದ ಬಳಲುತ್ತಿದ್ದರು. ಈ ಬಗ್ಗೆ ಹೇಳಿಕೊಂಡಿರುವ ಡ್ಯಾನಿಶ್ ಕಷ್ಟವನ್ನು ಅರ್ಥ ಮಾಡಿಕೊಳ್ಳಲು, ವಿವರಿಸಲು ಸಾಧ್ಯವಿಲ್ಲ. ವೈದ್ಯರೇ ಏಕೈಕ ಭರವಸೆ ಎಂದು ಹೇಳಿದ್ದಾರೆ. ಬಹಿರಂಗವಾಗಿ ಹೇಳಿಕೊಂಡ ಡ್ಯಾನಿಶ್ ನಡೆಗೆ ನಟಿ ದೀಪಿಕಾ ಪಡುಕೋಣೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಡ್ಯಾನಿಶ್ ಸೇಠ್ ಟ್ವೀಟ್

ಡ್ಯಾನಿಶ್ ಸೇಠ್ ಟ್ವೀಟ್

"ಥೆರಪಿ ಮತ್ತು ಆಂಟಿ ಡಿಪ್ರೆಸೆಂಟ್ ಗಳ ಮೂಲಕ ನನ್ನ 3ನೇ ವರ್ಷ. ಸಿಪ್ರಲೆಕ್ಸ್ ಟ್ಯಾಬ್ಲೆಟ್ ತೆಗೆದುಕೊಳ್ಳದೆ ನಾನು ರಾತ್ರಿ ಮಲಗುವುದಿಲ್ಲ. ಖಿನ್ನತೆಯು ಬೇರೆ ರೋಗಗಳಂತೆ ಕಾಣುವುದಿಲ್ಲ. ನಿಮಗೆ ಒಲಗಿನಿಂದ ಏನು ಅನಿಸುವುದಿಲ್ಲ, ವಿವರಿಸಲು ಕಷ್ಟ, ಅರ್ಥಮಾಡಿಕೊಳ್ಳಲು ಕಷ್ಟ. ವೈದ್ಯರು ಮತ್ತು ವೃತ್ತಿಪರರು ನನ್ನ ಏಕೈಕ ಭರವಸೆ" ಎಂದು ಡ್ಯಾನಿಶ್ ಸೇಠ್ ಖಿನ್ನತೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ದೀಪಿಕಾ ಪಡುಕೋಣೆ ಪ್ರತಿಕ್ರಿಯೆ

ದೀಪಿಕಾ ಪಡುಕೋಣೆ ಪ್ರತಿಕ್ರಿಯೆ

ಬಹಿರಂಗವಾಗಿ ಹೇಳಿಕೊಂಡ ಡ್ಯಾನಿಶ್ ಸೇಠ್ ಗೆ ನಟಿ ದೀಪಿಕಾ ಪಡುಕೋಣೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಡ್ಯಾನಿಶ್ ಗೆ ಪ್ರತಿಕ್ರಿಯೆ ನೀಡಿರುವ ದೀಪಿಕಾ, "ಅನೇಕರು ಹೊರಬಂದು ಮಾನಸಿಕ ಅಸ್ವಸ್ಥತೆಯೊಂದಿಗೆ ನಿಮ್ಮ ಅನುಭವವನ್ನು ಹಂಚಿಕೊಳ್ಳುತ್ತಿರುವುದು ಅತ್ಯಂತ ಹೃದಯಸ್ಪರ್ಶಿಯಾಗಿದೆ. ಆದರೆ ಔಷಧಿಗಳು ಮತ್ತು ಅವುಗಳ ಡೋಸೇಜ್ ವಿಶೇಷತೆ ಬಗ್ಗೆ ತಿಳಿಸದಿರುವುದೇ ಉತ್ತಮ. ಯಾಕೆಂದರೆ, ಒಂದೆ ರೀತಿಯ ಔಷಧಿ ಎಲ್ಲರಿಗೂ ಹೊಂದಿಕೆಯಾಗಲ್ಲ. ಅಲ್ಲದೆ ದುರುಪಯೋಗ ಪಡೆಸಿಕೊಳ್ಳುವ ಸಾಧ್ಯತೆ ಇದೆ" ಎಂದು ಹೇಳಿದ್ದಾರೆ.

ಫ್ರೆಂಚ್ ಬಿರಿಯಾನಿ ರೆಡಿಯಾಗಿದೆ

ಫ್ರೆಂಚ್ ಬಿರಿಯಾನಿ ರೆಡಿಯಾಗಿದೆ

ಸ್ಯಾಂಡಲ್ ವುಡ್ ನಲ್ಲಿ ಹಂಬಲ್ ಪೊಲಿಟಿಶಿಯನ್ ನೋಗರಾಜ್ ಸಿನಿಮಾ ಮೂಲಕ ದೊಡ್ಡ ಪರದೆ ಮೇಲೆ ಮಿಂಚಿದ್ದ ಡ್ಯಾನಿಶ್ ಸೇಠ್ ಸದ್ಯ ಫ್ರೆಂಚ್ ಬಿರಿಯಾನಿ ಮೂಲಕ ಮತ್ತೆ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ಪಿ ಆರ್ ಕೆ ಪ್ರೊಡಕ್ಷನ್ ನಲ್ಲಿ ಸಿನಿಮಾ ಮೂಡಿಬಂದಿದೆ. ಸಿನಿಮಾವನ್ನು ಒಟಿಟಿಯಲ್ಲಿ ರಿಲೀಸ್ ಮಾಡಲಾಗುತ್ತಿದೆ. ಜುಲೈ 24ಕ್ಕೆ ಸಿನಿಮಾ ಅಮೆಜಾನ್ ಪ್ರೈಮ್ ನಲ್ಲಿ ತೆರೆಗೆ ಬರುತ್ತಿದೆ.

More from Filmibeat

English summary
Actor Danish Sait reveals he is battling Depression. deepika padukone react to danish sait's mental illness.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X