For Quick Alerts
  ALLOW NOTIFICATIONS  
  For Daily Alerts

  ಇನ್ನು 9 ದಿನಕ್ಕೆ ಲಕ್ಕಿ ಮ್ಯಾನ್ ಅಮೆಜಾನ್‌ನಲ್ಲಿ ರಿಲೀಸ್? ಸತ್ಯ ಬಾಯ್ಬಿಟ್ಟ ಡಾರ್ಲಿಂಗ್ ಕೃಷ್ಣ!

  |

  ಲಕ್ಕಿ ಮ್ಯಾನ್ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಕಮರ್ಷಿಯಲ್ ಚಿತ್ರ. ಪುನೀತ್ ನಿಧನದ ನಂತರ ಬಿಡುಗಡೆಯಾಗದೇ ಉಳಿದುಕೊಂಡಿದ್ದ ಜೇಮ್ಸ್, ಲಕ್ಕಿ ಮ್ಯಾನ್ ಹಾಗೂ ಗಂಧದಗುಡಿ ಪೈಕಿ ಆಗಲೇ ಜೇಮ್ಸ್ ಬಿಡುಗಡೆಗೊಂಡಿದ್ದು, ಸದ್ಯ ಲಕ್ಕಿ ಮ್ಯಾನ್ ಮೂಲಕ ಪುನೀತ್ ಅವರ ಕಮರ್ಷಿಯಲ್ ಚಿತ್ರಗಳು ಮುಕ್ತಾಯಗೊಳ್ಳಲಿವೆ. ಇನ್ನು ಅಕ್ಟೋಬರ್ ತಿಂಗಳಿನಲ್ಲಿ ಬಿಡುಗಡೆಯಾಗಲಿರುವ ಡಾಕ್ಯುಮೆಂಟರಿ ಗಂಧದಗುಡಿ ಚಿತ್ರದ ಮೂಲಕ ಪುನೀತ್ ರಾಜ್ ಕುಮಾರ್ ಅವರನ್ನು ಮತ್ತೊಮ್ಮೆ ತೆರೆಮೇಲೆ ನಾವು ನೋಡಬಹುದಾದರೂ ಅದರಲ್ಲಿ ಪುನೀತ್ ರಾಜ್ ಕುಮಾರ್ ಅವರ ಡ್ಯಾನ್ಸ್ ಹಾಗೂ ಫೈಟ್ ನೋಡಲಿಕ್ಕೆ ಸಿಗುವುದಿಲ್ಲ.

  ಹೀಗಾಗಿ ತಮ್ಮ ನೆಚ್ಚಿನ ನಟನ ಕುಣಿತವನ್ನು ಕೊನೆಯ ಬಾರಿಗೆ ಬೆಳ್ಳಿ ಪರದೆ ಮೇಲೆ ಕಣ್ತುಂಬಿಕೊಳ್ಳುವ ಅವಕಾಶವನ್ನು ಈ ಲಕ್ಕಿ ಮ್ಯಾನ್ ಚಿತ್ರ ಕಲ್ಪಿಸಿಕೊಟ್ಟಿದ್ದು, ಅಪ್ಪು ಅಭಿಮಾನಿಗಳು ಥಿಯೇಟರ್ ಕಡೆ ಮುನ್ನುಗ್ಗುತ್ತಿದ್ದಾರೆ. ತಮಿಳಿನ 'ಒ ಮೈ ಕಡವುಲೆ' ಚಿತ್ರದ ರಿಮೇಕ್ ಆಗಿರುವ ಲಕ್ಕಿ ಮ್ಯಾನ್ ಚಿತ್ರಕ್ಕೆ ಪ್ರಭುದೇವ ಸಹೋದರ ನಾಗೇಂದ್ರ ಪ್ರಸಾದ್ ನಿರ್ದೇಶನವಿದ್ದು, ಡಾರ್ಲಿಂಗ್ ಕೃಷ್ಣ ಹಾಗೂ ಸಂಗೀತ ಶೃಂಗೇರಿ ನಾಯಕ ಮತ್ತು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

  ಇನ್ನು ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ದೇವರ ಪಾತ್ರವನ್ನು ನಿರ್ವಹಿಸಿದ್ದು, ಇದು ಪುನೀತ್ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಕನೆಕ್ಟ್ ಆದ ಅಂಶವಾಗಿದೆ. ಚಿತ್ರಮಂದಿರಕ್ಕೆ ಬಂದು ಚಿತ್ರ ವೀಕ್ಷಿಸಿದ ಪುನೀತ್ ಅಭಿಮಾನಿಗಳು ಮಾತು ಬಾರದೇ ಕಣ್ಣೀರಿಡುತ್ತಾ ಹೊರ ನಡೆದಿದ್ದಾರೆ. ಇನ್ನು ಲಕ್ಕಿ ಮ್ಯಾನ್ ಚಿತ್ರ ಸೆಪ್ಟೆಂಬರ್ 9ರ ಶುಕ್ರವಾರದಂದು ರಾಜ್ಯಾದ್ಯಂತ ಬಿಡುಗಡೆಯಾಗಿತ್ತು ಹಾಗೂ ಬಿಡುಗಡೆಗೂ ಹಿಂದಿನ ದಿನ ರಾತ್ರಿ ಪ್ರೀಮಿಯರ್ ಶೋಗಳು ಆಯೋಜನೆಗೊಂಡಿದ್ದವು. ಪ್ರೀಮಿಯರ್ ಶೋನಲ್ಲಿ ಹೌಸ್ ಫುಲ್ ಪ್ರದರ್ಶನ ಕಂಡಿದ್ದ ಲಕ್ಕಿ ಮ್ಯಾನ್ ಚಿತ್ರ ಬಿಡುಗಡೆಯಾದ ನಂತರವೂ ತುಂಬಿದ ಪ್ರದರ್ಶನ ಕಾಣುತ್ತಿದೆ. ಹೀಗೆ ಬಿಡುಗಡೆಯಾಗಿ ಐದಾರು ದಿನ ಕಳೆದ ಬೆನ್ನಲ್ಲೇ ಲಕ್ಕಿ ಮ್ಯಾನ್ ಅತಿವೇಗವಾಗಿ ಓಟಿಟಿಗೆ ಬರಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಕುರಿತು ನಟ ಡಾರ್ಲಿಂಗ್ ಕೃಷ್ಣ ಸಂದರ್ಶನವೊಂದರಲ್ಲಿ ಮಾತನಾಡಿ ನೇರವಾದ ಉತ್ತರವನ್ನು ನೀಡಿದ್ದಾರೆ.

  ಸೈಮಾ 2022: ಅಪ್ಪುಗೆ ಅತ್ಯುತ್ತಮ ನಟ ಪ್ರಶಸ್ತಿ; ಪುನೀತ್ ಬದಲಾಗಿ ಪ್ರಶಸ್ತಿ ಸ್ವೀಕರಿಸಿದ ನಟ ಯಾರು?ಸೈಮಾ 2022: ಅಪ್ಪುಗೆ ಅತ್ಯುತ್ತಮ ನಟ ಪ್ರಶಸ್ತಿ; ಪುನೀತ್ ಬದಲಾಗಿ ಪ್ರಶಸ್ತಿ ಸ್ವೀಕರಿಸಿದ ನಟ ಯಾರು?

  ಸೆಪ್ಟೆಂಬರ್‌ 23ಕ್ಕೆ ಲಕ್ಕಿ ಮ್ಯಾನ್ ಓಟಿಟಿ?

  ಸೆಪ್ಟೆಂಬರ್‌ 23ಕ್ಕೆ ಲಕ್ಕಿ ಮ್ಯಾನ್ ಓಟಿಟಿ?

  ಲಕ್ಕಿ ಮ್ಯಾನ್ ಭರ್ಜರಿ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆಯಲ್ಲಿ ಚಿತ್ರತಂಡ ಇತ್ತೀಚೆಗಷ್ಟೇ ಪತ್ರಿಕಾ ಗೋಷ್ಠಿ ಕಾರ್ಯಕ್ರಮವನ್ನು ಆಯೋಜನೆ ಮಾಡಿತ್ತು. ಈ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ನಟ ಡಾರ್ಲಿಂಗ್ ಕೃಷ್ಣ ಅವರಿಗೆ ಲಕ್ಕಿ ಮ್ಯಾನ್ ಚಿತ್ರ ಇದೇ 23ಕ್ಕೆ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಹರಿದಾಡುತ್ತಿದೆ, ಇದರ ಬಗ್ಗೆ ಏನು ಹೇಳ್ತೀರಾ ಎಂಬ ಪ್ರಶ್ನೆ ಎದುರಾಯಿತು.

  ಸತ್ಯ ಬಿಚ್ಚಿಟ್ಟ ಡಾರ್ಲಿಂಗ್ ಕೃಷ್ಣ

  ಸತ್ಯ ಬಿಚ್ಚಿಟ್ಟ ಡಾರ್ಲಿಂಗ್ ಕೃಷ್ಣ

  ಈ ಪ್ರಶ್ನೆ ಕುರಿತು ಉತ್ತರಿಸಿದ ಡಾರ್ಲಿಂಗ್ ಕೃಷ್ಣ 'ಇಲ್ಲ ಇಲ್ಲ ಇಲ್ಲಾ.. ಸುಳ್ಳು' ಎಂದು ಮಾತು ಆರಂಭಿಸುತ್ತಲೇ ಇದೇ ತಿಂಗಳ 23ಕ್ಕೆ ಯಾವುದೇ ಕಾರಣಕ್ಕೂ ಲಕ್ಕಿ ಮ್ಯಾನ್ ಒಟಿಟಿಯಲ್ಲಿ ಬಿಡುಗಡೆಯಾಗುವುದಿಲ್ಲ ಎಂಬ ಸತ್ಯವನ್ನು ಬಾಯ್ಬಿಟ್ಟಿದ್ದಾರೆ. ಈ ಮೂಲಕ ಬಿಡುಗಡೆಯಾದ ಎರಡೇ ವಾರಕ್ಕೆ ಲಕ್ಕಿ ಮ್ಯಾನ್ ಒಟಿಟಿಗೆ ಬರಲಿದೆ ಎಂದು ಮಾತನಾಡಿಕೊಳ್ಳುತ್ತಿದ್ದವರ ಬಾಯಿ ಮುಚ್ಚಿಸಿದ್ದಾರೆ.

  ಐವತ್ತು ದಿನವಂತೂ ಇದ್ದೇ ಇರುತ್ತದೆ, ದೇವಸ್ಥಾನದಲ್ಲೇ ನೋಡ್ಬೇಕು

  ಐವತ್ತು ದಿನವಂತೂ ಇದ್ದೇ ಇರುತ್ತದೆ, ದೇವಸ್ಥಾನದಲ್ಲೇ ನೋಡ್ಬೇಕು

  ಇನ್ನೂ ಮುಂದುವರಿದು ಮಾತನಾಡಿದ ಡಾರ್ಲಿಂಗ್ ಕೃಷ್ಣ ಲಕ್ಕಿ ಮ್ಯಾನ್ ಚಿತ್ರ ಏನಿಲ್ಲವೆಂದರೂ ಕನಿಷ್ಠ 50 ದಿನವಂತೂ ಚಿತ್ರಮಂದಿರದಲ್ಲಿ ಇದ್ದೇ ಇರುತ್ತದೆ ಎಂದು ಹೇಳಿಕೆಯನ್ನು ನೀಡುವುದರ ಮೂಲಕ ಐವತ್ತು ದಿನ ಪೂರೈಸುವವರೆಗೂ ಯಾವುದೇ ಕಾರಣಕ್ಕೂ ಒಟಿಟಿಯಲ್ಲಿ ಬಿಡುಗಡೆಯಾಗುವುದಿಲ್ಲ ಎಂಬ ಸ್ಪಷ್ಟ ಉತ್ತರವನ್ನು ನೀಡಿದ್ದಾರೆ. ಹಾಗೂ ದೇವರ ದರ್ಶನವನ್ನು ದೇವಸ್ಥಾನದಲ್ಲಿ ಪಡೆದರೆ ಚಂದ ಟಿವಿಯಲ್ಲಿ ಪಡೆದರೆ ಅದು ಮನೆಯಲ್ಲಿ ದರ್ಶನ ಪಡೆದಂತಾಗುತ್ತದೆ ಎಂದು ಟಾಂಗ್ ನೀಡಿದ್ದಾರೆ.

  ಲಕ್ಕಿ ಮ್ಯಾನ್ ಅಮೆಜಾನ್‌ನಲ್ಲಿ ಬರಲಿದೆ

  ಲಕ್ಕಿ ಮ್ಯಾನ್ ಅಮೆಜಾನ್‌ನಲ್ಲಿ ಬರಲಿದೆ

  ಹಾಗೂ ಐವತ್ತು ದಿನಗಳ ನಂತರ ಲಕ್ಕಿ ಮ್ಯಾನ್ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಎಂದಿರುವ ಡಾರ್ಲಿಂಗ್ ಕೃಷ್ಣ ಅಮೇಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಲಿದೆ ಎಂಬ ಸ್ಪಷ್ಟನೆಯನ್ನೂ ಕೂಡ ನೀಡಿದ್ದಾರೆ. ಈ ಮೂಲಕ ಇನ್ನೂ ಹಲವಾರು ದಿನಗಳ ತನಕ ಚಿತ್ರಮಂದಿರದಲ್ಲಿಯೇ ಲಕ್ಕಿ ಮ್ಯಾನ್ ತನ್ನ ಓಟವನ್ನು ಮುಂದುವರಿಸಲಿದ್ದು, ಆದಷ್ಟು ಬೇಗ ಮೊಬೈಲ್‌ನಲ್ಲೇ ಲಕ್ಕಿ ಮ್ಯಾನ್ ನೋಡಬಹುದು ಎಂದು ಕಾಯುತ್ತಿರುವವರು ಕಾಯುವುದನ್ನು ಬಿಟ್ಟು ಚಿತ್ರಮಂದಿರಗಳಿಗೆ ಬಂದು ಪುನೀತ್ ದರ್ಶನ ಪಡೆಯಿರಿ.

  English summary
  Actor Darling Krishna gives clarification about Lucky Man movie OTT release on September 23rd. Read on
  Wednesday, September 14, 2022, 10:00
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X