Darshan 56th Movie: ರಚಿತಾ-ಆಶಿಕಾ ಇವರಿಬ್ಬರಲ್ಲಿ ದರ್ಶನ್ 56ನೇ ಚಿತ್ರಕ್ಕೆ ನಾಯಕಿ ಯಾರು?

ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಸದ್ಯ 'ಕ್ರಾಂತಿ' ಚಿತ್ರದಲ್ಲಿ ಬ್ಯುಸಿಯಾಗಿದ್ದರೆ. 'ಕ್ರಾಂತಿ' ಚಿತ್ರ ಮುಂದೆ ರಿಲೀಸ್ ಆಗಲಿರುವ ದರ್ಶನ್ ಚಿತ್ರ. ಇದರೊಂದಿಗೆ 'ಕ್ರಾಂತಿ' ಚಿತ್ರದ ಬಳಿಕ ನಟ ದರ್ಶನ್ ಯಾವ ಚಿತ್ರದಲ್ಲಿ ಕಾಣಿಸಿಕೊಳ್ಳ ಬಹುದು ಎನ್ನುವ ಕುತೂಹಲವೂ ಮೂಡಿದೆ. 'ಕ್ರಾಂತಿ' ರಿಲೀಸ್ ಬಳಿಕವೇ ಇದಕ್ಕೆ ಉತ್ತರ ಸಿಗಲಿದೆ. ಆದರೆ ಅದಾಗಲೇ ದರ್ಶನ್ 56ನೇ ಚಿತ್ರದ ಬಗ್ಗೆ ಚರ್ಚೆ ಶುರುವಾಗಿದೆ.

'ಕ್ರಾಂತಿ' ದರ್ಶನ್ ಅಭಿನಯಿಸುತ್ತಿರುವ 55ನೇ ಚಿತ್ರ. ಸದ್ಯ ಈ ಚಿತ್ರ ಶೂಟಿಂಗ್ ಹಂತದಲ್ಲಿ ಇದೆ. 'ಕ್ರಾಂತಿ' ಬಳಿಕ ದರ್ಶನ್ 56ನೇ ಚಿತ್ರ ಸೆಟ್ಟೇರಲಿದೆ. ಈಗ ಈ ಚಿತ್ರದ ಬಗ್ಗೆ ಸುದ್ದಿ ಆಗುತ್ತಿದೆ. ಆದರೆ ಅದು ನಾಯಕಿಯರ ವಿಚಾರದಲ್ಲಿ ದರ್ಶನ್ ಮುಂದಿನ ಚಿತ್ರಕ್ಕೆ ಯಾರು ನಾಯಕಿ ಆಗಬೇಕು ಎನ್ನುವ ಬಗ್ಗೆ ಈಗ ಚರ್ಚೆ ನಡೆಯುತ್ತಿದೆ. ಅಭಿಮಾನಿಗಳು ಕನ್ನಡದ ಇಬ್ಬರು ನಾಯಕಿಯರ ಹೆಸರನ್ನು ಸೂಚಿಸಿದ್ದಾರೆ.

ದರ್ಶನ್ ಮುಂದಿನ ಚಿತ್ರಕ್ಕೆ ಯಾರು ನಾಯಕಿ ಎನ್ನುವ ಬಗ್ಗೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಅಭಿಯಾನ ಶುರು ಮಾಡಿದ್ದರೆ. ನಟಿಯರಾದ ರಚಿತಾ ರಾಮ್ ಮತ್ತು ಆಶಿಕಾ ರಂಗನಾಥ್ ಇಬ್ಬರ ನಡುಗೆ ಪೈಪೋಟಿ ನಡೆದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮುಂದೆ ಓದಿ....

ದರ್ಶನ್ 56ನೇ ಚಿತ್ರಕ್ಕೆ ನಾಯಕಿ ರಚಿತಾ ರಾಮ್!

ದರ್ಶನ್ 56ನೇ ಚಿತ್ರಕ್ಕೆ ನಾಯಕಿ ರಚಿತಾ ರಾಮ್!

ನಟಿ ರಚಿತಾ ರಾಮ್ ನಾಯಕಿಯಾಗಿ ನಟಿಸಿದ ಮೊದಲ ಸಿನಿಮಾಕ್ಕೆ ದರ್ಶನ್ ಅವರೇ ನಾಯಕರಾಗಿದ್ದರು. 'ಬುಲ್-ಬುಲ್' ಸಿನಿಮಾದ ಮೂಲಕ ನಟನೆ ಆರಂಭಿಸಿದ ರಚಿತಾ ರಾಮ್ ಇದೀಗ ಎಂಟು ವರ್ಷಗಳ ಬಳಿಕ ಮತ್ತೆ 'ಕ್ರಾಂತಿ' ಚಿತ್ರದಲ್ಲಿ ದರ್ಶನ್ ಜೊತೆ ನಟಿಸುತ್ತಿದ್ದಾರೆ. ಈ ಕಾಂಬಿನೇಷನ್ ಕೂಡ ಚಿತ್ರಕ್ಕೆ ದೊಡ್ಡ ಪ್ಲಸ್ ಪಾಯಿಂಟ್. ಈ ಜೋಡಿಯನ್ನು ಮತ್ತೆ ತೆರೆಯ ಮೇಲೆ ನೋಡಲು ಇಡೀ ಅಭಿಮಾನಿ ಬಳಗ ಕಾದಿತ್ತು. ಈಗ ದರ್ಶನ್ 56ನೇ ಚಿತ್ರಕ್ಕೂ ಇವರೇ ನಾಯಕಿ ಆಗುತ್ತಾರಾ ಎಂದು ಕಾದು ನೋಡಬೆಕಿದೆ.

ದರ್ಶನ್ ಜೊತೆ ಅಭಿನಯಿಸಲಿದ್ದಾರಾ ಆಶಿಕಾ?

ದರ್ಶನ್ ಜೊತೆ ಅಭಿನಯಿಸಲಿದ್ದಾರಾ ಆಶಿಕಾ?

ನಟಿ ಆಶಿಕಾ ರಂಗನಾಥ್ ಕನ್ನಡದ ಹೆಸರಾಂತ ನಟಿಯರಲ್ಲಿ ಒಬ್ಬರು. ಆಶಿಕಾ ಕನ್ನಡದ ಹಲವು ಹಿಟ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಆದರೆ ಈಗ ದರ್ಶನ್ ಜೊತೆಗೆ ಆಶಿಕಾ ಹೆಸರು ಕೇಳಿ ಬರುತ್ತಿದೆ. ಆಶಿಕಾ ಇಲ್ಲಿ ತನಕ ನಟ ದರ್ಶನ್ ಜೊತೆಗೆ ನಟಿಸಿಲ್ಲ. ದರ್ಶನ್ 56ನೇ ಚಿತ್ರಕ್ಕೆ ಆಶಿಕಾ ನಾಯಕಿಯಾದರೆ, ಅದು ಇವರಿಬ್ಬರ ಮೊದಲ ಕಾಂಬಿನೇಷನ್ ಸಿನಿಮಾ ಆಗಲಿದೆ.

ಸೆಟ್ಟೇರುತ್ತಾ 'ಗೋಲ್ಡ್ ರಿಂಗ್' ಚಿತ್ರ?

ಸೆಟ್ಟೇರುತ್ತಾ 'ಗೋಲ್ಡ್ ರಿಂಗ್' ಚಿತ್ರ?

ಯಾವುದು ದರ್ಶನ್ 56ನೇ ಸಿನಿಮಾ ಎನ್ನುವ ಬಗ್ಗೆ ಸಾಕಷ್ಟು ಕುತೂಹಲ ಮೂಡಿದೆ. ಯಾಕೆಂದರೆ ಈಗಾಗಲೇ 'ಗೋಲ್ಡ್ ರಿಂಗ್' ಎನ್ನುವ ಚಿತ್ರ ಪ್ರಕಟ ಆಗಿತ್ತು. 'ಯಜಮಾನ' ಚಿತ್ರದ ಬಳಿಕ ದರ್ಶನ್ 'ಗೋಲ್ಡ್ ರಿಂಗ್' ಚಿತ್ರದಲ್ಲಿ ಅಭಿನಯಿಸಬೇಕಿತ್ತು. ಆದರೆ ಆ ಚಿತ್ರ ಕಾರಣಾಂತರಗಳಿಂದ ಸೆಟ್ಟೇರಲಿಲ್ಲ. ಹಾಗಾಗಿ 'ಕ್ರಾಂತಿ' ಚಿತ್ರ ಶುರುವಾಯ್ತು. ಈ ಸಿನಿಮಾದ ಬಳಿಕ 56ನೇ ಚಿತ್ರವಾಗಿ 'ಗೋಲ್ಡ್ ರಿಂಗ್' ಸೆಟ್ಟೇರುತ್ತಾ ಎನ್ನುವುದನ್ನು ನೋಡಬೇಕಿದೆ.

'ರಾಜ ವೀರ ಮದಕರಿನಾಯಕ'ನ ಕಥೆಯೇನು?

'ರಾಜ ವೀರ ಮದಕರಿನಾಯಕ'ನ ಕಥೆಯೇನು?

ಇನ್ನು ನಟ ದರ್ಶನ್ ಅಭಿನಯದ 'ರಾಜ ವೀರ ಮದಕರಿ ನಾಯಕ' ಚಿತ್ರ ಕೂಡ ನಿಂತು ಹೋಗಿದೆ. ಈ ಚಿತ್ರದ ಶೂಟಿಂಗ್ ಚಿತ್ರದುರ್ಗದಲ್ಲಿ ಆರಂಭ ಆಗಿತ್ತು. ಆದರೆ ಕೊರೊನಾ ಕಾರಣಕ್ಕೆ ಚಿತ್ರದ ಶೂಟಿಂಗ್ ನಿಂತಿರುವುದಾಗಿ ವರದಿ ಆಗಿತ್ತು. ಹಾಗಾಗಿ ದರ್ಶನ್‌ರ 56ನೇ ಚಿತ್ರವಾಗಿ 'ರಾಜ ವೀರ ಮದಕರಿ ನಾಯಕ' ಚಿತ್ರವೂ ಶುರುವಾಗುವ ಸಾಧ್ಯತೆ ಇದೆ. ಯಾವುದೇ ಚಿತ್ರ ಶುರುವಾದರೂ ಚಿತ್ರಕ್ಕೆ ರಚಿತಾ ರಾಮ್ ಅಥವಾ ಆಶಿಕಾ ರಂಗನಾಥ್ ನಾಯಕಿ ಆಗಬೇಕು ಎನ್ನುವ ಅಭಿಯಾನವನ್ನು ಅಭಿಮಾನಿಗಳೇ ಶುರುವಾಗಿದೆ.

More from Filmibeat

English summary
Actor Darshan 56th Movie Heroine Competition Between Rachita Ram And Ashika Ranganath, Who Will Get Celect,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X