ಅನಾರೋಗ್ಯದ ಹಿನ್ನಲೆ ನಟ ದರ್ಶನ್ ಆಸ್ಪತ್ರೆಗೆ ದಾಖಲು

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅನಾರೋಗ್ಯದ ಹಿನ್ನಲೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ತೀವ್ರ ಥರದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ದರ್ಶನ್ ಅವರನ್ನು ಇಂದು ಬೆಳಗ್ಗೆ 4 ಗಂಟೆಗೆ ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆರೋಗ್ಯ ಸುಧಾರಿಸಿದ್ದು ಅಭಿಮಾನಿಗಳು ಆತಂಕ ಪಡಬೇಕಾಗಿಲ್ಲ ಎಂದು ಹೇಳಲಾಗಿದೆ.

Recommended Video

ಡಿ ಬಾಸ್ ಗೆ ಹೊಟ್ಟೆನೋವು ಬಂದಿದ್ಯಾಕೆ? | Darshan | Roberrt | Filmibeat Kannada

ಗ್ಯಾಸ್ಟ್ರಿಕ್ ಹೆಚ್ಚಾಗಿದ್ದು, ಇಂದು ಒಂದು ದಿನ ಆಸ್ಪತ್ರೆಯಲ್ಲಿಯೆ ಉಳಿಯ ಬೇಕು ಎಂದು ವೈದ್ಯರು ಸೂಚಿಸಿದ್ದಾರಂತೆ. ವೈದ್ಯರ ಸಲಹೆ ಮೇರೆಗೆ ದರ್ಶನ್ ಇಂದು ಆಸ್ಪತ್ರೆಯಲ್ಲಿಯೆ ತಂಗಲಿದ್ದಾರೆ. ಕೊಲಂಬಿಯಾ ಏಷಿಯಾ ಆಸ್ಪತ್ರೆಯ ವಿಶೇಷ ವಾರ್ಡ್ ನಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ದರ್ಶನ್ ಮದಕರಿ ನಾಯಕ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ರಾಬರ್ಟ್ ಚಿತ್ರದ ಪ್ರಮುಖ ಹಾಡಿನ ಚಿತ್ರೀಕರಣ ಕೂಡ ಭಾಕಿ ಉಳಿದಿದೆ. ರಾಬರ್ಟ್ ಹಾಡಿನ ಚಿತ್ರೀಕರಣಕ್ಕಾಗಿ ದರ್ಶನ್ ಅಂಡ್ ತಂಡ ವಿದೇಶಕ್ಕೆ ತೆರಳಬೇಕಿತ್ತು, ಆದರೆ ಕೊರೊನಾ ವೈರಸ್ ಭೀತಿಯ ಹಿನ್ನಲೆ ವಿದೀಶಿ ಚಿತ್ರೀಕರಣ ರದ್ದು ಗೊಳಿಸಿದ್ದಾರೆ.

Actor Darshan Admitted To Hospital For Stomach Pain

ಸದ್ಯ ಮದಕರಿನಾಯಕ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಎರಡನೆ ಹಂತದ ಚಿತ್ರೀಕರಣಕ್ಕೆ ಸಜ್ಜಾಗುತ್ತಿದೆ. ಚಿತ್ರದ ಎರಡನೆ ಹಂತದ ಚಿತ್ರೀಕರಣಕ್ಕೆಂದು ಚಿತ್ರತಂಡ ಹೈದರಾಬಾದ್ ಗೆ ತೆರಳಬೇಕಿತ್ತು. ಆದರೀಗ ಆಸ್ಪತ್ರೆಯಲ್ಲಿ ಇರುವ ಕಾರಣ ಚಿತ್ರೀಕರಣ ಕೊಂಚ ತಡವಾಗುವ ಸಾಧ್ಯತೆ ಇದೆ.

More from Filmibeat

English summary
Kannada Actor Darshan admitted to hospital for stomach pain.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X