For Quick Alerts
  ALLOW NOTIFICATIONS  
  For Daily Alerts

  ಇದು ದರ್ಶನ್ ಅವರು ರೋಮ್ಯಾನ್ಸ್ ಮಾಡೋ ಟೈಮ್ ಕಣ್ರೀ.!

  By Suneetha
  |

  ಏನಪ್ಪಾ ಇದು ಅಂತ, ಹೆಡ್ ಲೈನ್ ನೋಡಿ ಗಾಬರಿ ಬಿದ್ರಾ?, ದರ್ಶನ್ ಅವರು ರೋಮ್ಯಾನ್ಸ್ ಮಾಡೋದೇನು ನಿಜ ಆದರೆ ರಿಯಲ್ ಆಗಿ ಅಲ್ಲ ಬದ್ಲಾಗಿ 'ಜಗ್ಗುದಾದ' ಚಿತ್ರದಲ್ಲಿ ನಟಿ ದೀಕ್ಷಾ ಸೇಠ್ ಜೊತೆ.

  ಹೌದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಮತ್ತು ಬಿಗ್ ಬಜೆಟ್ ನ 'ಜಗ್ಗುದಾದ' ಸಿನಿಮಾದ ರೋಮ್ಯಾಂಟಿಕ್ ಸಾಂಗ್ ನ ಶೂಟ್ ಗಾಗಿ ಇಡೀ ಚಿತ್ರತಂಡ ಇಟಲಿಗೆ ಹಾರಿದ್ದು, ಚಿತ್ರದ ಹಾಡಿನ ಶೂಟಿಂಗ್ ಕಂಪ್ಲೀಟ್ ಮಾಡಿದೆ.[ಮೇ ತಿಂಗಳಿನಲ್ಲಿ 'ಜಗ್ಗು ದಾದಾ' ದರ್ಬಾರ್ ಶುರು?]

  ನಿರ್ದೇಶಕ ರಾಘವೇಂದ್ರ ಹೆಗಡೆ ಅವರು ಡೈರೆಕ್ಷನ್ ಜೊತೆಗೆ ಬಂಡವಾಳ ಹೂಡಿರುವ 'ಜಗ್ಗುದಾದ' ಚಿತ್ರದ ಶೂಟಿಂಗ್ ಭರಭರನೇ ಸಾಗಿದ್ದು, ಇತ್ತೀಚೆಗೆ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ಕೂಡ ಅದ್ದೂರಿ ಸೆಟ್ ನಲ್ಲಿ ನೆರವೇರಿತ್ತು.[ಅದ್ಧೂರಿ ಸೆಟ್ ನಲ್ಲಿ 'ಜಗ್ಗುದಾದಾ' ದರ್ಶನ್ ಭರ್ಜರಿ ಸ್ಟೆಪ್]

  ಇಟಲಿಯಲ್ಲಿ ನಡೆದ ರೋಮ್ಯಾಂಟಿಕ್ ಹಾಡುಗಳ ಶೂಟಿಂಗ್ ಸಂದರ್ಭದಲ್ಲಿ ತೆಗೆದ ಚಿತ್ರಗಳು ನಿಮ್ಮ ಫಿಲ್ಮಿಬೀಟ್ ಕನ್ನಡಕ್ಕೆ ಲಭ್ಯವಾಗಿದ್ದು, ನೋಡಲು ಕೆಳಗಿನ ಸ್ಲೈಡ್ಸ್ ಗಳನ್ನು ಒಂದೊಂದಾಗಿ ಕ್ಲಿಕ್ಕಿಸಿ..

  ಸಮುದ್ರದ ದಂಡೆಯಲ್ಲಿ ದರ್ಶನ್

  ಸಮುದ್ರದ ದಂಡೆಯಲ್ಲಿ ದರ್ಶನ್

  ಇಟಲಿಯ ಸುಂದರ ಪರಿಸರ ಸಮುದ್ರ ತೀರದ ದಂಡೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನಟಿ ದೀಕ್ಷಾ ಸೇಠ್ ಅವರು ರೋಮ್ಯಾಂಟಿಕ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ.[ವಿವಾದಗಳಿಗೆ ಕುಗ್ಗದೆ ಇಟಲಿಯತ್ತ ಪಯಣ ಬೆಳೆಸಿದ ದರ್ಶನ್]

  ಕ್ಯೂಟ್ ಜೋಡಿ

  ಕ್ಯೂಟ್ ಜೋಡಿ

  ಇದೇ ಮೊದಲ ಬಾರಿಗೆ ದಕ್ಷಿಣ ಭಾರತದ ನಟಿ ದೀಕ್ಷಾ ಸೇಠ್ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ಮಿಂಚಿದ್ದು, ತೆರೆಯ ಮೇಲೆ ಇವರಿಬ್ಬರದು ಈಡು ಜೋಡಿ.[ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿಶಾಲ ಹೃದಯವುಳ್ಳವರಂತೆ]

  ದೀಕ್ಷಾ ಸೆಲ್ಫಿ

  ದೀಕ್ಷಾ ಸೆಲ್ಫಿ

  ತಮಿಳು-ತೆಲುಗು ನಟಿ ದೀಕ್ಷಾ ಸೇಠ್ ಅವರು ಇಟಲಿಯಲ್ಲಿ ಶೂಟಿಂಗ್ ಸಂದರ್ಭದಲ್ಲಿ ಕಡಲ ಕಿನಾರೆ ಬಳಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದು ಹೀಗೆ.

  ಬಿಗ್ ಬಜೆಟ್ ನಲ್ಲಿ ಕ್ಲೈಮ್ಯಾಕ್ಸ್ ಶೂಟಿಂಗ್

  ಬಿಗ್ ಬಜೆಟ್ ನಲ್ಲಿ ಕ್ಲೈಮ್ಯಾಕ್ಸ್ ಶೂಟಿಂಗ್

  ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ಅದ್ದೂರಿ ಸೆಟ್ ನಲ್ಲಿ ಜರುಗಿದ್ದು, ಸುಮಾರು 1.25 ಕೋಟಿ ರೂಪಾಯಿ ಬಂಡವಾಳ ಹೂಡಿ 'ಜಗ್ಗುದಾದಾ' ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ನಡೆಸಲಾಗಿದೆ.

  ವಿಭಿನ್ನ ಗೆಟಪ್ ನಲ್ಲಿ ರವಿಶಂಕರ್

  ವಿಭಿನ್ನ ಗೆಟಪ್ ನಲ್ಲಿ ರವಿಶಂಕರ್

  ಖಳನಟ ರವಿಶಂಕರ್ ಅವರು ಚಿತ್ರದಲ್ಲಿ ದರ್ಶನ್ ಅವರ ಅಜ್ಜನ ಪಾತ್ರದಲ್ಲಿ ಮಿಂಚಿದ್ದು, ವಿಭಿನ್ನ ಗೆಟಪ್ ನಲ್ಲಿ ಮಿಂಚಿದ್ದಾರೆ.

  ಅನಂತ್ ನಾಗ್

  ಅನಂತ್ ನಾಗ್

  ವಿಶೇಷ ಪಾತ್ರದಲ್ಲಿ ಅನಂತ್ ನಾಗ್ ಅವರು ಮಿಂಚಿದ್ದು, ಚಿತ್ರಕ್ಕೆ ಹೆಚ್ಚಿನ ಮೆರುಗು ತಂದಂತಾಗಿದೆ.

  ಮೇ ತಿಂಗಳಿನಲ್ಲಿ ತೆರೆಗೆ

  ಮೇ ತಿಂಗಳಿನಲ್ಲಿ ತೆರೆಗೆ

  ಈಗಾಗಲೇ ಕೊನೆಯ ಹಂತದ ಚಿತ್ರೀಕರಣದಲ್ಲಿ ತೊಡಗಿರುವ ಚಿತ್ರತಂಡ ಮೇ ತಿಂಗಳಿನಲ್ಲಿ ಸಿನಿಮಾ ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದೆ.

  English summary
  Kannada Actor Darshan and Actress Deeksha Seth have been spotted together in Italy shooting a romantic song for the upcoming movie 'Jaggu Dada'. The movie is directed by Raghavendra Hegde.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X