ರೇಣುಕಾ ಸ್ವಾಮಿ ಜೀವ ಹೋಗುತ್ತಿದ್ದಂತೆ ಪವಿತ್ರಾ ಗೌಡ ಮೇಲೆ ದರ್ಶನ್ ಹಲ್ಲೆ?
ರೇಣುಕಾಸ್ವಾಮಿ ಹಲ್ಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿ 10 ಜನರನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ತಮ್ಮ ಪ್ರೇಯಸಿ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್‌ಗಳನ್ನು ಕಳುಹಿಸಿದ್ದಕ್ಕೆ ದರ್ಶನ್ ತಮ್ಮ ಆಪ್ತರ ಮೂಲದ ರೇಣುಕಾ ಸ್ವಾಮಿಯವರನ್ನು ಕರೆತಂದು ಹಲ್ಲೆ ನಡೆಸಿದ್ದಾರೆ ಎನ್ನಲಾಗ್ತಿದೆ. ರೇಣುಕಾಸ್ವಾಮಿ ಜೀವ ಹೋದ ಬಳಿಕ ಪವಿತ್ರಾ ಗೌಡ ಮೇಲೆ ದರ್ಶನ್ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಚಿತ್ರದುರ್ಗದ ಮೂಲದ ರೇಣುಕಾಸ್ವಾಮಿ ಮೆಡಿಕಲ್ ಶಾಪ್‌ನಲ್ಲಿ ಕೆಲಸ ಮಾಡಿಕೊಂಡಿದ್ದರು. ಅವರು ದರ್ಶನ್ ಅಭಿಮಾನಿ ಆಗಿದ್ದರು. ಆದರೆ ದರ್ಶನ್ ಹಾಗೂ ವಿಜಯಲಕ್ಷ್ಮಿ ದಾಂಪತ್ಯ ಚೆನ್ನಾಗಿರಬೇಕು. 3ನೇ ವ್ಯಕ್ತಿ ಪವಿತ್ರಾ ಗೌಡ ನಡುವೆ ಹೋಗುತ್ತಿರುವುದು ಸರಿಯಲ್ಲ ಎನ್ನುವ ಕಾರಣಕ್ಕೆ ಆಕೆಯೆ ಕೆಟ್ಟ ಕೆಟ್ಟದಾಗಿ ಮೆಸೇಜ್ ಕಳುಹಿಸಿದ್ದರು ಎನ್ನಲಾಗುತ್ತಿದೆ. ಪವಿತ್ರಾ ಗೌಡ ಕಾರಣಕ್ಕೆ ರೇಣುಕಾ ಸ್ವಾಮಿ ಹತ್ಯೆಯಾಗಿದೆ ಎನ್ನುವುದು ಪೊಲೀಸರ ವಿಚಾರಣೆಯಲ್ಲಿ ಬಯಲಾಗಿದೆ.

ರೇಣುಕಾಸ್ವಾಮಿಯನ್ನು ಚಿತ್ರದುರ್ಗದ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ರಘು ಬೆಂಗಳೂರಿಗೆ ಕರೆದುಕೊಂಡು ಬಂದಿದ್ದ. ನಟ ದರ್ಶನ್ ಆಣತಿಯಂತೆ ಆತನನ್ನು ಕರೆದುಕೊಂಡು ಬರಲಾಗಿತ್ತು. ಪಟ್ಟಣಗೆರೆ ಸಮೀಪದ ದರ್ಶನ್ ಆಪ್ತ ವಿನಯ್ ಮಾವನ ಒಡೆತನದ ಶೆಡ್‌ನಲ್ಲಿ ಕೂಡಿ ಹಾಕಲಾಗಿತ್ತು. ಮನಸೋ ಇಚ್ಛೆ ರೇಣುಕಾಸ್ವಾಮಿ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದರು. ಈ ವೇಳೆ ದರ್ಶನ್ ಸಹ ಸ್ಥಳದಲ್ಲಿ ಇದ್ದರು ಎಂದು ವಿಚಾರಣೆ ವೇಳೆ ಆರೋಪಿಗಳು ಹೇಳಿದ್ದಾರೆ.
ವಿಚಾರಣೆ ವೇಳೆ ದರ್ಶನ್ ನಾನು ಘಟನೆ ನಡೆದ ಸ್ಥಳದಲ್ಲಿ ಇರಲಿಲ್ಲ ಎನ್ನಲಾಗುತ್ತಿದೆ. ಆಯುಧಗಳಿಂದ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿರುವುದಾಗಿ ಹೇಳಲಾಗುತ್ತಿದೆ. ಬಳಿಕ ಶವವನ್ನು ಬೇರೆ ಕಡೆಗೆ ಸ್ಥಳಾಂತರಿಸಿದ್ದರು ಎಂದು ವಿಚಾರಣೆ ವೇಳೆ ಗೊತ್ತಾಗಿದೆ.
ರೇಣುಕಾಸ್ವಾಮಿ ಜೀವ ಹೋದ ವಿಚಾರ ಗೊತ್ತಾಗುತ್ತಿದ್ದಂತೆ ಪವಿತ್ರಾ ಗೌಡ ಮೇಲೆ ದರ್ಶನ್ ಕೆಂಡಾಮಂಡಲವಾಗಿದ್ದಂತೆ. ಎಲ್ಲಾ "ನಿನ್ನಿಂದಲೇ ಆಗಿದ್ದು" ಎಂದು ಆಕೆಯ ಮೇಲೆ ಹಲ್ಲೆ ಕೂಡ ನಡೆಸಿದ್ದರು ಎಂದು ವರದಿಯಾಗಿದೆ. ಹಲ್ಲೆ ಬಳಿಕ ಆಕೆ ಆರ್ ಆರ್ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಶ್ಚಾರ್ಜ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.


Click it and Unblock the Notifications











