Darshan: ನಟಿ ಪವಿತ್ರಾ ಗೌಡ ಮಗಳು ಖುಷಿ ಬರ್ತ್‌ಡೇ ಪಾರ್ಟೀಲಿ ದರ್ಶನ್ ಬಿಂದಾಸ್ ಸ್ಟೆಪ್ಸ್
ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಕಾಟೇರ' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಅದರ ಜೊತೆಗೆ ಸ್ನೇಹಿತರ ಜೊತೆ ಸುತ್ತಾಟ, ಖಾಸಗಿ ಕಾರ್ಯಕ್ರಮಗಳಲ್ಲೂ ಕಾಣಿಸಿಕೊಳ್ಳುತ್ತಿರುತ್ತಾರೆ. ಇನ್ನು ಇತ್ತೀಚೆಗೆ ಹುಲಿ ಉಗುರು ಪ್ರಕರಣ ಹಾಗೂ ಮಹಿಳೆಯೊಬ್ಬರಿಗೆ ತಮ್ಮ ಮನೆಯ ನಾಯಿ ಕಚ್ಚಿದ ವಿಚಾರದಿಂದಲೂ ಸುದ್ದಿಯಾಗಿದ್ದರು.
ಅಭಿಮಾನಿಗಳು 'ಕಾಟೇರ' ಅಪ್‌ಡೇಟ್‌ಗಾಗಿ ಕಾಯುತ್ತಿದ್ದಾರೆ. ಚಿತ್ರತಂಡ ಇನ್ನುಳಿದ ಹಾಡುಗಳ ಚಿತ್ರೀಕರಣ ಮುಗಿಸಿ ಆದಷ್ಟು ಬೇಗ ಸಿನಿಮಾ ರಿಲೀಸ್ ಮಾಡುವ ಪ್ರಯತ್ನದಲ್ಲಿದೆ. ಮುಂದಿನ ವರ್ಷವೇ ಸಿನಿಮಾ ತೆರೆಗೆ ಬರುವುದು ಬಹುತೇಕ ಖಚಿತವಾಗಿದೆ. ಶೀಘ್ರದಲ್ಲೇ ಟೀಸರ್ ಅಥವಾ ಹಾಡು ರಿಲೀಸ್ ಆಗುವ ಸಾಧ್ಯತೆಯಿದೆ. ಅದಕ್ಕೂ ಮುನ್ನ ದರ್ಶನ್ ಅತಿಥಿ ಪಾತ್ರದಲ್ಲಿ ನಟಿಸಿರುವ 'ಗರಡಿ' ಸಿನಿಮಾ ರಿಲೀಸ್ ಆಗಲಿದೆ. ಈ ವಾರ ಬಹಳ ಅದ್ಧೂರಿಯಾಗಿ ಯೋಗರಾಜ್ ಭಟ್ ನಿರ್ದೇಶನದ 'ಗರಡಿ' ಸಿನಿಮಾ ತೆರೆಗೆ ಬರಲಿದೆ.

ಮೊನ್ನೆ ಮೊನ್ನೆ ದರ್ಶನ್ ನಟನೆಯ 57ನೇ ಸಿನಿಮಾ ಮುಹೂರ್ತ ನೆರವೇರಿತ್ತು. ಬಸವನ ಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಸರಳವಾಗಿ ಪೂಜೆ ನೆರವೇರಿಸಿ ಚಿತ್ರಕ್ಕೆ ಚಾಲನೆ ಕೊಡಲಾಗಿತ್ತು. ಆ ಚಿತ್ರಕ್ಕೆ 'ಡೆವಿಲ್ - ದಿ ಹೀರೊ' ಎಂದು ಹೆಸರಿಡಲಾಗಿದೆ. ಮಿಲನಾ ಪ್ರಕಾಶ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಹಿಂದೆ ಇದೇ ಕಾಂಬಿನೇಷನ್‌ನಲ್ಲಿ 'ತಾರಕ್' ಸಿನಿಮಾ ಬಂದು ಸದ್ದು ಮಾಡಿತ್ತು. ದರ್ಶನ್ ಒಂದು ಸಿನಿಮಾ ಮುಗಿಯುವರೆಗೂ ಮತ್ತೊಂದು ಸಿನಿಮಾ ಬಗ್ಗೆ ಮಾತನಾಡಲ್ಲ. ನವೆಂಬರ್ 2ರಂದು ಒಂದು ದಿನ ಎನ್ನುವ ಕಾರಣಕ್ಕೆ ಮುಹೂರ್ತ ನೆರವೇರಿಸಲಾಗಿತ್ತು. 'ಕಾಟೇರ' ಸಿನಿಮಾ ಕೆಲಸಗಳು ಸಂಪೂರ್ಣವಾಗಿ ಮುಗಿದ ಮೇಲೆಗೆ 'ಡೆವಿಲ್' ಚಿತ್ರೀಕರಣ ಎಂದು ನಿರ್ದೇಶಕರು ಹೇಳಿದ್ದಾರೆ.
ಸದ್ಯ ನಟಿ ಪವಿತ್ರಾ ಗೌಡ ಮಗಳ ಬರ್ತ್‌ಡೇ ಸಂಭ್ರಮದಲ್ಲಿ ದರ್ಶನ್ ಭಾಗಿ ಆಗಿರುವ ವಿಡಿಯೋ ವೈರಲ್ ಆಗುತ್ತಿದೆ. ಮಗಳು ಖುಷಿ ಹುಟ್ಟುಹಬ್ಬ ಆಚರಣೆಯ ವಿಡಿಯೋವನ್ನು ಸ್ವತಃ ನಟಿ ಪವಿತ್ರಾ ಗೌಡ ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ದರ್ಶನ್ ಅಭಿಮಾನಿಗಳು ಕೂಡ ಈ ವಿಡಿಯೋ, ಫೋಟೊಗಳನ್ನು ನೋಡಿ ಖುಷಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ಖುಷಿ ಹುಟ್ಟುಹಬ್ಬ ಆಚರಣೆಯಲ್ಲಿ ನಟ ದರ್ಶನ್ ಭಾಗಿ ಆಗಿದ್ದಾರೆ. ಕೇಕ್ ಕತ್ತರಿಸಿ ಸಿಹಿ ತಿನ್ನಿಸಿ ಶುಭ ಕೋರಿದ್ದಾರೆ. ಖುಷಿ ಜೊತೆ ಡ್ಯಾನ್ಸ್ ಮಾಡಿ ಎಂಜಾಯ್ ಮಾಡಿದ್ದಾರೆ. ಆ ಸುಂದರ ಕ್ಷಣಗಳ ವಿಡಿಯೋ ವೈರಲ್ ಆಗುತ್ತಿದೆ. 'ಅಗಮ್ಯಾ', 'ಛತ್ರಿಗಳು ಸಾರ್ ಛತ್ರಿಗಳು', 'ಸಾಗುವ ದಾರಿ', 'ಪ್ರೀತಿ ಕಿತಾಬು' ಸೇರಿದಂತೆ ಕೆಲ ಸಿನಿಮಾಗಳಲ್ಲಿ ಪವಿತ್ರಾ ಗೌಡ ನಟಿಸಿದ್ದರು. ಈ ಹಿಂದೆ ದರ್ಶನ್ ನಟನೆಯ ಸಿನಿಮಾ ಸೆಟ್‌ಗಳಲ್ಲೂ ಆಕೆ ಕಾಣಿಸಿಕೊಂಡಿದ್ದರು.
ಹೈದರಾಬಾದ್‌ನಲ್ಲಿ 'ಕುರುಕ್ಷೇತ್ರ' ಸಿನಿಮಾ ಸೆಟ್‌ಗೆ ಆಕೆ ಭೇಟಿ ಕೊಟ್ಟಿದ್ದ ಫೋಟೊಗಳು ವೈರಲ್ ಆಗಿತ್ತು. ನಟ ದರ್ಶನ್ ತಾಯಿ ಹಾಗೂ ಸಹೋದರಿಯ ಜೊತೆಗೂ ಪವಿತ್ರಾ ಗೌಡ ಕಾಣಿಸಿಕೊಂಡಿದ್ದ ಫೋಟೊಗಳು ಸದ್ದು ಮಾಡಿತ್ತು. ಇದೀಗ ಪವಿತ್ರಾ ಗೌಡ ಚಿತ್ರರಂಗದಿಂದ ದೂರ ಉಳಿದಿದ್ದಾರೆ.
ಸದ್ಯ ಆರ್‌ಆರ್ ನಗರದಲ್ಲಿ ಡಿಸೈನರ್ ಸ್ಟುಡಿಯೋ ಆರಂಭಿಸಿದ್ದಾರೆ. ಆ ಮಳಿಗೆಯಲ್ಲಿ ಮಹಿಳೆಯರಿಗೆ ಬೇಕಾದ ಇಂಡೋ ವೆಸ್ಟರ್ನ್ ಶೈಲಿಯ ಉಡುಗೆಗಳು ದೊರೆಯುತ್ತದೆ. ಹಬ್ಬ ಹರಿದಿನ ಸೇರಿದಂತೆ ಯಾವುದೇ ಕಾರ್ಯಕ್ರಮಕ್ಕೆ ಬೇಕಾದ ಡಿಸೈನರ್ ಸೀರೆ, ಲೆಹಂಗಾ ಸೇರಿದಂತೆ ಬಗೆ ಬಗೆಯ ಉಡುಗೆಗಳು ಲಭ್ಯವಿದೆ. ಸ್ಯಾಂಡಲ್‌ವುಡ್ ನಟಿಯರು, ಕನ್ನಡ ಕಿರುತೆರೆಯ ನಟಿಯರು ಇಲ್ಲಿ ಬಟ್ಟೆ ಖರೀದಿಸುತ್ತಾರೆ.


Click it and Unblock the Notifications











