For Quick Alerts
  ALLOW NOTIFICATIONS  
  For Daily Alerts

  ಸುಮಲತಾ ಅಂಬರೀಶ್ ಬರ್ತ್‌ಡೇ ಪಾರ್ಟಿ: ಪತ್ನಿ ಜೊತೆ ಮಿಂಚಿದ ಚಾಲೆಂಜಿಂಗ್ ಸ್ಟಾರ್

  |

  ಬಹುಭಾಷಾ ನಟಿ, ಸಂಸದೆ ಸುಮಲತಾ ಅಂಬರೀಶ್ ನಿನ್ನೆಯಷ್ಟೆ(ಆಗಸ್ಟ್ 27) ತಮ್ಮ 59ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅಭಿಮಾನಿಗಳು ಮಂಡ್ಯದಲ್ಲಿ ಅರ್ಥಪೂರ್ಣವಾಗಿ ಸುಮಲತಾ ಅಂಬರೀಶ್‌ ಹುಟ್ಟುಹಬ್ಬ ಆಚರಿಸಿದ್ದರು. ಇನ್ನು ಇದೇ ಸಂಭ್ರಮದಲ್ಲಿ ಅಭಿಷೇಕ್ ಅಂಬರೀಶ್ ನಟನೆಯ ಹೊಸ ಚಿತ್ರದ ಮೋಷನ್ ಪೋಸ್ಟರ್‌ ಕೂಡ ರಿಲೀಸ್‌ ಆಗಿತ್ತು. ಸಂಜೆ ಖಾಸಗಿ ಹೋಟೆಲ್‌ನಲ್ಲಿ ನಡೆದ ಬರ್ತ್‌ಡೇ ಪಾರ್ಟಿಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ ಸಾಕಷ್ಟು ಜನ ಆಪ್ತರು ಭಾಗಿಯಾಗಿದ್ದರು.

  ಕಳೆದರಡು ದಿನಗಳಿಂದ ಸುಮಲತಾ ಅಂಬರೀಶ್‌ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿತ್ತು. ಇನ್ನು ಬರ್ತ್‌ಡೇ ಪಾರ್ಟಿಯಲ್ಲಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಜೊತೆಗೆ ಹಾಜರಾಗಿದ್ದಾರೆ. 'ಯಜಮಾನ' ಸಿನಿಮಾ ನಿರ್ಮಾಪಕಿ ಶೈಲಜಾ ನಾಗ್ ಹಾಗೂ ಪುತ್ರಿ ಚಂದನಾ ನಾಗ್ ಸೇರಿ ಹಲವರು ಪಾರ್ಟಿಯಲ್ಲಿ ಸಖತ್ ಎಂಜಾಯ್ ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊಗಳು ಸಖತ್ ವೈರಲ್ ಆಗಿದೆ. ಕ್ರೀಮ್‌ ಕಲರ್ ಶರ್ಟ್, ಬ್ಲೂ ಡೆನಿಮ್‌ನಲ್ಲಿ ದರ್ಶನ್ ಮಿಂಚಿದ್ರೆ, ಬ್ಲ್ಯಾಕ್ ಕಲರ್ ಸಲ್ವಾರ್‌ನಲ್ಲಿ ಪತ್ನಿ ವಿಜಯಲಕ್ಷ್ಮಿ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳು ಈ ಫೋಟೊವನ್ನು ಹೆಚ್ಚು ಹೆಚ್ಚು ಶೇರ್ ಮಾಡುತ್ತಿದ್ದಾರೆ.

  ಗಣೇಶನ ಕೈಯಲ್ಲೂ 'ಕ್ರಾಂತಿ' ಪೋಸ್ಟರ್: ಹಬ್ಬಕ್ಕೆ ಬೇಕೇ ಬೇಕು 'ಕ್ರಾಂತಿ'ಗೀತೆ!ಗಣೇಶನ ಕೈಯಲ್ಲೂ 'ಕ್ರಾಂತಿ' ಪೋಸ್ಟರ್: ಹಬ್ಬಕ್ಕೆ ಬೇಕೇ ಬೇಕು 'ಕ್ರಾಂತಿ'ಗೀತೆ!

  ಆಂಧ್ರದಲ್ಲಿ ಹುಟ್ಟಿ, ಬೆಳೆದು ಕನ್ನಡ ಸಿನಿಮಾಗಳಲ್ಲಿ ನಟಿಸಿ ಅಂಬರೀಶ್ ಅವರನ್ನು ಪ್ರೀತಿಸಿ ಮದುವೆಯಾಗಿ ಸುಮಲತಾ ಅಂಬರೀಶ್ ಮಂಡ್ಯ ಸೊಸೆ ಎನಿಸಿಕೊಂಡರು. ಮಂಡ್ಯ ಸಂಸದೆಯಾಗಿರುವ ಸುಮಲತಾ ರಾಜಕೀಯದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಅಂಬರೀಶ್ ಅಗಲಿಕೆ ನಂತರ ಮಂಡ್ಯ ಜನರ ಒತ್ತಾಯದ ಮೇರೆಗೆ, ಸುಮಲತಾ ರಾಜಕೀಯಕ್ಕೆ ಬಂದು ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿ ಸಂಸದರಾಗಿ ಆಯ್ಕೆ ಆದರು. ರಾಜಕೀಯದ ಜಂಜಾಟದ ನಡುವೆಯೂ 'ಕ್ರಾಂತಿ' ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

  ಸುಮಲತಾ ಬರ್ತ್‌ಡೇಗೆ ದರ್ಶನ್ ದಂಪತಿ ಗಿಫ್ಟ್

  ಸುಮಲತಾ ಬರ್ತ್‌ಡೇಗೆ ದರ್ಶನ್ ದಂಪತಿ ಗಿಫ್ಟ್

  'ದರ್ಶನ್‌ ನನ್ನ ದೊಡ್ಡ ಮಗ' ಎಂದು ಸಾಕಷ್ಟು ಸಂದರ್ಭಗಳಲ್ಲಿ ಸುಮಲತಾ ಅಂಬರೀಶ್ ಹೇಳಿದ್ದಾರೆ. ದರ್ಶನ್‌ ಕೂಡ 'ಮದರ್ ಇಂಡಿಯಾ' ಎಂದು ಸಮಲತಾ ಅವರಿಗೆ ತಾಯಿಯ ಸ್ಥಾನ ನೀಡಿದ್ದಾರೆ. ಹುಟ್ಟುಹಬ್ಬಕ್ಕೂ ಸೋಶಿಯಲ್ ಮೀಡಿಯಾ ಮೂಲಕ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ಶುಭಾಶಯ ಕೋರಿದ್ದರು. ಬರ್ತ್‌ಡೇ ಪಾರ್ಟಿಯಲ್ಲಿ ಭಾಗವಹಿಸಿದ್ದ ವಿಜಯಲಕ್ಷ್ಮಿ ಸ್ಪೆಷಲ್ ಗಿಫ್ಟ್ ಸಹ ನೀಡಿದ್ದಾರೆ.

  ಅಪ್ಪು- ದರ್ಶನ್ ಸ್ನೇಹದ ಬಗ್ಗೆ ಹೇಳಿದ ರಾಘಣ್ಣ!ಅಪ್ಪು- ದರ್ಶನ್ ಸ್ನೇಹದ ಬಗ್ಗೆ ಹೇಳಿದ ರಾಘಣ್ಣ!

  ಬರ್ತ್‌ಡೇ ಪಾರ್ಟಿ ಫೋಟೊಗಳು ವೈರಲ್

  ಬರ್ತ್‌ಡೇ ಪಾರ್ಟಿ ಫೋಟೊಗಳು ವೈರಲ್

  ಸುಮಲತಾ ಅಂಬರೀಶ್ ಬರ್ತ್‌ಡೇ ಪಾರ್ಟಿಯಲ್ಲಿ ದರ್ಶನ್‌ ದಂಪತಿ ಸಾಕಷ್ಟು ಫೋಟೊಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಅಭಿಷೇಕ್ ಅಂಬರೀಶ್ ಕ್ಲಿಕ್ಕಿಸಿರುವ ಸೆಲ್ಫಿಯಲ್ಲೂ ಮಿಂಚಿದ್ದಾರೆ. ನಿರ್ಮಾಪಕಿ ಶೈಲಜಾ ನಾಗ್‌ ಹಾಗೂ ಪುತ್ರಿ ಚಂದನಾ ನಾಗ್ ಜೊತೆಗೆ ಕಾಣಿಸಿಕೊಂಡಿರುವ ಫೋಟೊಗಳು ಸಖತ್ ವೈರಲ್ ಆಗಿದೆ. ಸುಮಲತಾ ಅಂಬರೀಶ್, ವಿಜಯಲಕ್ಷ್ಮಿ ಜೊತೆಗೂ ನಿರ್ಮಾಪಕಿ ಶೈಲಜಾ ನಾಗ್ ಸೆಲ್ಫಿ ಕ್ಲಿಕ್ಕಿಸಿ ಶೇರ್ ಮಾಡಿದ್ದಾರೆ.

  ರಾಕ್‌ಲೈನರ್ ಬ್ಯಾನರ್‌ನಲ್ಲಿ ಅಭಿ ಸಿನಿಮಾ

  ರಾಕ್‌ಲೈನರ್ ಬ್ಯಾನರ್‌ನಲ್ಲಿ ಅಭಿ ಸಿನಿಮಾ

  'ಅಯೋಗ್ಯ' ಹಾಗೂ 'ಮದಗಜ' ನಿರ್ದೇಶಿಸಿ ಗೆದ್ದಿರುವ ಮಹೇಶ್‌ ಕುಮಾರ್ 3ನೇ ಚಿತ್ರದಲ್ಲಿ ಅಭಿಷೇಕ್‌ ಅಂಬರೀಶ್‌ಗೆ ಆಕ್ಷನ್ ಕಟ್ ಹೇಳುತ್ತಿದೆ. ಇನ್ನು ಹೆಸರಿಡದ ಈ ಚಿತ್ರದ ಮೋಷನ್ ಪೋಸ್ಟರ್ ಸುಮಲತಾ ಅಂಬರೀಶ್ ಹುಟ್ಟುಹಬ್ಬದ ಸಂಭ್ರಮದಲ್ಲೇ ರಿಲೀಸ್ ಆಗಿದೆ. ಲಾಕ್‌ಲೈನ್ ವೆಂಕಟೇಶ್ ಈ ಅದ್ಧೂರಿ ಚಿತ್ರ್ಕಕೆ ಬಂಡವಾಳ ಹೂಡುತ್ತಿದ್ದು ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. 'AA04' ಸಿನಿಮಾ ಪೋಸ್ಟರ್‌ನಲ್ಲಿ ಖಡಕ್‌ ಆಗಿ ಅಭಿಷೇಕ್ ಮಿಂಚಿದ್ದಾರೆ.

  ದರ್ಶನ್ ತಾಯಿ ಪಾತ್ರದಲ್ಲಿ ಸುಮಲತಾ

  ದರ್ಶನ್ ತಾಯಿ ಪಾತ್ರದಲ್ಲಿ ಸುಮಲತಾ

  ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾ ಚಿತ್ರೀಕರಣ ಕಂಪ್ಲೀಟ್ ಆಗಿದ್ದು, ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೀತಿದೆ. ಈ ಚಿತ್ರದಲ್ಲಿ ದರ್ಶನ್ ತಾಯಿ ಪಾತ್ರದಲ್ಲಿ ಸುಮಲತಾ ಹಾಗೂ ತಂದೆಯಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ನಟಿಸಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ 'ಭೂಪತಿ' ಚಿತ್ರದಲ್ಲೂ ದರ್ಶನ್ ತಾಯಿಯ ಪಾತ್ರದಲ್ಲಿ ಸುಮಲತಾ ಅಂಬರೀಶ್ ಮಿಂಚಿದ್ದರು. ರಾಜ್ಯೋತ್ಸವ ಸಂಭ್ರಮದಲ್ಲಿ 'ಕ್ರಾಂತಿ' ಸಿನಿಮಾ ತೆರೆಗೆ ಬರಲಿದೆ.

  English summary
  Actor Darshan Attends Sumalatha Ambareesh’s Birthday Party with Wife Vijayalakshmi See Pics. Know More.
  Sunday, August 28, 2022, 10:58
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X