For Quick Alerts
  ALLOW NOTIFICATIONS  
  For Daily Alerts

  ಹುಟ್ಟುಹಬ್ಬಕ್ಕೂ ಮುಂಚೆಯೇ ಸಂಭ್ರಮ: 'ಡಿ-ಬಾಸ್' ಕಾಮನ್ ಡಿಪಿ ಬಿಡುಗಡೆ

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಕಾಮನ್ ಡಿಪಿ ಬಿಡುಗಡೆಯಾಗಿದೆ. ಫೆಬ್ರವರಿ 16 ರಂದು ಡಿ ಬಾಸ್ ಜನಮದಿನದ ಸಂಭ್ರಮ. ಮೂರು ದಿನಗಳ ಮುಂಚೆಯೇ ದರ್ಶನ್ ಅವರ ಕಾಮನ್ ಡಿಪಿ ರಿಲೀಸ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್‌ನಲ್ಲಿದೆ.

  ದರ್ಶನ್ ಫೋಟೊ ಹಾಕಿ ಮತ್ತೊಂದು ಟ್ವೀಟ್ ಮಾಡಿದ ಜಗ್ಗೇಶ್ | Filmibeat Kannada

  'ಬಾಸ್ ಪರ್ವ' ಎಂಬ ಹೆಸರಿನಲ್ಲಿ ದರ್ಶನ್ ಅವರ ಹುಟ್ಟುಹಬ್ಬವನ್ನು ಸಂಭ್ರಮಿಸಲಾಗುತ್ತಿದೆ. ದರ್ಶನ್ ಅವರು ಪ್ರಾಣಿಪ್ರಿಯರು, ಪರಿಸರ ಪ್ರೇಮಿ ಎನ್ನುವುದರ ಸಂಕೇತವಾಗಿ ಕಾಮನ್ ಡಿಪಿ ಮೂಡಿಬಂದಿದ್ದು, ಅರಣ್ಯದಲ್ಲಿ ಪ್ರಾಣಿಗಳ ಜೊತೆ ದರ್ಶನ್ ಕುಳಿತಿರುವಂತೆ ಅದ್ಭುತವಾದ ಚಿತ್ರ ವಿನ್ಯಾಸ ಮಾಡಲಾಗಿದೆ.

  'ನವಗ್ರಹ' ಚಿತ್ರದ ಜಗ್ಗು ಪಾತ್ರಕ್ಕೆ ದರ್ಶನ್ ಮೊದಲ ಆಯ್ಕೆಯಾಗಿರಲಿಲ್ಲ!'ನವಗ್ರಹ' ಚಿತ್ರದ ಜಗ್ಗು ಪಾತ್ರಕ್ಕೆ ದರ್ಶನ್ ಮೊದಲ ಆಯ್ಕೆಯಾಗಿರಲಿಲ್ಲ!

  ದರ್ಶನ್ ಅವರ ಕಾಮನ್ ಡಿಪಿಯನ್ನು ರಾಬರ್ಟ್ ನಿರ್ದೇಶಕ ತರುಣ್ ಸುಧೀರ್, ನಟ ನೆನಪಿರಲಿ ಪ್ರೇಮ್, ಸಂಸದೆ-ನಟಿ ಸುಮಲತಾ ಅಂಬರೀಶ್, ಧನಂಜಯ್ ಸೇರಿದಂತೆ ಹಲವರು ಹಂಚಿಕೊಂಡಿದ್ದಾರೆ.

  ಕೊರೊನಾ ವೈರಸ್ ಹಿನ್ನೆಲೆ ದರ್ಶನ್ ಅವರ ಈ ವರ್ಷ ಬರ್ತಡೇ ಸೆಲೆಬ್ರೆಟ್ ಮಾಡುತ್ತಿಲ್ಲ. ಈ ಕುರಿತು ತಿಂಗಳ ಹಿಂದೆಯೇ ಅಭಿಮಾನಿಗಳಲ್ಲಿ ದರ್ಶನ್ ವಿನಂತಿ ಮಾಡಿಕೊಂಡಿದ್ದರು. ಹುಟ್ಟುಹಬ್ಬದ ಹೆಸರಿನಲ್ಲಿ ಮನೆ ಬಳಿ ಬರುವುದು, ದುಡ್ಡು ಖರ್ಚು ಮಾಡುವುದು ಬೇಡ. ಅದನ್ನು ಬಡ ವಿದ್ಯಾರ್ಥಿಗಳಿಗೆ, ನಿಮ್ಮ ಕುಟುಂಬಗಳಿಗೆ ಬಳಸಿಕೊಳ್ಳಿ ಎಂದು ಸಲಹೆ ನೀಡಿದ್ದರು.

  ದರ್ಶನ್ 'ಮೆಜೆಸ್ಟಿಕ್' ಸಿನಿಮಾಗೆ 19 ವರ್ಷ: ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ಡಿ ಬಾಸ್ ಸಂಭ್ರಮದರ್ಶನ್ 'ಮೆಜೆಸ್ಟಿಕ್' ಸಿನಿಮಾಗೆ 19 ವರ್ಷ: ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ಡಿ ಬಾಸ್ ಸಂಭ್ರಮ

  ಡಿ ಬಾಸ್ ಬರ್ತಡೇ ಪ್ರಯುಕ್ತ ಫೆಬ್ರವರಿ 16 ರಂದು ರಾಬರ್ಟ್ ಚಿತ್ರದ ಟ್ರೈಲರ್ ಬಿಡುಗಡೆಯಾಗಲಿದೆ. ಹೊಸ ಸಿನಿಮಾಗಳು ಅಧಿಕೃತವಾಗಿ ಘೋಷಣೆಯಾಗುವ ಸಾಧ್ಯತೆ ಇದೆ.

  English summary
  Kannada actor Darshan's Birthday Common DP released and Sandalwood stars wishes to D Boss before three day of his Birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X