ನಟ ದರ್ಶನ್ ಹುಟ್ಟುಹಬ್ಬದ ವಿಶೇಷ: ದಾಖಲೆ ಬರೆದ CDP!
ನಟ ಚಾಲೆಂಜಿಂಗ್ ಸ್ವಾರ್ ದರ್ಶನ್ ಹುಟ್ಟು ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಅಭಿಮಾನಿಗಳು ಬೆಟಾಲಿಯನ್ ಜೊತೆಗೆ ಸಂಭ್ರಮಕ್ಕೆ ರೆಡಿ ಆಗಿದ್ದಾರೆ. ತಿಂಗಳಿಗೂ ಮೊದಲೇ ತಮ್ಮ ನೆಚ್ಚಿನ ನಟನ ಹುಟ್ಟು ಹಬ್ಬವನ್ನು ಹೇಗೆ ಆಚರಿಸಬೇಕು ಎನ್ನುವ ಯೋಜನೆಯನ್ನು ಅಭಿಮಾನಿಗಳು ಹಾಕಿ ಕೊಂಡಿದ್ದಾರೆ. ಅದರಂತೆ ಪ್ರತಿ ಬಾರಿಯ ಹಾಗೆ ಈ ಬಾರಿಯೋ ದರ್ಶನ್ ಅಭಿಮಾನಿ ಬಳಗ ಕಾಮನ್ ಡಿಪಿಯನ್ನು ರಿಲೀಸ್ ಮಾಡಿದೆ.
ಈ ಬಾರಿ ದರ್ಶನ್ ಅಭಿಮಾನಿಗಳು ವಿಶೇಷವಾದ ಯೋಜನೆ ಒಂದನ್ನು ಕೈ ಗೊಂಡಿದ್ದರು. ದರ್ಶನ್ ಹುಟ್ಟುಹಬ್ಬಕ್ಕೆ ದಾಖಲೆ ಬರೆಯಲು ಸಜ್ಜಾಗಿದ್ದರು. ಪ್ರತಿ ಬಾರಿಯೂ ದರ್ಶನ್ ಹುಟ್ಟುಹಬ್ಬ ಬಂತೂ ಅಂದರೇ ಅವರ ಮನೆಯ ಬಳಿ ಸಾವಿರಾರು ಮಂದಿ ಸೇರುತ್ತಾರೆ. ಹೆಚ್ಚಾಗಿ ಸೇರುವ ಅಭಿಮಾನಿಗಳ ಸಂಖ್ಯೆಯೇ ಒಂದು ದಾಖಲೆ ಆಗಿ ಬಿಡುತ್ತಿತ್ತು.
ಈ ಬಾರಿ ಕೂಡ ದರ್ಶನ್ ಹುಟ್ಟುಹಬ್ಬ ಆಚರಣೆ ಇಲ್ಲ: ಅಪ್ಪು ನೆನೆದ ದಾಸ
ಮತ್ತೊಂದು ಕಡೆ ದರ್ಶನ್ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅವರ ಹೆಸರೇ ಟಾಪ್‌ನಲ್ಲಿ ಇರುತ್ತದೆ. ಅಷ್ಟರ ಮಟ್ಟಿಗೆ ಅವರ ಅಭಿಮಾನಿಗಳಲ್ಲಿ ಕ್ರೇಜ್ ಇದೆ. ಪ್ರತೀ ಬಾರಿ ದರ್ಶನ್ ಹುಟ್ಟುಹಬ್ಬಕ್ಕೆ, ಕಾಮನ್ ಡಿಪಿ ಒಂದು ರಿಲೀಸ್ ಆಗುತ್ತದೆ. ಇದು ಕನ್ನಡದ ಹಲವು ಸ್ಟಾರ್ ಹೀರೋ ಹುಟ್ಟುಹಬ್ಬಕ್ಕೂ ಅವರವರ ಅಭಿಮಾನಿಗಳು ರಿಲೀಸ್ ಮಾಡುತ್ತಾರೆ. ಈ ಬಾರಿಯೂ ದರ್ಶನ್ ಹುಟ್ಟುಹಬ್ಬಕ್ಕೆ ಮೊದಲೆ ಕಾಮನ್ ಡಿಪಿ ರಿಲೀಸ್ ಆಗಿದೆ. ಜೊತೆಗೆ ದಾಖಲೆ ಕೂಡ ಬರೆದಿದೆ.

ಅಭಿಮಾನಿಗಳಿಂದ ರಿಲೀಸ್ ಆಯ್ತು ವಿಶೇಷವಾದ ಡಿಪಿ!
ಈ ವರ್ಷವೂ ಅಭಿಮಾನಿಗಳು ರಿಲೀಸ್ ಮಾಡುವ ದರ್ಶನ್ ಅವರ ಕಾಮನ್ ಡಿಪಿ ಹೇಗೆ ಇರಲಿದೆ ಎನ್ನುವ ಕುತೂಹಲಗಳು ಮನೆ ಮಾಡಿದ್ದವು. ಎಲ್ಲಾ ಕುತೂಹಲಗಳಿಗೂ ತೆರೆ ಬಿದ್ದಿದ್ದು ಇದೇ ಫೆಬ್ರವರಿ 12ರಂದು. ಶನಿವಾರ ಸಂಜೆ ದರ್ಶನ್ ಹುಟ್ಟು ಹಬ್ಬದ ಕಾಮನ್ ಡಿಪಿ ರಿಲೀಸ್ ಮಾಡಲಾಯಿತು. ನಿರ್ದೇಶಕ ತರುಣ್ ಸುಧೀರ್ ಅವರು ಟ್ವಿಟ್ಟರ್‌ನಲ್ಲಿ ಈ ಡಿಪಿಯನ್ನು ಲಾಂಚ್ ಮಾಡಿದರು. ಈ ಬಾರಿಯ ಡಿಪಿ ಸರಳ ಮತ್ತು ಸುಂದರ ಎನಿಸಿಕೊಂಡಿದೆ. ನಟ ದರ್ಶನ್ ಪಂಚೆ ಶರ್ಟು ತೊಟ್ಟು, ಸಿಂಹಾಸನ ಮೇಲೆ ಕುಳಿತಿದ್ದಾರೆ. ಪೋಸ್ಟರ್ ರಿಲೀಸ್ ಆಗುತ್ತಿದ್ದ ಹಾಗೆ ವೈರ್ ಲಿಸ್ಟ್ ಸೇರಿತ್ತು.

ಹೊಸ ಡಿಪಿ ಮೂಲಕ ದರ್ಶನ್ ದಾಖಲೆ!
ಹುಟ್ಟು ಹಬ್ಬಕ್ಕೆ ನಾಲ್ಕು ದಿನ ಮೊದಲೇ ಕಾಮನ್ ಡಿಪಿ ರಿಲೀಸ್ ಆಗಿದೆ. ಮೊದಲ ಎರಡು ದಿನ ಈ ಡಿಪಿ ಟ್ಟಿಟ್ಟರ್‌ನಲ್ಲಿ ಟ್ರೆಂಡಿಂಗ್‌ನಲ್ಲಿ ಇತ್ತು. ದರ್ಶನ್ ಅಭಿಮಾನಿಗಳು ಡಿಪಿಯನ್ನು ಪೋಸ್ಟ್ ಮಾಡುತ್ತಾ, ಟ್ರೆಂಡ್ ಹುಟ್ಟು ಹಾಕಿದ್ದರು. ಎರಡು ದಿನಗಳ ಬಳಿಕ ಒಟ್ಟಾರೆ ಅಂಕಿ ಅಂಶ ನೋಡಿದರೆ. ದರ್ಶನ್ ಅವರ ಈ ಬಾರಿಯ ಕಾಮನ್ ಡಿಪಿ, 4 ಮಿಲಿಯನ್ ಟ್ವೀಟ್ ಗಡಿ ಮುಟ್ಟಿದೆ. ಒಂದು ಮೂಲದ ಪ್ರಕಾರ ಈ ಮಟ್ಟಿನ ದಾಖಲೆ ಮಾಡಿದ ಮೊದಲ ಹುಟ್ಟುಹಬ್ಬದ ಕಾಮನ್ ಡಿಪಿ ಇದಾಗಿದೆ. ಈ ಮೂಲಕ ದರ್ಶನ್ ಅಭಿಮಾನಿ ಬಳಗ ದಾಸನ ಹುಟ್ಟು ಹಬ್ಬಕ್ಕೆ ದೊಡ್ಡ ಗಿಫ್ಟ್ ಕೊಟ್ಟಿದೆ.

ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಣೆ ಇಲ್ಲ!
ಕೊರೊನಾದಿಂದಾಗಿ ದರ್ಶನ್ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಮಿಸ್ ಮಾಡಿಕೊಳ್ಳುತ್ತಾ ಇದ್ದಾರೆ. ಈ ಬಾರಿಯೂ ದರ್ಶನ್ ಅವರು ತಮ್ಮ ಅಭಿಮಾನಿಗಳ ಜೊತೆಗೆ ಹುಟ್ಟು ಹಬ್ಬ ಆಚರಣೆ ಮಾಡಿಕೊಳ್ಳುತ್ತಾ ಇಲ್ಲ. ಒಂದು ಕೊರೊನಾ ಕಾರಣ ಆದರೂ ಮತ್ತೊಂದು, ಅಪ್ಪು ಅಗಲಿಕೆಯ ನೋವು. ಹಾಗಾಗಿ ದರ್ಶನ್ ಅವರು ಈ ಬಾರಿ ಹುಟ್ಟುಹಬ್ಬದ ಸಂಭ್ರಮ ಬೇಡ ಎಂದು ನಿರ್ಧರಿಸಿದ್ದಾರೆ. ಈ ಬಗ್ಗೆ ಅವು ವಿಡಿಯೋ ಮಾಡಿ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು.

ದರ್ಶನ್ ಹುಟ್ಟುಹಬ್ಬಕ್ಕೆ ಹಲವು ಸರ್ಪ್ರೈಸ್‌ಗಳು!
ನಟ ದರ್ಶನ್ ಅವರು ಈ ಬಾರಿ ತಮ್ಮ ಹಟ್ಟುಹಬ್ಬನ್ನು ಅಭಿಮಾನಿಗಳ ಜೊತೆಗೆ ಆಚರಿಸಿಕೊಳ್ಳುತ್ತಾ ಇಲ್ಲ. ಆದರೆ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗಾಗಿ ಒಂದಷ್ಟು ಸರ್ಪ್ರೈಸ್ ಕೊಡಲಿದ್ದಾರೆ. ಕ್ರಾಂತಿ ಸಿನಿಮಾದ ಮುಂದಿನ ಅಪ್ಡೇಟ್ ಅಂದು ಸಿಗಲಿದೆ, ತರುಣ್ ಅವರ ಕಾಂಬಿನೇಷನ್‌ನ ಮುಂದಿನ ಚಿತ್ರದ ಪೋಸ್ಟರ್ ರಿಲೀಸ್ ಆಗಲಿದೆ. ಜೊತೆಗೆ ಮೆಜೆಸ್ಟಿಕ್ ಸಿನಿಮಾ ಮತ್ತೆ ರಿಲೀಸ್ ಆಗುತ್ತಿದೆ. ಈ ವಿಚಾರಗಳನ್ನು ಅವರೇ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.


Click it and Unblock the Notifications











