ಗೆಳೆಯ ಆದಿತ್ಯ ಹುಟ್ಟುಹಬ್ಬಕ್ಕೆ ದರ್ಶನ್ ವಿಶ್ ಮಾಡಿದ್ದು ಹೀಗೆ
ಸ್ಯಾಂಡಲ್ ವುಡ್ 'ಡೆಡ್ಲಿ ಸೋಮ' ಅಂತಾನೆ ಖ್ಯಾತಿ ಗಳಿಸಿರುವ ನಟ ಆದಿತ್ಯ ಸಿಂಗ್ ಗೆ ಹುಟ್ಟುಹಬ್ಬದ ಸಂಭ್ರಮ. 42ನೇ ವಸಂತಕ್ಕೆ ಕಾಲಿಟ್ಟ ನಟ ಆದಿತ್ಯ ಮನೆಯಲ್ಲಿಯೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಆದಿತ್ಯ ಹುಟ್ಟುಹಬ್ಬಕ್ಕೆ ಗೆಳೆಯ ದರ್ಶನ್ ಸಾಮಾಜಿಕ ಜಾಲತಾಣದ ಮೂಲಕ ಶುಭ ಹಾರೈಸಿದ್ದಾರೆ.
ಕಳೆದ ವರ್ಷದ ಹುಟ್ಟುಹಬ್ಬವನ್ನು ದರ್ಶನ್ ಮತ್ತು ಆದಿತ್ಯ ಇಬ್ಬರು ಸೇರಿ ಅದ್ದೂರಿಯಾಗಿ ಆಚರಣೆ ಮಾಡಿದ್ದರು. ಆದರೆ ಈ ವರ್ಷ ಕೊರೊನಾ ಲಾಕ್ ಡೌನ್ ಪರಿಣಾಮ ಅದ್ದೂರಿ ಹುಟ್ಟುಹಬ್ಬಕ್ಕೆ ಬ್ರೇಕ್ ಬಿದ್ದಿದ್ದು, ಮನೆಯಲ್ಲಿಯೇ ಸಂಭ್ರಮಿಸಿದ್ದಾರೆ.
ಗೆಳೆಯನ ಹುಟ್ಟುಹಬ್ಬಕ್ಕೆ ದರ್ಶನ್ ಸಾಮಾಜಿಕ ಜಾಲತಾಣದ ಮೂಲಕವೇ ಶುಭಹಾರೈಸಿದ್ದು ಹೀಗೆ "ಹುಟ್ಟುಹಬ್ಬದ ಶುಭಾಶಯಗಳು ಆದಿ. ಅದ್ಭುತವಾದ ವರ್ಷ ನಿನ್ನದಾಗಲಿ. ನಿನ್ನ ಎಲ್ಲಾ ಮುಂದಿನ ಸಿನಿಮಾಗಳಿಗೆ ಒಳ್ಳೆಯದಾಗಲಿ" ಎಂದು ಗೆಳೆಯನಿಗೆ ಶುಭಕೋರಿದ್ದಾರೆ.

ಆದಿತ್ಯ ಕೊನೆಯದಾಗಿ ದರ್ಶನ್ ಅಭಿನಯದ ಚಕ್ರವರ್ತಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಆದಿತ್ಯ ಬಳಿ ಮುಂದುವರೆದ ಅಧ್ಯಾಯ, ಮಾಸ್ಟರ್ ಮತ್ತು ಇನ್ನು ಹೆಸರಿಡದ ರವಿ ಶ್ರೀವತ್ಸ ಅವರ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.


Click it and Unblock the Notifications











