ಉತ್ತರ ಕರ್ನಾಟಕದ ಜನರ ನೆರವಿಗೆ ಬಂದ ದಾಸ

Recommended Video

ಪ್ರವಾಹದಿಂದ ತತ್ತರಿಸುತ್ತಿರುವ ಉತ್ತರ ಕರ್ನಾಟಕ ಭಾಗದ ಜನರಿಗೆ ದರ್ಶನ್ ಸಹಾಯ

ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಉತ್ತರ ಕರ್ನಾಟಕದ ಜಿಲ್ಲೆಗಳು ಪ್ರವಾಹದ ಸ್ಥಿತಿಯಲ್ಲಿ ಇವೆ. ಮಳೆ ನೀರಿನಿಂದಾಗಿ ಅಲ್ಲಿನ ಜನರ ಜೀವನ ಅಸ್ತವ್ಯಸ್ತವಾಗಿದೆ.

ಉತ್ತರ ಕರ್ನಾಟಕದ ನೆರವಿಗೆ ಇದೀಗ ನಟ ದರ್ಶನ್ ಬಂದಿದ್ದಾರೆ. ಅಲ್ಲಿನ ಜನರಿಗೆ ಸದ್ಯದ ಪರಿಸ್ಥಿತಿಗೆ ಅಗತ್ಯ ಇರುವ ವಸ್ತುಗಳನ್ನು ನೀಡಲು ಮುಂದಾಗಿದ್ದು, ಇದಕ್ಕೆ ಅಭಿಮಾನಿಗಳ ಸಹಕಾರ ಕೇಳಿದ್ದಾರೆ. ದರ್ಶನ್ ಅವರ ಅಧಿಕೃತ ಅಭಿಮಾನಿ ಬಳಗವಾದ ಡಿ ಕಂಪನಿ ಮೂಲಕ ಈ ಕೆಲಸ ನಡೆಯುತ್ತಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ದರ್ಶನ್ ''ಉತ್ತರ ಕರ್ನಾಟಕದಲ್ಲಿ ಪ್ರವಾಹದ ರಭಸಕ್ಕೆ ತುತ್ತಾಗಿರುವ ಹಲವು ಹಳ್ಳಿಗಳ ಜನರಿಗೆ ಮೂಲಭೂತ ಸಾಮಗ್ರಿಗಳ ಅವಶ್ಯಕತೆ ಇದೆ. ನಮ್ಮ ಡಿ ಕಂಪನಿ ಬಳಗದಿಂದಲೂ ಸಹ ನಮ್ಮ ಕೈಲಾದ ಅಳಿಲುಸೇವೆಯನ್ನು ಮುಂದುವರೆಸೋಣ. ತಮ್ಮ ಕೈಲಾದ ಸಹಾಯದೊಂದಿಗೆ ಈ ಕಾರ್ಯದಲ್ಲಿ ಭಾಗವಹಿಸಲು ಕೆಳಗಿನ ದೂರವಾಣಿ ನಂ. ಗಳಿಗೆ ಸಂಪರ್ಕಿಸತಕ್ಕದ್ದು.'' ಎಂದು ಬರೆದುಕೊಂಡಿದ್ದಾರೆ.

actor darshan came to help uttara karnataka people

ಬಟ್ಟೆಗಳು ಬೇಳೆ, ಅಕ್ಕಿ, ದವಸ ಧಾನ್ಯಗಳು, ಬಿಸ್ಕತ್ ಮತ್ತು ಸಂರಕ್ಷಿತ ಆಹಾರ ಪದಾರ್ಥಗಳು, ಚಪ್ಪಲಿಗಳು, ರೈನ್ ಕೋರ್ಟ್ ಗಳು, ವಾಟರ್ ಬಾಟಲ್ ಗಳು, ಜನರಲ್ ಮೆಡಿಸನ್ಸ್, ಅಡುಗೆ ಎಣ್ಣೆ ಟೂತ್ ಬ್ರಷ್, ಟೂತ್ ಪೇಸ್ಟ್, ಸಾಬೂನು, ಟೆಟ್ರಾ ಪ್ಯಾಕ್ ಹಾಲು ಈ ರೀತಿಯ ಅಗತ್ಯ ವಸ್ತುಗಳನ್ನು ದರ್ಶನ್ ಬಳಗ ಒದಗಿಸಲು ನಿರ್ಧಾರ ಮಾಡಿದ್ದಾರೆ.

ದರ್ಶನ್ ಬಳಗದ ಈ ಕೆಲಸಕ್ಕೆ ಕೈ ಜೋಡಿಸಲು ಬಯಸುವವರು ರಾಹುಲ್ 9986103219, ಶರತ್ 9036197999, ಚೇತನ್ 9620629646 ಇವರನ್ನು ಸಂಪರ್ಕ ಮಾಡಬಹುದಾಗಿದೆ ಎಂದು ದರ್ಶನ್ ತಿಳಿಸಿದ್ದಾರೆ.

More from Filmibeat

English summary
uttar karnataka flood : Kannada actor Darshan came to help Uttara Karnataka people.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X