ವಿದೇಶದಲ್ಲಿ ನಟ ದರ್ಶನ್, ಸೃಜನ್ ಗೆ ಗೌರವ
Recommended Video

ವಿದೇಶದಲ್ಲಿ ನಟ ದರ್ಶನ್, ಸೃಜನ್ ಗೆ ಗೌರವ | FILMIBEAT KANNADA
ನಟ ದರ್ಶನ್ ಕಳೆದ ವರ್ಷ ಲಂಡನ್ ಪಾರ್ಲಿಮೆಂಟ್ ನಿಂದ ಗ್ಲೋಬಲ್ ಪ್ರಶಸ್ತಿ ಪಡೆದಿದ್ದರು. ಈಗ ಮತ್ತೊಮ್ಮೆ ವಿದೇಶದಲ್ಲಿ ಅವರಿಗೆ ಗೌರವ ಸಮರ್ಪಣೆ ಮಾಡಲಾಗಿದೆ.
ಇತ್ತೀಚಿಗಷ್ಟೆ ಕತಾರ್ ನಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಣೆ ಮಾಡಲಾಗಿದೆ. ಅಲ್ಲಿನ ಕನ್ನಡ ಸಂಘ ಆಯೋಜನೆ ಮಾಡಿದ್ದ 63ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ದರ್ಶನ್ ಹಾಗೂ ನಟ ಸೃಜನ್ ಲೋಕೇಶ್ ಅತಿಥಿಯಾಗಿ ಭಾಗಿಯಾಗಿದ್ದರು.

ಕಾರ್ಯಕ್ರಮದ ವೇಳೆ ದರ್ಶನ್ ಹಾಗೂ ಸೃಜನ್ ಅವರಿಗೆ ಗೌರವ ಸಮರ್ಪಣೆ ಮಾಡಲಾಗಿದೆ. ಅಲ್ಲಿನ ಕನ್ನಡಿಗರು ತಮ್ಮ ಮೆಚ್ಚಿನ ನಟರನ್ನು ನೋಡಿ ಖುಷಿಯಾಗಿದ್ದಾರೆ. ದರ್ಶನ್ ಅವರ ಈ ಸಂಭ್ರಮದ ಕ್ಷಣಗಳನ್ನು ಅವರ ಅಭಿಮಾನಿಗಳು ಟ್ವಿಟ್ಟರ್ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ

ಅಂದಹಾಗೆ, ದರ್ಶನ್ ಸದ್ಯ 'ಯಜಮಾನ', 'ಒಡೆಯ', 'ಡಿ 53' ಹಾಗೂ 'ಗಂಡುಗಲಿ ಮದಕರಿ ನಾಯಕ' ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. 'ಕುರುಕ್ಷೇತ್ರ' ಸಿನಿಮಾ ಬಿಡುಗಡೆಯ ಹಂತದಲ್ಲಿದೆ.
More from Filmibeat
English summary
Kannada actor Darshan and Srujan Lokesh calibrated kannada rajyotsava in qatar.
darshan srujan lokesh kannada rajyotsava sandalwood ದರ್ಶನ್ ಸೃಜನ್ ಲೋಕೇಶ್ ಕನ್ನಡ ರಾಜ್ಯೋತ್ಸವ ಸ್ಯಾಂಡಲ್ ವುಡ್


Click it and Unblock the Notifications











