For Quick Alerts
  ALLOW NOTIFICATIONS  
  For Daily Alerts

  ಡಿ ಬಾಸ್ ತೋಟದ ಮನೆಯಲ್ಲಿ ಸಂಕ್ರಾಂತಿ ಸಂಭ್ರಮ: 'ಕಿಚ್ಚು' ಹಾಯಿಸಿದ ದಚ್ಚು

  |
  ಫಾರ್ಮ್ ಹೌಸ್ ನಲ್ಲಿ ದರ್ಶನ್ ಸಂಕ್ರಾಂತಿ ಸಂಭ್ರಮ |FILMIBEAT KANNADA

  ಮಕರ ಸಂಕ್ರಾಂತಿ ಹಬ್ಬವನ್ನು ಎಲ್ಲರು ಅದ್ದೂರಿಯಾಗಿ ಆಚರಿಸಿದ್ದಾರೆ. ಅದರಲ್ಲೂ ಸ್ಟಾರ್ ಗಳ ಮನೆಯಲ್ಲಿ ಹಬ್ಬದ ಸೆಲೆಬ್ರೇಷನ್ ಹೇಗಿರುತ್ತೆ ಎನ್ನುವ ಕುತೂಹಲ ಅಭಿಮಾನಿಗಲ್ಲಿ ಇರುತ್ತೆ. ಸ್ಯಾಂಡಲ್ ವುಡ್ ನ ಸಾಕಷ್ಟು ನಟ-ನಟಿಯರ ಮನೆಯಲ್ಲಿ ಸಂಕ್ರಾಂತಿ ಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡುತ್ತಾರೆ.

  ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆಯಲ್ಲಿ ಸಂಕ್ರಾಂತಿ ಮತ್ತಷ್ಟು ವಿಭಿನ್ನವಾಗಿತ್ತು. ಈ ಬಾರಿಯ ಸಂಕ್ರಾಂತಿಯನ್ನು ದರ್ಶನ್ ಅದ್ದೂರಿಯಾಗಿ ಮಾಡಿದ್ದಾರೆ. ಹೌದು, ನಿನ್ನೆ ದರ್ಶನ್ ಮೈಸೂರಿನ ತೂಗುದೀಪ ತೋಟದ ಮನೆಯಲ್ಲಿ ಸ್ನೇಹಿತರ ಜೊತೆ ಹಬ್ಬ ಆಚರಿಸಿದ್ದಾರೆ. ವಿಶೇಷವಾಗಿ ದರ್ಶನ್ ಕಿಚ್ಚು ಹಾಯಿಸಿ ಎಲ್ಲರ ಗಮನ ಸೆಳೆದಿದ್ದಾರೆ.

  'ರಾಬರ್ಟ್' ಪೋಸ್ಟರ್ ನಲ್ಲಿ ಕಣ್ಣಿಗೆ ಬಿದ್ದ ಮತ್ತೊಬ್ಬ ಸ್ಟಾರ್ ನಟ: ಯಾರು ಗುರುತಿಸಿ?'ರಾಬರ್ಟ್' ಪೋಸ್ಟರ್ ನಲ್ಲಿ ಕಣ್ಣಿಗೆ ಬಿದ್ದ ಮತ್ತೊಬ್ಬ ಸ್ಟಾರ್ ನಟ: ಯಾರು ಗುರುತಿಸಿ?

  ರಾತ್ರಿ ತೋಟದ ಮನೆಯಲ್ಲಿ ಇರುವ ಪ್ರಾಣಿಗಳನ್ನು ಕಿಚ್ಚು ಹಾಯಿಸಿದ್ದಾರೆ. ದರ್ಶನ್ ಸ್ನೇಹಿತರು ಸಾಥ್ ನೀಡಿದ್ದಾರೆ. ಸಾಮಾನ್ಯವಾಗಿ ಸಂಕ್ರಾಂತಿಗೆ ಎತ್ತುಗಳನ್ನು ಕಿಚ್ಚು ಹಾಯಿಸುತ್ತಾರೆ. ಆದರೆ ದರ್ಶನ್ ಎತ್ತುಗಳ ಜೊತೆಗೆ ತನ್ನ ಫಾರ್ಮ್ ಹೌಸ್ ನಲ್ಲಿ ಇರುವ ಕುದುರೆಗಳನ್ನು ಕಿಚ್ಚು ಹಾಯಿಸಿದ್ದಾರೆ. ಸ್ವತಃ ದರ್ಶನ್ ಅವರೆ ಕಿಚ್ಚು ಹಾಯಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ನಿನ್ನೆ ದರ್ಶನ್ ಹಬ್ಬವನ್ನು ಅದ್ದೂರಿಯಾಗಿ ಆಚರಿಸುವ ಜೊತೆಗೆ ಅಭಿಮಾನಿಗಳಿಗೂ ಭರ್ಜರಿ ಗಿಫ್ಟ್ ನೀಡಿದ್ದಾರೆ. ದರ್ಶನ್ ಅಭಿನಯದ ಬಹುನಿರೀಕ್ಷೆಯ ರಾಬರ್ಟ್ ಸಿನಿಮಾದ ಎರಡನೆ ಫೋಸ್ಟರ್ ರಿಲೀಸ್ ಮಾಡಿದ್ದಾರೆ. ಸಂಕ್ರಾಂತಿ ದಿನ ಆಂಜನೇಯನಾಗಿ ಬಂದ ದರ್ಶನ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಸದ್ಯ ರಾಬರ್ಟ್ ಮುಗಿಸಿರುವ ದರ್ಶನ್ ಇನ್ನೇನು ಇದೇ ತಿಂಗಳು 21 ರಿಂದ ರಾಜವೀರ ಮದಕರಿನಾಯಕ ಚಿತ್ರದ ಚಿತ್ರೀಕರಣಕ್ಕೆ ಹೊರಡಲಿದ್ದಾರೆ.

  Read more about: darshan ದರ್ಶನ್
  English summary
  Kannada Actor Darshan celebrated Makar Sankranti his Farm house in Mysore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X