'ಚೌಕ' ಬಳಿಕ ಮತ್ತೊಂದು ಸಿನಿಮಾದ ಅತಿಥಿ ಪಾತ್ರದಲ್ಲಿ ದರ್ಶನ್
Recommended Video

ನಟ ದರ್ಶನ್ 'ಕುರುಕ್ಷೇತ್ರ' ಹಾಗೂ 'ಯಜಮಾನ' ಸಿನಿಮಾದ ಕೆಲಸಗಳಲ್ಲಿ ಬಿಜಿ ಇದ್ದಾರೆ. ಈ ಸಿನಿಮಾದ ಜೊತೆಗೆ ದರ್ಶನ್ ಈಗ ಒಂದು ಚಿತ್ರದಲ್ಲಿ ಅತಿಥಿ ಪಾತ್ರವನ್ನು ಮಾಡುತ್ತಿದ್ದಾರೆ. ಅದು ನಟ ಪ್ರಜ್ವಲ್ ದೇವರಾಜ್ ಅವರ ಚಿತ್ರಕ್ಕೆ ಎನ್ನುವುದು ವಿಶೇಷ.
ಈ ಹಿಂದೆ ದರ್ಶನ್ 'ಚೌಕ' ಸಿನಿಮಾದಲ್ಲಿ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆ ಚಿತ್ರದ ನಾಲ್ಕು ನಾಯಕರ ಪೈಕಿ ಪ್ರಜ್ವಲ್ ದೇವರಾಜ್ ಕೂಡ ಒಬ್ಬರಾಗಿದ್ದರು. ಆದರೆ ಈಗ ಮತ್ತೆ ಪ್ರಜ್ವಲ್ ದೇವರಾಜ್ ನಟನೆಯ 'ಇನ್ ಸ್ಪೆಕ್ಟರ್ ವಿಕ್ರಮ್' ಚಿತ್ರದಲ್ಲಿಯೂ ದರ್ಶನ್ ಅತಿಥಿ ಪಾತ್ರ ಮಾಡುತ್ತಿದ್ದಾರೆ.

ದರ್ಶನ್ ಈ ಸಿನಿಮಾದ ಒಂದು ವಾರದ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರಂತೆ. ಆದರೆ ಅವರ ಪಾತ್ರದ ಬಗ್ಗೆ ಹೆಚ್ಚಿನ ಮಾಹಿತಿ ಸದ್ಯಕ್ಕೆ ಹೊರಬಂದಿಲ್ಲ. ಅಂದಹಾಗೆ, ಈ ಹಿಂದೆ ನಟ ರಮೇಶ್ ಅರವಿಂದ್ ಅವರ 100ನೇ ಸಿನಿಮಾ 'ಪುಷ್ಪಕ ವಿಮಾನ' ಚಿತ್ರವನ್ನು ನಿರ್ಮಾಣ ಮಾಡಿದ್ದ, ವಿಖ್ಯಾತ್ ಈ ಚಿತ್ರಕ್ಕೆ ಹಣ ಹಾಕಿದ್ದಾರೆ. ನರಸಿಂಹ ಸಿನಿಮಾಗೆ ನಿರ್ದೇಶನ ಮಾಡಿದ್ದು, ಇದು ಅವರ ಮೊದಲ ಸಿನಿಮಾವಾಗಿದೆ. ಸಿನಿಮಾಗೆ ಭಾವನ ನಾಯಕಿ ಆಗಿದ್ದಾರೆ.

ದರ್ಶನ್ ಈ ಹಿಂದೆ 'ಜೊತೆ ಜೊತೆಯಲಿ', 'ಮೋನಾಲಿಸ', 'ಅರಸು', 'ಅಗ್ರಜ', 'ಮಮ್ತಾಜ್' ಹಾಗೂ 'ಚೌಕ' ಸೇರಿದಂತೆ ಕೆಲ ಸಿನಿಮಾಗಳಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ.


Click it and Unblock the Notifications











