For Quick Alerts
  ALLOW NOTIFICATIONS  
  For Daily Alerts

  ನಟ ದರ್ಶನ್ ಹುಟ್ಟು ಹಬ್ಬಕ್ಕೆ ದಿನಗಣನೆ: ಡಿ ಕಂಪನಿಯಿಂದ ಅಭಿಮಾನಿಗಳಿಗೆ ಪತ್ರ!

  |

  ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟು ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಅಭಿಮಾನಿಗಳು ಬೆಟಾಲಿಯನ್ ಜೊತೆಗೆ ಸಂಭ್ರಮಕ್ಕೆ ರೆಡಿ ಆಗುತ್ತಿದ್ದಾರೆ. ತಿಂಗಳಿಗೂ ಮೊದಲೇ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಹೇಗೆ ಆಚರಿಸಬೇಕು ಎನ್ನುವ ಯೋಜನೆಯನ್ನು ಅಭಿಮಾನಿಗಳು ಹಾಕಿಕೊಂಡಿದ್ದಾರೆ.

  ಈ ಬಾರಿ ದರ್ಶನ್‌ ಅಭಿಮಾನಿಗಳು ವಿಶೇಷವಾದ ಯೋಜನೆ ಒಂದನ್ನು ಕೈಗೊಂಡಿದ್ದಾರೆ. ದರ್ಶನ್‌ ಹುಟ್ಟುಹಬ್ಬದಂದು ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಪ್ರತಿ ಬಾರಿಯೂ ದರ್ಶನ್ ಹುಟ್ಟು ಬಂತೂ ಅಂದರೇ ಅವರ ಮನೆಯ ಬಳಿ ಸಾವಿರಾರು ಮಂದಿ ಸೇರುತ್ತಾರೆ. ಹೆಚ್ಚಾಗಿ ಸೇರುವ ಅಭಿಮಾನಿಗಳ ಸಂಖ್ಯೆಯೇ ಒಂದು ದಾಖಲೆ ಆಗಿ ಬಿಡುತ್ತಿತ್ತು.

  ಮತ್ತೊಂದು ಕಡೆ ದರ್ಶನ್ ಹುಟ್ಟು ಹಬ್ಬಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅವರ ಹೆಸರೇ ಟಾಪ್‌ನಲ್ಲಿ ಇರುತ್ತದೆ. ಅಷ್ಟರ ಮಟ್ಟಿಗೆ ಅವರ ಅಭಿಮಾನಿಗಳಲ್ಲಿ ಕ್ರೇಜ್ ಇದೆ. ದರ್ಶನ್ ಹುಟ್ಟು ಹಬ್ಬದಂದು, ಅವರ ಹೆಸರು ಟ್ರೆಂಡಿಂಗ್‌ನಲ್ಲಿ ಇರುತ್ತದೆ. ಈ ಬಾರಿಯೂ ಇಂದಹದೊಂದು ಯೋಜನೆಗೆ ಸಜ್ಜಾಗಿದ್ದಾರೆ ದರ್ಶನ್ ಅಭಿಮಾನಿಗಳು.

  ಡಿ ಕಂಪನಿ ವತಿಯಿಂದ ಅಭಿಮಾನಿಗಳಿಗೆ ವಿ‍ಶೇಷ ಪತ್ರ!

  ಡಿ ಕಂಪನಿ ವತಿಯಿಂದ ಅಭಿಮಾನಿಗಳಿಗೆ ವಿ‍ಶೇಷ ಪತ್ರ!

  ದರ್ಶನ್‌ ಅವರ ಹುಟ್ಟುಹಬ್ಬ ಬಂತು ಅಂದರೆ ಸಾಕು, ಅವರ ಮನೆಯವರಿಗಿಂತಲೂ ಒಂದು ಪಟ್ಟು ಹೆಚ್ಚಾಗಿಯೇ ಅಭಿಮಾನಿಗಳು ಖುಷಿ ಪಡುತ್ತಾರೆ, ಸಂಭ್ರಮಿಸುತ್ತಾರೆ. ಈ ಬಾರಿ ತಮ್ಮ ನೆಚ್ಚಿನ ನಾಯಕ ಹುಟ್ಟು ಹಬ್ಬವನ್ನು ವಿಶೇಷಗೊಳಿಸಲು ಹೊಸ ಯೋಜನೆ ಕೈಗೊಂಡಿದ್ದಾರೆ ದರ್ಶನ್ ಅಭಿಮಾನಿಗಳು. ದರ್ಶನ್ ಬಾಸ್ ಅಭಿಮಾನಿಗಳ ಸಂಘದ ಸಾಮಾಜಿಕ ಜಾಲತಾಣದ ನಿರ್ವಾಹಕರಿಂದ ಪತ್ರ ಒಂದು ಬಿಡುಗಡೆ ಆಗಿದೆ. ದರ್ಶನ್ ಅವರ ಅಧಿಕೃತ ಅಭಿಮಾನಿ ಸಂಘವಾದ 'ಡಿ ಕಂಪನಿ' ಕಡೆಯಿಂದ ಎಲ್ಲಾ ಅಭಿಮಾನಿಗೆ ಬಹಿರಂಗ ಪತ್ರ ಬಿಡುಗಡೆ ಮಾಡಾಗಿದೆ.

  ಪತ್ರದಲ್ಲಿ ದರ್ಶನ್ ಅಭಿಮಾನಿಗಳಿಗೆ ವಿಶೇಷ ಸೂಚನೆ!

  ಪತ್ರದಲ್ಲಿ ದರ್ಶನ್ ಅಭಿಮಾನಿಗಳಿಗೆ ವಿಶೇಷ ಸೂಚನೆ!

  ಈ ಪತ್ರದ ಮೂಲಕ ವಿಶ್ವದಾದ್ಯಂತ ಇರುವ ದರ್ಶನ್ ಅವರ ಅಭಿಮಾನಿಗಳಿಗೆ ವಿಶೇಷವಾದ ಸೂಚನೆ ನೀಡಲಾಗಿದೆ. " ಎಲ್ಲಾ ಡಿ ಬಾಸ್ ಅಭಿಮಾನಿಗಳಲ್ಲಿ ತಿಳಿಸುವುದೇನಂದರೆ ಮುಂದಿನ ತಿಂಗಳು, ಫೆಬ್ರವರಿ ತಿಂಗಳಲ್ಲಿ ಡಿ ಬಾಸ್ ಅವರ ಹುಟ್ಟುಹಬ್ಬ ಇರುವ ಕಾರಣ ಸಾಮಾಜಿಕ ಜಾಲತಾಣದಲ್ಲಿ 24 ಗಂಟೆಗಳ ಕಾಲ ಟ್ವಿಟ್ಟರ್‌ನಲ್ಲಿ ಟ್ರೆಂಡ್ ಮಾಡಲು ನಿರ್ಧರಿಸಿದ್ದೇವೆ. ಎಲ್ಲರೂ ಈ ಟ್ರೆಂಡ್‌ನಲ್ಲಿ ಭಾಗವಹಿಸಬೇಕಾಗಿ ವಿನಂತಿ. ಸದ್ಯದಲ್ಲೇ ದಿನಾಂಕವನ್ನು ಪ್ರಕಟ ಮಾಡಲಾಗುವುದು". ಎಂದು ಬರೆಯಲಾಗಿದೆ. ಈ ಮೂಲಕ ಟ್ವಿಟ್ಟರ್‌ನಲ್ಲಿ ದೊಡ್ಡ ಮಟ್ಟದ ಟ್ರೆಂಡ್ ಸೃಷ್ಟಿಸಲು ದರ್ಶನ್ ಅಭಿಮಾನಿಗಳು ಪಣ ತೊಟ್ಟಿದ್ದಾರೆ.

  ದರ್ಶನ್ ಅಭಿಮಾನಿಗಳೊಂದಿಗೆ ಬರ್ತ್ ಡೇ ಆಚರಿಸಿಕೊಳ್ಳುವುದು ಡೌಟ್!

  ದರ್ಶನ್ ಅಭಿಮಾನಿಗಳೊಂದಿಗೆ ಬರ್ತ್ ಡೇ ಆಚರಿಸಿಕೊಳ್ಳುವುದು ಡೌಟ್!

  ಸದ್ಯ ಎಲ್ಲೆಡೆ ಕೊರೊನಾ ಹಾವಳಿ ಹೆಚ್ಚಾಗಿದೆ. ಹಾಗಾಗಿ ಈ ಬಾರಿಯೂ ದರ್ಶನ್‌ ಅವರು ತಮ್ಮ ಅಭಿಮಾನಿಗಳೊಂದಿಗೆ, ಅದ್ದೂರಿಯಾಗಿ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುವುದು ಅನುಮಾನ. ಪ್ರತೀ ಬಾರಿಯಂತೆ ಬೇರೆ, ಬೇರೆ ಊರುಗಳಿಂದ ಜನ ದರ್ಶನ್ ಅವರ ಮನೆ ಮುಂದೆ ಸೇರುವಂತೆ ಇಲ್ಲ. ಅದರಲ್ಲೂ ಸಂಪೂರ್ಣ ಲಾಕ್‌ ಡೌನ್‌ ಆದರೆ, ಎಲ್ಲರೂ ಸಾಮಾಜಿಕ ಜಾಲತಾಣದ ಮೂಲಕವೇ ದರ್ಶನ್‌ ಅವರಿಗೆ ಶುಭಾಶಯ ತಿಳಿಸಬೇಕಾಗುತ್ತದೆ.

  ದರ್ಶನ್ ಹುಟ್ಟು ಹಬ್ಬಕ್ಕೆ ಕ್ರಾಂತಿ ಚಿತ್ರದ ಅಪ್ಡೇಟ್ ಬರಲಿದೆ!

  ದರ್ಶನ್ ಹುಟ್ಟು ಹಬ್ಬಕ್ಕೆ ಕ್ರಾಂತಿ ಚಿತ್ರದ ಅಪ್ಡೇಟ್ ಬರಲಿದೆ!

  ಇನ್ನು ದರ್ಶನ್ ಅವರ ಹುಟ್ಟು ಹಬ್ಬಕ್ಕೆ ಕ್ರಾಂತಿ ಚಿತ್ರದ ಅಪ್ಡೇಟ್ ಹೊರ ಬೀಳಲಿದೆ. ಕ್ರಾಂತಿ ಚಿತ್ರದಲ್ಲಿನ ದಶರ್ನ್ ಅವರ ಲುಕ್‌ ರಿವೀಲ್ ಆಗಲಿದೆ ಎನ್ನಲಾಗುತ್ತಿದೆ. ದರ್ಶನ್ ಫಸ್ಟ್ ಲುಕ್ ಟೀಸರ್ ರಿಲೀಸ್‌ ಆಗಲಿದೆ. ಇದಕ್ಕಾಗಿ ದರ್ಶನ್‌ ಅಭಿಮಾನಿಗಳು ಕೂಡ ಕಾಯುತ್ತಿದ್ದಾರೆ.

  English summary
  Actor Darshan Fans Are Ready To Make His Birthday Very Special, Released The Letter About Plans,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X