twitter
    For Quick Alerts
    ALLOW NOTIFICATIONS  
    For Daily Alerts

    'ರಾಷ್ಟ್ರಹಿತ'ಕ್ಕಾಗಿ ಅಭಿಯಾನ ಆರಂಭಿಸಿದ ದರ್ಶನ್ ಅಭಿಮಾನಿಗಳು

    |

    ಭಾರತದ ಪ್ರಸ್ತುತ ಸನ್ನಿವೇಶ ಬಹಳ ಸೂಕ್ಷ್ಮವಾಗಿದೆ. ದೇಶದ ಒಳಗೆ ಕೊರೊನಾ ಮಹಾಮಾರಿಯೊಂದಿಗೆ ಹೋರಾಡುತ್ತಿರುವಾಗಲೇ, ಗಡಿಯಲ್ಲಿ ಚೀನಾ ಕಾಲು ಕೆರೆಯುತ್ತಾ ಜಗಳಕ್ಕೆ ಬಂದಿದೆ.

    Recommended Video

    ಸುಶಾಂತ್ ಗೆಳತಿ ಜೊತೆ 10 ಗಂಟೆ ವಿಚಾರಣೆ ನಡೆಸಿದ ಪೊಲೀಸ್ | Rhea Chakraborty | FILMIBEAT KANNADA

    ಚೀನಾದ ಸೈನಿಕರು ನಿರಾಯುಧರಾಗಿದ್ದ ಭಾರತೀಯ ಸೈನಿಕರನ್ನು ಅತ್ಯಂತ ಹೀನಾಯವಾಗಿ ರಾಡು, ಕಲ್ಲುಗಳಿಂದ ಹೊಡೆದು ಕೊಂದಿದ್ದಾರೆ. ಈ ಗುದ್ದಾಟದಲ್ಲಿ 20 ಮಂದಿ ಭಾರತೀಯ ಸೈನಿಕರು ಹತರಾಗಿದ್ದಾರೆ ಎನ್ನಲಾಗುತ್ತಿದೆ.

    'ಆ' ಸಿನಿಮಾ ಬಗ್ಗೆ ಈಗ ಮಾತು ಬೇಡ: ದರ್ಶನ್'ಆ' ಸಿನಿಮಾ ಬಗ್ಗೆ ಈಗ ಮಾತು ಬೇಡ: ದರ್ಶನ್

    ಈ ಘಟನೆ ಸರ್ಕಾರ ಮಾತ್ರವಲ್ಲದೆ ದೇಶದ ಜನರ ನೆತ್ತರು ಬಿಸಿಮಾಡಿದ್ದು, ಚೀನಾ ಮೇಲೆ 'ಸಾರ್ವಜನಿಕ ಯುದ್ಧ'ವೊಂದನ್ನು ಆರಂಭಿಸಲಾಗಿದೆ. ಚೀನಾ ವಸ್ತುಗಳನ್ನು ಬಳಸದೇ ಇರುವ ಮೂಲಕ 'ಸಾರ್ವಜನಿಕ ಯುದ್ಧ' ಮಾಡಲಾಗುತ್ತಿದೆ. ಇದಕ್ಕೆ ನಟ ದರ್ಶನ್ ಅಭಿಮಾನಿಗಳು ಅಭಿಯಾನದ ಮೂಲಕ ಬೆಂಬಲ ನೀಡಿದ್ದಾರೆ ಮತ್ತು ಪಾಲ್ಗೊಂಡಿದ್ದಾರೆ.

    ಚೀನಾ ಆಫ್‌ ಡಿಲೀಟ್ ಮಾಡುವ ಕಾರ್ಯ

    ಚೀನಾ ಆಫ್‌ ಡಿಲೀಟ್ ಮಾಡುವ ಕಾರ್ಯ

    ದರ್ಶನ್ ಅಭಿಮಾನಿಗಳು ತಮ್ಮ ಮೊಬೈಲ್‌ಗಳಿಂದ ಚೀನಾ ಆಪ್‌ಗಳನ್ನು ಡಿಲೀಟ್ ಮಾಡುವ ಕಾರ್ಯ ಮಾಡಲು ಅಭಿಮಾನಿ ಬಳಗಗಳು ಪ್ರೇರೇಪಣೆ ನೀಡುತ್ತಿವೆ. ಟಿಕ್‌ಟಾಕ್ ಸೇರಿದಂತೆ ಚೀನಾದ ಹೆಚ್ಚು ಚಾಲ್ತಿಯಲ್ಲಿರುವ ಆಪ್‌ಗಳನ್ನು ಬಹುತೇಕ ದರ್ಶನ್ ಅಭಿಮಾನಿಗಳು ಡಿಲೀಟ್ ಮಾಡುತ್ತಿದ್ದಾರೆ.

    'ಡಿಲೀಟ್ ಚೀನಾ ಆಪ್ಸ್'

    'ಡಿಲೀಟ್ ಚೀನಾ ಆಪ್ಸ್'

    ದರ್ಶನ್ ಅವರ ಅಭಿಮಾನಿ ಪೇಜ್‌ಗಳು ಸಹ ಟಿಕ್‌ಟಾಕ್‌ನಲ್ಲಿದ್ದವು. ಅಂಥಹುದರಲ್ಲಿ ಒಂದಾದ ತೂಗುದೀಪ ಡಿ ಟೀಮ್ ಹೆಸರಿನ ಅಭಿಮಾನಿ ಬಳಗವೊಂದು 'ಡಿಲೀಟ್ ಚೀನಾ ಆಪ್ಸ್' ಅಭಿಯಾನಕ್ಕೆ ಬೆಂಬಲ ನೀಡಿ ಚೀನಾ ಆಪ್‌ಗಳನ್ನು ಡಿಲೀಟ್ ಮಾಡಿ ವಿಡಿಯೋ ಹಂಚಿಕೊಂಡಿದೆ.

    ಹೀಗಾಗುತ್ತೆ ಅನ್ನೋದು ಗೊತ್ತಿದ್ರೆ ವೀರ ಮದಕರಿ ನಾಯಕ ಸಿನಿಮಾ ಮಾಡ್ತಿರಲಿಲ್ಲ: ರಾಕ್‌ಲೈನ್ಹೀಗಾಗುತ್ತೆ ಅನ್ನೋದು ಗೊತ್ತಿದ್ರೆ ವೀರ ಮದಕರಿ ನಾಯಕ ಸಿನಿಮಾ ಮಾಡ್ತಿರಲಿಲ್ಲ: ರಾಕ್‌ಲೈನ್

    ಚೀನಾದ ಹಲವು ಜನಪ್ರಿಯ ಆಪ್‌ಗಳು ಭಾರತದಲ್ಲಿವೆ

    ಚೀನಾದ ಹಲವು ಜನಪ್ರಿಯ ಆಪ್‌ಗಳು ಭಾರತದಲ್ಲಿವೆ

    ಟಿಕ್‌ಟಾಕ್, ಶೇರ್‌ಇಟ್, ಪೇಟಿಎಂ, ಯುಸಿ ಬ್ರೌಸರ್ಸ್, ಹಲೊ, ವಿ ಮೇಟ್, ಬ್ಯೂಟಿ ಪ್ಲಸ್, ಕ್ಲಬ್ ಫ್ಯಾಕ್ಟರಿ ಇನ್ನೂ ಹಲವು ಚೀನಾದ ಜನಪ್ರಿಯಗಳು ಆಪ್‌ಗಳಿವೆ. ಟಿಕ್‌ಟಾಕ್ ಅಂತೂ ಭಾರತದಲ್ಲಿ ಅತ್ಯಂತ ಜನಪ್ರಿಯ ಆಪ್‌ ಆಗಿದೆ.

    'ರಾಷ್ಟ್ರಹಿತ', 'ದೇಶಭಕ್ತಿ'ದ ಕಾರ್ಯ ಎನಿಸಿಕೊಳ್ಳುತ್ತಿದೆ

    'ರಾಷ್ಟ್ರಹಿತ', 'ದೇಶಭಕ್ತಿ'ದ ಕಾರ್ಯ ಎನಿಸಿಕೊಳ್ಳುತ್ತಿದೆ

    ಹಲವರು ಚೀನಾ ಆಪ್‌ಗಳನ್ನು ಡಿಲೀಟ್ ಮಾಡುತ್ತಿದ್ದಾರೆ. ಹೀಗೆ ಮಾಡುವುದು 'ದೇಶಭಕ್ತಿ' ಪ್ರದರ್ಶನ ಹಾಗೂ 'ರಾಷ್ಟ್ರಹಿತ'ದ ಕಾರ್ಯ ಎಂದು ಸಾಮಾಜಿಕ ಜಾಲತಾಣದಲ್ಲಿ ಕರೆಸಿಕೊಳ್ಳುತ್ತಿದೆ. ಕೆಲವರಂತೂ ಚೀನಾ ಮೇಡ್ ಟಿವಿಗಳನ್ನು ಸಹ ಹೊತ್ತೊಗೆದಿರುವ ವಿಡಿಯೋಗಳು ಹರಿದಾಡುತ್ತಿವೆ.

    ವಿಡಿಯೋ ವೈರಲ್: ಕುದುರೆ ಆರೈಕೆಯಲ್ಲಿ ಡಿ ಬಾಸ್ ದರ್ಶನ್ವಿಡಿಯೋ ವೈರಲ್: ಕುದುರೆ ಆರೈಕೆಯಲ್ಲಿ ಡಿ ಬಾಸ್ ದರ್ಶನ್

    English summary
    Actor Darshan had huge number of fans. Darshan's fan pages and group deleting china apps in their mobiles and inspiring others to delete it.
    Friday, June 19, 2020, 17:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X