ಅಭಿಮಾನಿಗಳಿಂದ ಡಿ ಬಾಸ್ ಗೆ ದಕ್ಕಿತು ಹೊಸ ಬಿರುದು
Recommended Video

ಸೂಪರ್ ಆಗಿದೆ ಡಿ ಬಾಸ್‌ಗೆ ಸಿಕ್ಕ ಹೊಸ ಬಿರುದು..! | Filmibeat Kannada
ನಟ ದರ್ಶನ್ ಅವರಿಗೆ ಅಭಿಮಾನಿಗಳು ಪ್ರೀತಿಯಿಂದ ಸಾಕಷ್ಟು ಹೆಸರುಗಳಿಂದ ಕರೆಯುತ್ತಾರೆ. ಚಾಲೆಂಜಿಂಗ್ ಸ್ಟಾರ್, ಡಿ ಬಾಸ್ ಈ ರೀತಿ ಕರೆಸಿಕೊಳ್ಳುತ್ತಿದ್ದ ದರ್ಶನ್ ಗೆ ಈಗ ಇನ್ನೊಂದು ಹೊಸ ಬಿರುದು ನೀಡಲಾಗಿದೆ.
ದರ್ಶನ್ ಗೆ ಈಗ 'ಮೊನಾರ್ಕ್ ಆಫ್ ಸ್ಯಾಂಡಲ್ ವುಡ್' ಎಂಬ ಹೊಸ ಬಿರುದು ಸಿಕ್ಕಿದೆ. ಅಂದಹಾಗೆ, 'ಮೊನಾರ್ಕ್ ಆಫ್ ಸ್ಯಾಂಡಲ್ ವುಡ್' ಎಂದರೆ 'ಸ್ಯಾಂಡಲ್ ವುಡ್ ರಾಜಪ್ರಭುತ್ವದ ಸಾರ್ವಭೌಮ' ಎಂಬ ಅರ್ಥ ಬರಲಿದೆ. ದರ್ಶನ್ ಅಭಿಮಾನಿಗಳ 'ದಿ ಲೆಜೆನ್ಸಿ' ತಂಡದಿಂದ ಈ ಬಿರುದು ನೀಡಲಾಗಿದೆ.

ವಿಶೇಷವಾಗಿ ದರ್ಶನ್ ಅವರ ಸಿನಿಮಾ ಸಾಧನೆ ಹಾಗೂ ಸಮಾಜಮುಖಿ ಕೆಲಸಗಳನ್ನು ಕಂಡು ಅಭಿಮಾಗಳು ಈ ಹೊಸ ಬಿರುದು ಕೊಟ್ಟಿದ್ದಾರೆ. ದರ್ಶನ್ ಅವರಿಗೆ ಸನ್ಮಾನ ಮಾಡಿ ಅವರ ಜೊತೆ ಫ್ಯಾನ್ಸ್ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

ಸದ್ಯ ದರ್ಶನ್ 'ಕುರುಕ್ಷೇತ್ರ' ಸಿನಿಮಾದ ಚಿತ್ರೀಕರಣ ಮುಗಿಸಿದ್ದು, 'ಯಜಮಾನ' ಚಿತ್ರದ ಕೆಲಸಗಳಲ್ಲಿ ಬಿಜಿ ಇದ್ದಾರೆ.
More from Filmibeat
English summary
Kannada actor, Challenging Star Darshan get new title 'Monarch Of Sandalwood' from his fans.


Click it and Unblock the Notifications











