For Quick Alerts
  ALLOW NOTIFICATIONS  
  For Daily Alerts

  ದಾಸನ ಡೆಡಿಕೇಶನ್‌ಗೆ ಫ್ಯಾನ್ಸ್ ಬಹುಪರಾಕ್: 6 ತಿಂಗಳಲ್ಲಿ ಹೇಗಿದ್ದ ದರ್ಶನ್ ಹೇಗಾದ್ರು?

  |

  'ಕ್ರಾಂತಿ' ಸಿನಿಮಾ ಶೂಟಿಂಗ್ ಮುಗಿಸಿ 'D56' ಸೆಟ್‌ಗೆ ಕಾಲಿಡಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ರೆಡಿಯಾಗಿದ್ದಾರೆ. ಹೊಸ ಚಿತ್ರದಲ್ಲಿ ಹೊಸ ಲುಕ್‌ನಲ್ಲಿ ಪ್ರೇಕ್ಷಕರನ್ನು ರಂಜಿಸಲು ಮುಂದಾಗಿದ್ದಾರೆ. ಇತ್ತೀಚೆಗೆ ಸಿನಿಮಾ ಮುಹೂರ್ತ ಕೂಡ ನೆರವೇರಿದೆ.

  ರಾಜ್ಯೋತ್ಸವ ಸಂಭ್ರಮದಲ್ಲಿ 'ಕ್ರಾಂತಿ' ಸಿನಿಮಾ ಬಿಡುಗಡೆಯಾಗಲಿದೆ. ಇನ್ನು ತರುಣ್ ಸುಧೀರ್ ನಿರ್ದೇಶನದ 'D56' ಚಿತ್ರಕ್ಕೆ ಹಿರಿಯ ನಟ ಮಾಲಾಶ್ರೀ ಪುತ್ರಿ ರಾಧನಾ ರಾಮ್ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ರಾಕ್‌ಲೈನ್‌ ವೆಂಕಟೇಶ್ ಬಹಳ ಅದ್ಧೂರಿಯಾಗಿ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ನೈಜ ಘಟನೆಗಳನ್ನು ಆಧರಿಸಿ 'D56' ಮೂಡಿ ಬರಲಿದೆ.

  25 ವರ್ಷ ಪೂರೈಸಿದ ದರ್ಶನ್: ಶುಭಕೋರಿದ ತಾರೆಯರು!25 ವರ್ಷ ಪೂರೈಸಿದ ದರ್ಶನ್: ಶುಭಕೋರಿದ ತಾರೆಯರು!

  ಲಾಕ್‌ಡೌನ್ ಸಮಯದಲ್ಲಿ ವ್ಯಾಯಾಮ ಬಿಟ್ಟು ತೂಕ ಹೆಚ್ಚಿಸಿಕೊಂಡಿದ್ದ ದರ್ಶನ್ ಈಗ ಮತ್ತೆ ತೂಕ ಇಳಿಸಿಕೊಂಡಿದ್ದಾರೆ. ನವೆಂಬರ್‌ನಲ್ಲಿ ಜಿಮ್‌ನಲ್ಲಿ ಕಸರತ್ತು ಶುರು ಮಾಡಿದ್ದ ದರ್ಶನ್ ನೋಡ ನೋಡುತ್ತಿದ್ದಂತೆ ಸಣ್ಣಗಾಗಿ ಹೊಸ ಖದರ್‌ನಲ್ಲಿ ಮಿಂಚುತ್ತಿದ್ದಾರೆ. ಲಾಕ್‌ಡೌನ್ ನಡುವೆಯೇ 'ಕ್ರಾಂತಿ' ಸಿನಿಮಾ ಶೂಟಿಂಗ್ ಶುರುವಾಗಿತ್ತು. ಹಾಗಾಗಿ ಅದೇ ಲುಕ್‌ನಲ್ಲಿ ಚಿತ್ರೀಕರಣ ಆರಂಭವಾಗಿತ್ತು. ನಿಧಾನಕ್ಕೆ ತೂಕ ಇಳಿಸಿಕೊಳ್ಳುತ್ತಾ ಬಂದರು. ಅದೇ ರೀತಿ ಚಿತ್ರದಲ್ಲಿ ಮುಂದುವರೆದಿದ್ದು, ಚಿತ್ರದ ಫಸ್ಟ್‌ ಹಾಫ್‌ನಲ್ಲಿ ಒಂದು ರೀತಿ ಕಾಣಿಸಿಕೊಂಡರೆ ಸೆಕೆಂಡ್ ಹಾಫ್‌ನಲ್ಲಿ ಹೊಸ ಲುಕ್‌ನಲ್ಲಿ ದರ್ಶನ ಕೊಡಲಿದ್ದಾರೆ.

   36 ಕೆಜಿ ತೂಕ ಇಳಿಸಿದ ದಾಸ

  36 ಕೆಜಿ ತೂಕ ಇಳಿಸಿದ ದಾಸ

  ಹೌದು ಆರೇಳು ತಿಂಗಳಲ್ಲಿ ನಟ ದರ್ಶನ್ ಬರೋಬ್ಬರಿ 36 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಈ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ವರ್ಕ್‌ಔಟ್ ಜೊತೆಗೆ ಡಯೆಟ್ ಮಾಡಿ ಮೊದಲಿಗೆ ಲುಕ್‌ ಅನ್ನು ಮರಳಿ ಪಡೆದಿದ್ದಾರೆ. ಸೆಪ್ಟೆಂಬರ್‌ ಮೊದಲ ವಾರದಿಂದ ದರ್ಶನ್ ಜಿಮ್‌ನಲ್ಲಿ ಬೆವರಿಳಿಸಲು ಆರಂಭಿಸಿದ್ದರು. ಅದರ ಪ್ರತಿಫಲ ಇಂದು ನೋಡಬಹುದು.

   ದರ್ಶನ್ ಜಿಮ್ ಕೋಚ್ ಹೇಮಂತ್

  ದರ್ಶನ್ ಜಿಮ್ ಕೋಚ್ ಹೇಮಂತ್

  ಡಿಸೆಂಬರ್‌ನಲ್ಲಿ ದರ್ಶನ್ ತಮ್ಮ ಜಿಮ್ ವರ್ಕ್‌ಔಟ್‌ ಬಗ್ಗೆ ಸ್ಪೆಷಲ್ ವಿಡಿಯೋಗಳನ್ನು ಮಾಡಿ ಶೇರ್ ಮಾಡಿದ್ದರು. ಆ ವಿಡಿಯೋದಲ್ಲಿ ತಮ್ಮ ಜಿಮ್ ಕೋಚ್ ಹೇಮಂತ್ ಪರಿಚಯ ಮಾಡಿಸಿದ್ದರು. ಕಳೆದ 8 ವರ್ಷಗಳಿಂದ ಹೇಮಂತ್ ಚಾಲೆಂಜಿಂಗ್ ಸ್ಟಾರ್ ಜಿಮ್ ಕೋಚ್ ಆಗಿದ್ದಾರೆ. ಪ್ರತಿದಿನ ಅವರ ಮಾರ್ಗದರ್ಶನ್‌ನಲ್ಲಿ ಒಂದು ಮುಕ್ಕಾಲು ಗಂಟೆ ನಾನಾ ರೀತಿಯ ಕಸರತ್ತುಗಳನ್ನು ದರ್ಶನ್ ಮಾಡುತ್ತಾರೆ.

   ದರ್ಶನ್‌ ಡೆಡಿಕೇಶನ್‌ಗೆ ಫ್ಯಾನ್ಸ್ ಫಿದಾ

  ದರ್ಶನ್‌ ಡೆಡಿಕೇಶನ್‌ಗೆ ಫ್ಯಾನ್ಸ್ ಫಿದಾ

  ಸಿನಿಮಾ ನಟ ನಟಿಯರಿಗೆ ಫಿಟ್ನೆಸ್ ಬಹಳ ಮುಖ್ಯ. ತೂಕ ಹೆಚ್ಚಿಸಿಕೊಂಡ ಕಾರಣಕ್ಕೆ ಚಿತ್ರರಂಗದಿಂದ ದೂರ ಆಗಿರುವವರು ಇದ್ದಾರೆ. ನಟ ದರ್ಶನ್ 6 ತಿಂಗಳಲ್ಲಿ 36 ಕೆಜಿ ತೂಕ ಇಳಿಸಿಕೊಂಡ ಪರಿಗೆ ಅಭಿಮಾನಿಗಳು ಬೆರಗಾಗಿದ್ದಾರೆ. ತಮ್ಮ ನೆಚ್ಚಿನ ನಟನ ಡೆಡಿಕೇಶನ್‌ಗೆ ಬಹುಪರಾಕ್ ಹೇಳುತ್ತಿದ್ದಾರೆ.

  Recommended Video

  D Boss Darshan 25 ವರ್ಷಕ್ಕೆ ಅದ್ಧೂರಿಯಾಗಿ ಸಂಭ್ರಮಾಚರಣೆ | Filmibeat Kannada
   ಆಗಸ್ಟ್ 16 ರಿಂದ 'D56' ಶೂಟಿಂಗ್

  ಆಗಸ್ಟ್ 16 ರಿಂದ 'D56' ಶೂಟಿಂಗ್

  ಇತ್ತೀಚೆಗೆ 'ಕ್ರಾಂತಿ' ಸಿನಿಮಾ ಡಬ್ಬಿಂಗ್ ಮುಗಿಸಿರುವ ದರ್ಶನ್ ಸೋಮವಾರದಿಂದಲೇ 'D56' ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಇನ್ನು ದರ್ಶನ್ ಹೊಸ ಹೇರ್‌ಸ್ಟೈಲ್ ಕೂಡ ಅಭಿಮಾನಿಗಳ ಗಮನ ಸೆಳೆದಿದೆ. ನಿರ್ದೇಶಕ ತರುಣ್‌ ಸುಧೀರ್ ಹೇಳಿದಂತೆ ಹೇರ್‌ ಸ್ಟೈಲ್ ಮಾಡಿದ್ದಾರೆ. 'ರಾಬರ್ಟ್‌' ಚಿತ್ರಕ್ಕೆ ಕೆಲಸ ಮಾಡಿದ್ದ ಬಹುತೇಕ ಅದೇ ತಂಡ 'D56' ಚಿತ್ರಕ್ಕೂ ಕೆಲಸ ಮಾಡಲಿದೆ. 'ರಾಬರ್ಟ್‌' ಚಿತ್ರದಲ್ಲಿ ದರ್ಶನ್‌ನ ಹೊಸ ಅವತಾರದಲ್ಲಿ ತೋರಿಸಿ ಗೆದ್ದಿದ್ದ ತರುಣ್‌ ಈಗ ಮತ್ತೆ ಅದೇ ಪ್ರಯತ್ನದಲ್ಲಿದ್ದಾರೆ.

  English summary
  Actor Darshan Has Lost More Than 36 kgs of His Weight in 6 Months. Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X