ರವಿಚಂದ್ರನ್ ಮಗನ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್
Recommended Video
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ಕುರುಕ್ಷೇತ್ರ ಸಿನಿಮಾದ ಸಕ್ಸಸ್ ನಲ್ಲಿ ಇದ್ದಾರೆ. ಜೊತೆಗೆ ಬಹು ನಿರೀಕ್ಷೆಯ ರಾಬರ್ಟ್ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸಖತ್ ಬ್ಯುಸಿ ಇರುವ ಸ್ಯಾಂಡಲ್ ವುಡ್ ಸುಲ್ತಾನ್ ಹೊಸಬರ ಚಿತ್ರದ ಟ್ರೈಲರ್, ಟೀಸರ್ ಮತ್ತು ಹಾಡುಗಳನ್ನು ರಿಲೀಸ್ ಮಾಡುವ ಮೂಲಕ ಹೊಸ ಬರ ಚಿತ್ರಗಳಿಗೂ ಸಾಥ್ ನೀಡುತ್ತಾರೆ.
ಮೊನ್ನೆ ಮೊನ್ನೆಯಷ್ಟೆ 'ನನ್ನ ಪ್ರಕಾರ' ಸಿನಿಮಾದ ಆಡಿಯೋ ಮತ್ತು ಟ್ರೈಲರ್ ರಿಲೀಸ್ ಮಾಡಿದ್ದ ದಾಸ, ಈಗ ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಅಭಿನಯದ 'ಪ್ರಾರಂಭ' ಚಿತ್ರಕ್ಕೆ ಸಾಥ್ ನೀಡಿದ್ದಾರೆ.
ಅಂದ್ರೆ ಮನೋರಂಜನ್ ಸಿನಿಮಾದಲ್ಲಿ ದರ್ಶನ್ ಗೆಸ್ಟ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಾ? ಅಂತ ಅಂದ್ಕೋಬೇಡಿ, ಮನೋರಂಜನ್ ಅಭಿನಯದ 'ಪ್ರಾರಂಭ' ಚಿತ್ರದಲ್ಲಿ ದಚ್ಚು ಕಾಣಿಸಿಕೊಳ್ಳುವುದಿಲ್ಲ, ಆದ್ರೆ ದರ್ಶನ್ ಧ್ವನಿ ಕೇಳಿಸಲಿದೆ. ಹೌದು, ಪ್ರಾರಂಭ ಚಿತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ವಾಯ್ಸ್ ನೀಡಿದ್ದಾರೆ.

ಪ್ರಾರಂಭ ಸಿನಿಮಾ ಸೆಟ್ಟೇರಿ ತಿಂಗಳುಗಳೆ ಆಗಿದೆ. ಆದ್ರೀಗ ರಿಲೀಸ್ ಗೆ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದೆ. ಪ್ರಾರಂಭ ರೋಮ್ಯಾಂಟಿಕ್ ಲವ್ ಸ್ಟೋರಿಯಾಗಿದ್ದು ಸಿನಿಮಾಗೆ ಮನು ಕಲ್ಯಾಡಿ ಆಕ್ಷನ್ ಕಟ್ ಹೇಳಿದ್ದಾರೆ. ಮನೋರಂಜನ್ ಗೆ ನಾಯಕಿಯಾಗಿ ಕೀರ್ತಿ ಎನ್ನುವ ಹೊಸ ನಟಿ ಬಣ್ಣಹಚ್ಚಿದ್ದಾರೆ. ಇನ್ನು ಉಳಿದ್ದಂತೆ ಕಡ್ಡಿಪುಡಿ ಚಂದ್ರು, ಹನುಮಂತೇ ಗೌಡ, ಸೂರಜ್ ಸೇರಿದಂತೆ ಅನೇಕ ಕಲಾವಿದರು ಕಾಣಿಸಿಕೊಂಡಿದ್ದಾರೆ.


Click it and Unblock the Notifications











