ಸಾಲು ಸಾಲು ಟ್ರ್ಯಾಕ್ಟರ್ ಗಳಲ್ಲಿ ಗೋಶಾಲೆಗೆ ಅನುದಾನ ಸಾಗಿಸಿದ ದರ್ಶನ್: ವಿಡಿಯೋ ವೈರಲ್
Recommended Video
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹಾಯದ ಮನೋಭಾವದ ಬಗ್ಗೆ ಎಲ್ಲರಿಗೂ ಗೊತ್ತಿದೆ. ಕಷ್ಟ ಎಂದವರ ಪಾಲಿಗೆ ಸದಾ ಸಹಾಯಹಸ್ತ ಚಾಚುವ ದರ್ಶನ್, ಸಾಕಷ್ಟು ಅಭಿಮಾನಿಗಳು ಮತ್ತು ಸ್ನೇಹಿತರ ಕಷ್ಟಕ್ಕೆ ನೆರವಾಗಿದ್ದಾರೆ. ಅಭಿಮಾನಿಗಳು, ಸ್ನೇಹಿತರ ಜೊತೆಗೆ ಪ್ರಾಣಿಗಳು ಅಂದರೂ ದಚ್ಚು ಗೆ ಸಖತ್ ಅಚ್ಚುಮೆಚ್ಚು.
ಸದ್ಯ ದರ್ಶನ್ ಗೋ ಶಾಲೆ ವೊಂದಕ್ಕೆ ಅನುದಾನ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಾಲು ಸಾಲು ಟ್ರ್ಯಾಕ್ಟರ್ ಗಳಲ್ಲಿ ಗೋಶಾಲೆಗೆ ಹುಲ್ಲನ್ನು ಸಾಗಿಸಲಾಗಿದೆ. ಚಿತ್ರ ಗೋಶಾಲೆ ಇದಾಗಿದ್ದು ಹುಲ್ಲು ಮಾತ್ರಲ್ಲದೆ ಗೋಶಾಲೆಗೆ ಅಗತ್ಯವಿರುವ ಫುಡ್ ಕೂಡ ರವಾನಿಸಿದ್ದಾರೆ.
ಟ್ರ್ಯಾಕ್ಟರ್ ಗಳಲ್ಲಿ ಹುಲ್ಲನ್ನು ಸಾಗಿಸುವ ಜೊತೆಗೆ ಸ್ವತಃ ದರ್ಶನ್ ಅವರೆ ಗೋಶಾಲೆಗೆಭೇಟಿ ನೀಡಿ ಗೋವುಗಳನ್ನು ನೋಡಿ, ಅಲ್ಲಿರುವವರ ಜೊತೆ ಮಾತುಕಥೆ ನಡೆಸಿದ್ದಾರೆ. ದರ್ಶನ್ ಭೇಟಿ ನೀಡಿರುವ ಫೋಟೋ ಮತ್ತು ಟ್ರ್ಯಾಕ್ಟರ್ ಗಳ ಮೂಲಕ ಸಾಗುತ್ತಿರುವ ಹುಲ್ಲಿನ ರಾಶಿಯ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಇನ್ನು ದರ್ಶನ್ ಇತ್ತೀಚಿಗೆ ಅಭಿಮಾನಿಗಳಲ್ಲಿ ಒಂದು ಮನವಿ ಮಾಡಿಕೊಂಡಿದ್ದಾರೆ. "ಹುಟ್ಟುಹಬ್ಬಕ್ಕೆ ಹಾರ, ಕೇಕ್, ಗಿಫ್ಟ್ ಗಳನ್ನು ತರುವ ಬದಲು ಅದೆ ಹಣದಲ್ಲಿ ಕೈಲಾದ ಅಕ್ಕಿ, ಬಳೆ, ಸಕ್ಕರೆ ಹಾಗೂ ಇತರ ದವಸ ದಾನ್ಯಗಳನ್ನು ದಾನ ನೀಡಿ ಅದನ್ನು ಒಗ್ಗೂಡಿಸಿ ಸೇರಬೇತಕಾದ ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಪ್ರಮಾಣಿಕವಾಗಿ ತಲುಪಿಸುವ ಜವಾಬ್ದಾರಿ ನನ್ನದು" ಎಂದು ಹೇಳಿದ್ದಾರೆ.

ದರ್ಶನ್ ಈ ಮಾತು ಹೇಳುತ್ತಿದ್ದಾರೆ ಅಭಿಮಾನಿಗಳು ಅಕ್ಕಿ, ಬೇಳಿ, ದವಸ ದಾನ್ಯಗಳನ್ನು ತಂದು ದಚ್ಚು ಬಳಿ ನೀಡುತ್ತಿದ್ದಾರೆ. ಸಾಕಷ್ಟು ಅಭಿಮಾನಿಗಳು ಈಗಾಗಲೆ ಮೂಟೆಗಟ್ಟಲೆ ಅಕ್ಕಿ ಸೇರಿದಂತೆ ಬೇರೆ ಬೇರೆ ಆಹಾರ ಸಾಮಗ್ರಿಗಳನ್ನು ತಂದು ನೀಡುತ್ತಿದ್ದಾರೆ. ಎಲ್ಲವನ್ನು ಒಂದು ಕಡೆ ಸೇರಿಸಿ ಅದನ್ನು ತಲುಪಿಸಬೇಕಾದ ಜಾಗಕ್ಕೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಇಂತಹ ಗುಣಗಳಿಗಾಗಿಯೆ ಅಭಿಮಾನಿಗಳಿಗೆ ದಾಸ ಮೇಲಿನ ಅಭಿಮಾನ ಮತ್ತಷ್ಟು ಹೆಚ್ಚಾಗುತ್ತಿದೆ.


Click it and Unblock the Notifications











