ದರ್ಶನ್ ಸ್ಲಿಮ್ ಆಗಿದ್ದು 'ಕ್ರಾಂತಿ' ಸಿನಿಮಾಗಲ್ಲ: ಆ ಹೊಸ ಸಿನಿಮಾ ಯಾವುದು?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ 'ಕ್ರಾಂತಿ' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಈ ನಡುವೆ ಸಿನಿಮಾಗಳ ಜೊತೆಗೆ ತಮ್ಮ ಫಿಟ್ನೆಸ್ ವಿಚಾರಕ್ಕೂ ಸುದ್ದಿ ಆಗಿದ್ದಾರೆ. ದರ್ಶನ್ ತೆರೆಯ ಮೇಲೆ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುತ್ತಾರೆ. ಈಗ ದರ್ಶನ್ ಹೊಸ ಲುಕ್ ಸಿಕ್ಕಾಪಟ್ಟೆ ವೈರಲ್ ಆಗಿದೆ.
'ರಾಬರ್ಟ್' ಚಿತ್ರದ ನಂತರ ಕೊಂಚ ಬ್ರೇಕ್ ತೆಗೆದುಕೊಂಡಿದ್ದ ನಟ ದರ್ಶನ್, ಕೊಂಚ ದಪ್ಪ ಆಗಿದ್ದರು. ಈಗ ಮತ್ತೆ ತೂಕ ಇಳಿಸಿಕೊಂಡು ಸಿಕ್ಕಾಪಟ್ಟೆ ಫಿಟ್ ಆಗಿ ಕಾಣಿಸಿಕೊಂಡಿದ್ದಾರೆ. ದರ್ಶನ್ ಈ ಹೊಸ ಲುಕ್ ಯಾವ ಚಿತ್ರಕ್ಕೆ ಎನ್ನುವ ಕುತೂಹಲ ಕೂಡ ಹುಟ್ಟಿದೆ. ದರ್ಶನ್ ಹೀಗೆ ತೂಕ ಇಳಿಸಿಕೊಂಡು ಸ್ಲಿಮ್ ಆಗಿರುವುದು 'ಗರಡಿ' ಚಿತ್ರಕ್ಕಾಗಿ.
ಯೋಗರಾಜ್ ಭಟ್ ನಿರ್ದೇಶನದ 'ಗರಡಿ' ಚಿತ್ರದಲ್ಲೂ ಮುಖ್ಯವಾದ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಇದಕ್ಕಾಗಿ ಹಲವು ದಿನಗಳಿಂದ ದರ್ಶನ್ ಭರ್ಜರಿ ಕಸರತ್ತು ನಡೆಸಿದ್ದಾರೆ.

ನಟ ದರ್ಶನ್ ಫಿಟ್ನೆಸ್ ಫ್ರೀಕ್. ಯಾವುದೇ ಕಾರಣಕ್ಕೂ ವರ್ಕೌಟ್ ಮಾಡುವುದನ್ನು ನಿಲ್ಲಿಸುವುದಿಲ್ಲ. ಆದರೆ 'ರಾಬರ್ಟ್' ಚಿತ್ರದ ಬಳಿಕ, ಲಾಕ್‌ಡೌನ್ ಟೈಮಲ್ಲಿ ಶೂಟಿಂಗ್ ಇಲ್ಲದೆ, ವರ್ಕೌಟ್ ಬಿಟ್ಟು ರಿಲ್ಯಾಕ್ಸ್ ಆಗಿದ್ದಕ್ಕೆ ದೇಹದ ತೂಕ ಹೆಚ್ಚಾಗಿತ್ತು. ಕಳೆದ ಹಲವು ತಿಂಗಳಿನಿಂದ ದರ್ಶನ್ ಮತ್ತೆ ಜಿಮ್ ನಲ್ಲಿ ವರ್ಕೌಟ್ ಶುರು ಮಾಡಿದ್ದಾರೆ. ಈಗ ದರ್ಶನ್ ಅವರನ್ನು ನೋಡಿದರೆ ಅಚ್ಚರಿ ಆಗುತ್ತದೆ. ಅಷ್ಟರ ಮಟ್ಟಿಗೆ ಸ್ಲಿಮ್ ಮತ್ತು ಫಿಟ್ ಆಗಿದ್ದಾರೆ.
ದರ್ಶನ್ ಇತ್ತೀಚೆಗಿನ ಫೋಟೊ, ವಿಡಿಯೋ ಸಖತ್ ವೈರಲ್ ಆಗಿದೆ. ಅದರಲ್ಲಿ ದರ್ಶನ್ ಹೊಸ ಲುಕ್ ರಿವೀಲ್ ಆಗಿದೆ. ಇದನ್ನು ಕಂಡು ದರ್ಶನ್ ಅಭಿಮಾನಿಗಳು ಫಿದಾ ಆಗಿದ್ದಾರೆ. ದರ್ಶನ್ ಹೊಸ ಅವತಾರ ಕಂಡು ಅಭಿಮಾನಿಗಳು ದಿಲ್ ಖುಷ್ ಆಗಿದ್ದು, ಬಾಸ್ ಈಸ್ ಬ್ಯಾಕ್ ಎಂದು ಸಂಭ್ರಮಿಸುತ್ತಾ ಇದ್ದಾರೆ.
'ಕ್ರಾಂತಿ' ಚಿತ್ರದ ಶೇಕಡಾ 60ರಷ್ಟು ಶೂಟಿಂಗ್ ಪೂರ್ಣ ಆಗಿದೆ. ವಿ. ಹರಿಕೃಷ್ಣ ನಿರ್ದೇಶನದ 'ಕ್ರಾಂತಿ' ಚಿತ್ರದಲ್ಲಿ ರಚಿತಾ ರಾಮ್ ಸೇರಿದಂತೆ ಹಲವು ದೊಡ್ಡಕಲಾವಿದರ ತಾರಾಗಣವಿದೆ. ಶೈಲಜಾ ನಾಗ್ ಮತ್ತು ಬಿ. ಸುರೇಶ್ 'ಕ್ರಾಂತಿ' ಚಿತ್ರವನ್ನು ನಿರ್ಮಾಣ ಮಾಡ್ತಿದ್ದಾರೆ. ಅತ್ತ ಯೋಗರಾಜ್ ಭಟ್ ನಿರ್ದೇಶನದ 'ಗರಡಿ' ಸಿನಿಮಾ ಶೂಟಿಂಗ್ ಕೂಡ ಭರದಿಂದ ಸಾಗಿದೆ. ಚಿತ್ರದಲ್ಲಿ ದರ್ಶನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೃಷಿ ಸಚಿವರಾದ ಬಿ. ಸಿ ಪಾಟೀಲ್ ನಿರ್ಮಿಸಿರುವ ಈ ಚಿತ್ರದಲ್ಲಿ ಯಶಸ್ ಸೂರ್ಯ ಲೀಡ್ ರೋಲ್‌ನಲ್ಲಿ ಕಾಣಿಸಿಕೊಳ್ಳಿದ್ದಾರೆ. ಶೀಘ್ರದಲ್ಲೇ ದರ್ಶನ್ ನಟನೆಯ ಸನ್ನಿವೇಶಗಳ ಚಿತ್ರೀಕರಣ ನಡೆಯಲಿದೆ.


Click it and Unblock the Notifications











