ಕ್ರಿಸ್‌ಮಸ್‌ಗೆ ಮುನ್ನವೇ ಕೇಕ್ ತಯಾರಿಸಿದ ನಟ ದರ್ಶನ್
ಚಿತ್ರೀಕರಣ ಜಂಝಡವಿಲ್ಲದೆ ವಿರಾಮದಲ್ಲಿದ್ದಾರೆ ನಟ ದರ್ಶನ್. ಕ್ರಿಕೆಟ್, ಬೈಕ್ ರೈಡಿಂಗ್, ಪ್ರವಾಸ ಹೀಗೆ ಹಲವು ಹವ್ಯಾಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
Recommended Video
ಇದೀಗ ಕ್ರಿಸ್‌ಮಸ್‌ಗೆ ಇನ್ನೂ ಒಂದು ತಿಂಗಳು ಇರುವಂತೆಯೇ ಕೇಕ್ ತಯಾರಿಸಿದ್ದಾರೆ ನಟ ದರ್ಶನ್. ದರ್ಶನ್ ಕೇಕ್ ತಯಾರಿಸುತ್ತಿರುವ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲ್‌ನಲ್ಲಿ ದರ್ಶನ್ ಕೇಕ್ ತಯಾರಿಸಿದ್ದಾರೆ. ಸಂದೇಶ್ ಹೋಟೆಲ್‌ನಲ್ಲಿ ಕ್ರಿಸ್‌ಮಸ್ ಸಂಭ್ರಮ ಆರಂಭವಾಗಿದ್ದು, ಕ್ರಿಸ್‌ಮಸ್ ಆರಂಭಕ್ಕೆಂದು ಅತಿಥಿಯನ್ನು ಆಹ್ವಾನಿಸಿ ಕೇಕ್ ತಯಾರಿಸಲಾಗಿದೆ.

ಸಂದೇಶ್ ಹೋಟೆಲ್‌ನ ಸಿಬ್ಬಂದಿ, ವ್ಯವಸ್ಥಾಪಕರೊಂದಿಗೆ ಸೇರಿ ದರ್ಶನ್ ಕೇಕ್ ತಯಾರಿಸಿದ್ದಾರೆ. ದರ್ಶನ್, ಏಪ್ರನ್, ಗ್ಲೌಸ್ ಧರಿಸಿ, ವೈನ್ ಸುರಿದು ಕೇಕ್ ತಯಾರಿಸಿದ್ದಾರೆ. ದರ್ಶನ್ ಕೇಕ್ ತಯಾರಿಸಿದ ಚಿತ್ರಗಳನ್ನು ಸಂದೇಶ್ ಪ್ರಿನ್ಸ್ ಹೋಟೆಲ್ ಹಂಚಿಕೊಂಡಿದೆ.
ಚಿತ್ರೀಕರಣವಿಲ್ಲದೆ ಬಿಡುವಾಗಿರುವ ದರ್ಶನ್, ಪ್ರವಾಸ, ಬೈಕ್ ರೈಡಿಂಗ್, ಕ್ರಿಕೆಟ್ ಇನ್ನಿತರೆ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ದರ್ಶನ್ ನಟನೆಯ ರಾಬರ್ಟ್ ಸಿನಿಮಾ ಇನ್ನಷ್ಟೆ ಬಿಡುಗಡೆ ಆಗಬೇಕಿದೆ. ವೀರ ಮದಕರಿ ನಾಯಕ ಸಿನಿಮಾದಲ್ಲಿ ದರ್ಶನ್ ನಟಿಸಲಿದ್ದಾರೆ.


Click it and Unblock the Notifications











