For Quick Alerts
  ALLOW NOTIFICATIONS  
  For Daily Alerts

  ಶಾಸಕ ಶಾಮನೂರು ಶಿವಶಂಕರಪ್ಪ ಮನೆಗೆ ದರ್ಶನ್ ಭೇಟಿ: ಡಿ ಬಾಸ್ ನೋಡಲು ಮುಗಿಬಿದ್ದ ಅಭಿಮಾನಿಗಳು

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೊರೊನಾ ಲಾಕ್ ಡೌನ್ ನಂತರ ಫಾರ್ಮ್ ಹೌಸ್ ನಲ್ಲಿ ಹೆಚ್ಚು ಕಾಲಕಳೆಯುತ್ತಿದ್ದಾರೆ. ಐಷಾರಾಮಿ ಕಾರುಗಳಲ್ಲಿ ಓಡಾಡುತ್ತಿದ್ದ ದರ್ಶನ್ ಟ್ರಾಕ್ಟರ್, ಎತ್ತಿನ ಗಾಡಿ ಓಡಿಸುವ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ. ದರ್ಶನ್ ಪ್ರಾಣಿ ಪ್ರಿಯಾ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ತನ್ನ ಫಾರ್ಮ್ ಹೌಸ್ ಅಲ್ಲದೆ ದರ್ಶನ್ ಸ್ನೇಹಿತರ ಫಾರ್ಮ್ ಗೂ ಭೇಟಿ ನೀಡಿ ಪ್ರಾಣಿಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.

  Darshan first reaction about sandalwood drug mafia | Filmibeat Kannada

  ದರ್ಶನ್ ಇನ್ನೂ ಚಿತ್ರೀಕರಣಕ್ಕೆ ಹೊರಟಿಲ್ಲ. ಹಾಗಂತ ಸುಮ್ಮನೆ ಸಮಯ ಕಳೆಯುತ್ತಿಲ್ಲ. ಈ ಸಮಯದಲ್ಲಿ ಗೋವು, ಕುದುರೆ ಸಾಕಣೆ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಈ ವಿಚಾರವಾಗಿ ದರ್ಶನ್ ಇತ್ತೀಚಿಗೆ ಶಾಸಕ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪನವರ ಫಾರ್ಮ್ ಹೌಸ್ ಗೆ ಭೇಟಿ ನೀಡಿದ್ದಾರೆ. ಮುಂದೆ ಓದಿ..

  ದರ್ಶನ್ ಗೆ ಸುದೀಪ್‌ ಸಂಬಂಧದಲ್ಲಿ ಏನಾಗಬೇಕು? ಒಳ್ಳೆ ಹುಡುಗನ ಲೆಕ್ಕಾಚಾರ!ದರ್ಶನ್ ಗೆ ಸುದೀಪ್‌ ಸಂಬಂಧದಲ್ಲಿ ಏನಾಗಬೇಕು? ಒಳ್ಳೆ ಹುಡುಗನ ಲೆಕ್ಕಾಚಾರ!

  ಶಾಮನೂರು ತೋಟಕ್ಕೆ ಭೇಟಿ ನೀಡಿದ ದರ್ಶನ್

  ಶಾಮನೂರು ತೋಟಕ್ಕೆ ಭೇಟಿ ನೀಡಿದ ದರ್ಶನ್

  ಬಳ್ಳಾರಿ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ದುಗ್ಗಾವತಿಯಲ್ಲಿರುವ ಶಾಮನೂರು ತೋಟಕ್ಕೆ ದರ್ಶನ್ ಮೊದಲು ಭೇಟಿ ನೀಡಿದ್ದಾರೆ. ಅಲ್ಲಿ ಗೋ ಪಾಲನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಬಳಿಕ ದಾವಣಗೆರೆಗೆ ಆಗಮಿಸಿದ ಡಿ ಬಾಸ್ ನಗರದ ಕಲ್ಲೇಶ್ವರ ರೈಸ್ ಮಿಲ್ ಬಳಿ ಕುದುರೆ ಪಾಲನೆ ಬಗ್ಗೆ ತಿಳಿದುಕೊಂಡಿದ್ದಾರೆ. ಈ ಸಮಯದಲ್ಲಿ ದರ್ಶನ್ ಗೆ ಶಾಮನೂರು ಶಿವಶಂಕರಪ್ಪ ಪುತ್ರ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಸಾಥ್ ನೀಡಿದ್ದಾರೆ.

  ಶಿವಶಂಕರಪ್ಪ ಭೇಟಿಯಾದ ಡಿ ಬಾಸ್

  ಶಿವಶಂಕರಪ್ಪ ಭೇಟಿಯಾದ ಡಿ ಬಾಸ್

  ವಿವಧ ಫಾರ್ಮ್ ಹೌಸ್ ಗಳಿಗೆ ಭೇಟಿ ನೀಡಿದ ಬಳಿಕ ಶಿವಶಂಕರಪ್ಪ ಮನೆಗೆ ತೆರಳಿದ್ದಾರೆ. ಶಿವಶಂಕರಪ್ಪ ಮನೆಯಲ್ಲಿ ಕೆಲವು ಸಮಯ ಕಾಲಕಳೆದಿರುವ ದರ್ಶನ್ ಅಲ್ಲಿಯೇ ಊಟ ಮುಗಿಸಿದ್ದಾರೆ. ದಾವಣಗೆರೆಯಲ್ಲಿಯೇ ವಾಸ್ತವ್ಯ ಹೂಡಿರುವ ದರ್ಶನ್ ಬಾಪೂಜಿ ಗೆಸ್ಟ್ ಹೌಸ್ ನಲ್ಲಿ ಉಳಿದುಕೊಂಡಿದ್ದಾರೆ.

  ಮನೆಗೆ 'ಡಿ ಬಾಸ್' ಎಂದು ಹೆಸರಿಟ್ಟ ಅಭಿಮಾನಿ, ದರ್ಶನ್ ಫ್ಯಾನ್ಸ್ ಖುಷಿಮನೆಗೆ 'ಡಿ ಬಾಸ್' ಎಂದು ಹೆಸರಿಟ್ಟ ಅಭಿಮಾನಿ, ದರ್ಶನ್ ಫ್ಯಾನ್ಸ್ ಖುಷಿ

  ದರ್ಶನ್ ಸಿನಿಮಾಗಳು

  ದರ್ಶನ್ ಸಿನಿಮಾಗಳು

  ದರ್ಶನ್ ಸದ್ಯ ಮದಕರಿ ನಾಯಕ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಈ ಸಿನಿಮಾದ ಚಿತ್ರೀಕರಣ ಇನ್ನೂ ಪ್ರಾರಂಭವಾಗಿಲ್ಲ. ಮೊದಲ ಭಾಗದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಕೊರೊನಾ ಲಾಕ್ ಡೌನ್ ನಿಂದ ತಾತ್ಕಾಲಿಕ ಬ್ರೇಕ್ ಹಾಕಿದೆ. ಈ ಸಿನಿಮಾ ಜೊತೆಗೆ ಬಹುನಿರೀಕ್ಷೆಯ 'ರಾಬರ್ಟ್' ಚಿತ್ರ ರಿಲೀಸ್ ಗೆ ರೆಡಿಯಾಗಿದೆ. ಇನ್ನೂ ರಾಬರ್ಟ್ ಟೀಂ ಜೊತೆ ದರ್ಶನ್ ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ.

  English summary
  Actor darshan visited to MLA Shamanuru Shivashankarappa house in Davanagere.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X