ಅಂಗವಿಕಲ ಅಭಿಮಾನಿಗೆ ಊಟ ಬಡಿಸಿದ ದರ್ಶನ್
Recommended Video

ನಟ ದರ್ಶನ್ ತೆರೆಯ ಮೇಲೆ ಮಾತ್ರವಲ್ಲದೆ ನಿಜ ಜೀವನದಲ್ಲೂ ಹೀರೊ ಎಂದು ಆಗಾಗ ಸಾಬೀತು ಮಾಡುತ್ತಿರುತ್ತಾರೆ. ಅದಕ್ಕೆ ಮತ್ತೊಂದು ತಾಜಾ ಉದಾಹರಣೆ ಈಗ ಮತ್ತೆ ಸಿಕ್ಕಿದೆ. ಅದೇನೆಂದರೆ, ವಿಕಲಚೇತನ ಒಬ್ಬರಿಗೆ ಊಟ ಬಡಿಸಿ ಮಾನವೀಯತೆ ಮೆರೆದಿದ್ದಾರೆ.
ದಾಸ ದರ್ಶನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ದೊಡ್ಡ ಸ್ಟಾರ್ ನಟನಾರದಾರು ಅಭಿಮಾನಿಗಳ ಜೊತೆಗೆ ಸದಾ ಪ್ರೀತಿಯಿಂದಲೇ ಬೆರೆಯುತ್ತಾರೆ. ಫೋಟೋ-ಆಟೋಗ್ರಾಫ್ಫ್ ಕೇಳಿಕೊಂಡು ಬರುವ ಅಭಿಮಾನಿಗಳ ಜೊತೆ ಖುಷಿಯಿಂದ ಬೆರೆಯುವುದು ಮಾತ್ರವಲ್ಲ ತಮ್ಮ ಸಮಸ್ಯೆ ಹೇಳಿಕೊಂಡು ಬರುವ ಅಭಿಮಾನಿಗಳೊಂದಿಗೆ ಕೂಡ ದರ್ಶನ್ ಪ್ರೀತಿಯಿಂದ ಅವರ ಸಮಸ್ಯೆಗಳೆಗೆ ಸಹಾಯ ಮಾಡುತ್ತಾರೆ.

ಕಳೆದ ಶುಕ್ರವಾರ ನಾಡ ದೇವತೆ ಚಾಮುಂಡೇಶ್ವರಿ ದೇವಿಯ ವರ್ಧಂತಿ ಉತ್ಸವವಿತ್ತು. ಅದರ ಸಲುವಾಗಿ ದರ್ಶನ್ ಅವರ ಫಾರಂ ಹೌಸ್ನಲ್ಲಿ ವಿಶೇಷ ಪೂಜೆ ನಡೆಯಿತು. ಆಗ ಅಲ್ಲಿಗೆ ಅಚಾನಕ್ ಆಗಿ ಬಂದ ವಿಶೇಷ ಚೇತನನಿಗೆ ಸ್ವಾಗತ ನೀಡಿದ ದರ್ಶನ್, ಆತನೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದು ಮಾತ್ರವಲ್ಲದೆ, ಊಟವನ್ನೂ ಬಡಿಸಿದ್ದಾರೆ. ಇದನ್ನು ಅಭಿಮಾನಿಗಳು ತಮ್ಮ ಟ್ವಿಟ್ಟರ್ನಲ್ಲಿ ಹಂಚಿಕೊಂಡು ಖುಷಿಪಟ್ಟಿದ್ದಾರೆ.


Click it and Unblock the Notifications











