ದರ್ಶನ್ ಅಭಿನಯದ ನಾಟಕದ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್

ನಟ ದರ್ಶನ್ ಸದ್ಯ ಕನ್ನಡದ ಟಾಪ್‌ ಸ್ಟಾರ್‌ಗಳಲ್ಲಿ ಒಬ್ಬರು. ದರ್ಶನ್ ಸಿನಿಮಾ ಜರ್ನಿಯೆ ಒಂದು ರೀತಿ ರೋಚಕ. ಗಾಡ್‌ ಫಾದರ್‌ ಇಲ್ಲದೆ ಬೆಳೆದು ನಿಂತ ಭೂಪತಿ ಈ ಚಾಲೆಂಜಿಂಗ್‌ ಸ್ಟಾರ್. ಅಂದು ಲೈಟ್ ಬಾಯ್‌ ಆಗಿ ಕೆಲಸ ಶುರು ಮಾಡಿದ ನಟ ದರ್ಶನ್ ಇಂದು ಕೋಟಿ ಅಭಿಮಾನಿಗಳನ್ನು ಪಡೆದ ಒಡೆದ.

ಈಗ ದರ್ಶನ್‌ ಅವರ ಬಗ್ಗೆ ಮಾತನಾಡೋಕೆ ಕಾರಣ ಅವರು ಸಿನಿಮಾರಂಗಕ್ಕೆ ಬರುವ ಮುನ್ನ ಹೇಗೆ ಇದ್ದರು ಎನ್ನುವ ವಿಚಾರ. ಹೌದು ನಟ ದರ್ಶನ್ ಸಿನಿಮಾರಂಗಕ್ಕೆ ಯಾವುದೇ ತಯಾರಿ ಇಲ್ಲದೆ ಬಂದವರಲ್ಲ. ಬದಲಿಗೆ ಅವರು ನೀನಾಸಂನಲ್ಲಿ ಹಲವು ವರ್ಷ ಅಭಿನಯ ತರಬೇತಿ ಪಡೆದು ಬಂದವರು.

ನೀನಾಸಂನಲ್ಲಿ ನಟ ದರ್ಶನ್ ಸಾಕಷ್ಟು ನಾಟಕಗಳಲ್ಲಿ ಹತ್ತು, ಹಲವು ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಹಾಗೆ ನಟ ದರ್ಶನ್ ಅಭಿನಯಿಸಿರುವ ನಾಟಕದ ಫೋಟೊ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ನಟ ದರ್ಶನ್ ವೇದಿಕೆಯ ಮೇಲೆ ಇರುವ ಫೋಟೊ ಇದು.

Actor Darshan Old Photo Going Viral In Social Media

ಈ ಫೋಟೊದಲ್ಲಿ ದರ್ಶನ್ ಅವರು ಹುಡುಗಿ ಒಬ್ಬಳ ಕೈ ಹಿಡಿದು ಕೊಂಡಿದ್ದಾರೆ. ಪಕ್ಕದಲ್ಲಿ ನಿಂತಿರೋ ಹಿರಿಯ ವ್ಯಕ್ತಿ ಒಬ್ಬರು ಅವರ ತಲೆಯ ಮೇಲೆ ಅಕ್ಷತೆ ಹಾಕುವಂತೆ ಇದೆ. ಹಾಗಾಗಿ ಇದು ಮದುವೆ ದೃಶ್ಯ ಎಂದು ಊಹಿಸಬಹುದು. ಸದ್ಯಕ್ಕೆ ಈ ಫೊಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಪೋಟೋ ಯಾವ ನಾಟಕದ್ದು, ಯಾವಾಗ ನಡೆದಿದ್ದು ಎನ್ನುವ ಬಗ್ಗೆ ಹೆಚ್ಚಿನ ಮಾಹಿತಿ ಹೊರ ಬಿದ್ದಿಲ್ಲ. ಆದರೂ ದರ್ಶನ್ ಅವರ ಹಳೆ ಲುಕ್ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಲಿಸ್ಟ್‌ ಸೇರಿದೆ.

ನಟ ದರ್ಶನ್ 1997ರಲ್ಲೇ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಆದರೆ 2002ರಲ್ಲಿ ತೆರೆಕಂಡ ಮೆಜೆಸ್ಟಿಕ್‌ ಚಿತ್ರದ ಮೂಲಕ ಅವರು ನಾಯಕ ನಾಟನಾಗಿ ಸಿನಿಮಾ ಜರ್ನಿ ಆರಂಭಿಸಿದ್ದಾರೆ. ಮೆಜೆಸ್ಟಿಕ್‌ ನಂತರ ದರ್ಶನ್ ಮತ್ತೆ ಯಾವತ್ತೂ ಹಿಂದಿರುಗಿ ನೋಡಿಲ್ಲ. ಇತ್ತೀಚೆಗೆ ರಿಲೀಸ್ ಆದ ರಾಬರ್ಟ್‌ ಚಿತ್ರದಲ್ಲೂ ದರ್ಶನ್ ದಾಖಲೆ ಬರೆದಿದ್ದಾರೆ. ಆದರೆ ಈಗ ಅವರ ಆ ಹಳೆ ಲುಕ್ ವೈರಲ್‌ ಆಗುತ್ತಿದೆ.

More from Filmibeat

English summary
Actor Darshan Old Photo When He Was In Neenasam Going Viral In Social Media,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X