For Quick Alerts
  ALLOW NOTIFICATIONS  
  For Daily Alerts

  Darshan Next Movie: 'ಕ್ರಾಂತಿ' ಬಳಿಕ ದರ್ಶನ್ ನಟಿಸುವ ಸಿನಿಮಾ ಇದೇನೆ!

  |

  ನಟ ದರ್ಶನ್ 'ಕ್ರಾಂತಿ' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಚಿತ್ರೀಕರಣ ಭರದಿಂದ ಸಾಗಿದೆ. ನಟ ದರ್ಶನ್ ಸಿನಿಮಾಗಳು ಒಂದಾದ ಬಳಿಕ ಒಂದು ಸಿನಿಮಾ ಪ್ರಕಟ ಆಗುತ್ತಿವೆ. 'ಕ್ರಾಂತಿ' ಚಿತ್ರದ ಬಳಿಕ ದರ್ಶನ್ ಯಾವ ಸಿನಿಮಾ ಕೈಗೆತ್ತಿಕೊಳ್ಳುತ್ತಾರೆ ಎನ್ನುವ ಕುತೂಹಲ ಇತ್ತು. ಈಗ ಅದಕ್ಕೆ ತೆರೆ ಬಿದ್ದಿದೆ. 'ಕ್ರಾಂತಿ' ಚಿತ್ರದ ನಂತರ ತೆರೆಗೆ ಯಾವ ಚಿತ್ರದ ಮೂಲಕ ದರ್ಶನ್ ಎಂಟ್ರಿ ಕೊಡುತ್ತಾರೆ ಎನ್ನುವುದು ಗೊತ್ತಾಗಿದೆ.

  'ರಾಬರ್ಟ್' ಚಿತ್ರದ ಯಶಸ್ಸಿನ ನಂತರ ನಟ ದರ್ಶನ್ ಕೈಗೆತ್ತಿಕೊಂಡಿರುವ ಚಿತ್ರ 'ಕ್ರಾಂತಿ'. 'ಯಜಮಾನ' ಚಿತ್ರ ತಂಡದ ಜೊತೆಗೆ 'ಕ್ರಾಂತಿ' ಮೂಲಕ ದರ್ಶನ್ ಮತ್ತೊಮ್ಮೆ ಕೈ ಜೋಡಿಸಿದ್ದಾರೆ. ಈ ಚಿತ್ರ ಸೆಟ್ಟೇರಿದಾಗಲೇ ಹಲವು ವಿಶೇಷತೆಗಳಿಂದ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಚಿತ್ರದಲ್ಲಿ ದರ್ಶನ್ ಜೊತೆಗೆ ನಟಿ ರಚಿತಾ ರಾಮ್ ಜೋಡಿ ಆಗಿರುವುದು ಕೂಡ ನಿರೀಕ್ಷೆಗೆ ಕಾರಣ ಆಗಿದೆ.

  Darshan Kranti: ದರ್ಶನ್ 'ಕ್ರಾಂತಿ' ಅಡ್ಡಾದಲ್ಲಿ ಏನ್ ನಡೀತಿದೆ? ರಿಲೀಸ್ ಅಪ್ಡೇಟ್ ಇಲ್ಲಿದೆ! Darshan Kranti: ದರ್ಶನ್ 'ಕ್ರಾಂತಿ' ಅಡ್ಡಾದಲ್ಲಿ ಏನ್ ನಡೀತಿದೆ? ರಿಲೀಸ್ ಅಪ್ಡೇಟ್ ಇಲ್ಲಿದೆ!

  ಆದರೆ 'ಕ್ರಾಂತಿ' ನಂತರ ದರ್ಶನ್ ಯಾವ ರೂಪದಲ್ಲಿ ದರ್ಶನ ನೀಡುತ್ತಾರೆ ಎನ್ನುವ ಬಗ್ಗೆ ಇದ್ದ ಕುತೂಹಲಕ್ಕೆ ತೆರೆ ಬಿದ್ದಿದೆ. ದರ್ಶನ್ ನಿರ್ದೇಶನ ಮಾಡಲು ನಿರ್ದೇಶಕ ಯೋಗ್‌ರಾಜ್ ಭಟ್ ಕೂಡ ತಯಾರಿ ನಡೆಸಿದ್ದಾರೆ. ಹೌದು, ನಟ ದರ್ಶನ್ ಯೋಗ್‌ರಾಜ್ ಭಟ್ ನಿರ್ದೇಶನದ 'ಗರಡಿ' ಚಿತ್ರದಲ್ಲಿ ಅಬ್ಬರಿಸಲಿದ್ದಾರೆ.

  'ಗರಡಿ' ಚಿತ್ರದಲ್ಲಿ ದರ್ಶನ್ ವಿಶೇಷ ಪಾತ್ರ!

  'ಗರಡಿ' ಚಿತ್ರದಲ್ಲಿ ದರ್ಶನ್ ವಿಶೇಷ ಪಾತ್ರ!

  ನಟ ಯಶಸ್ ಸೂರ್ಯ ಅಭಿನಯದ, ಯೋಗ್‌ರಾಜ್‌ ಭಟ್ ನಿರ್ದೇಶನದ 'ಗರಡಿ' ಚಿತ್ರ, ಈಗಾಗಲೇ ಸುದ್ದಿ ಮಾಡುತ್ತಿದೆ. 'ಗರಡಿ' ಚಿತ್ರದ ಶೂಟಿಂಗ್ ಕೂಡ ಭರದಿಂದ ನಡೆಯುತ್ತಿದೆ. ಈ ಚಿತ್ರಕ್ಕೆ ನಟ ದರ್ಶನ್ ಮೊದಲಿನಿಂದಲೂ ಬೆಂಬಲ ನೀಡುತ್ತಾ ಬಂದಿದ್ದಾರೆ. ಈಗ ಮತ್ತೊಂದು ಸರ್ಪ್ರೈಸ್ ಕೊಟ್ಟಿದ್ದಾರೆ. ನಟ ದರ್ಶನ್ 'ಗರಡಿ' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆಂಬ ವಿಚಾರ ಈಗ ಬೆಳಕಿಗೆ ಬಂದಿದೆ.

  ಕುಸ್ತಿ ಪಟು ಆಗಿ ದರ್ಶನ ಕೊಡ್ತಾರಾ ದರ್ಶನ್?

  ಕುಸ್ತಿ ಪಟು ಆಗಿ ದರ್ಶನ ಕೊಡ್ತಾರಾ ದರ್ಶನ್?

  'ಗರಡಿ' ಅಂತ ಟೈಟಲ್ ಇಟ್ಟಿರೋದರಿಂದ ಸಿನಿಮಾದ ಕಥೆ ಗರಡಿ ಮನೆ, ಕುಸ್ತಿ ಹಿನ್ನೆಯಲ್ಲಿಯೇ ನಡೆಯುತ್ತೆ ಎನ್ನುವ ಸೂಚನೆ ಸಿಕ್ಕಿದೆ. ಹಾಗಾಗಿ ಈ ಚಿತ್ರದಲ್ಲಿ ನಟ ದರ್ಶನ್ ಅಭಿನಯಿಸುತ್ತಿದ್ದು ಅವರು ಕೂಡ ಕುಸ್ತಿ ಪಟು ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ. ದರ್ಶನ್ ಪೈಲ್ವಾನ್ ರೂಪದಲ್ಲಿ ದರ್ಶನ್ ಕೊಡಬಹುದು ಎನ್ನಲಾಗಿದ್ದು, ಚಿತ್ರತಂಡವೇ ಉತ್ತರ ಕೊಡಬೇಕಿದೆ.

  'ಗರಡಿ' ಸೆಟ್‌ಗೆ ಭೇಟಿ ಕೊಟ್ಟ ದರ್ಶನ್!

  'ಗರಡಿ' ಸೆಟ್‌ಗೆ ಭೇಟಿ ಕೊಟ್ಟ ದರ್ಶನ್!

  'ಗರಡಿ' ಚಿತ್ರದ ಲಾಂಚ್‌ನಿಂದಲೂ ನಟ ದರ್ಶನ್ ಚಿತ್ರತಂಡದ ಜೊತೆಗೆ ಇದ್ದಾರೆ. ಕೆಲವು ದಿನಗಳ ಹಿಂದೆ ಸಿನಿಮಾ ಶೂಟಿಂಗ್ ನೋಡಲೆಂದೇ ದರ್ಶನ್ ಶೂಟಿಂಗ್ ಸ್ಪಾಟ್‌ಗೆ ಬಂದಿದ್ದರು. ಚಿತ್ರದ ನಿರ್ದೇಶಕ ಯೋಗರಾಜ್ ಭಟ್, ನಿರ್ಮಾಪಕ ಬಿ ಸಿ ಪಾಟೀಲ್ ಹಾಗೂ ನಾಯಕ ನಟ ಯಶಸ್ ಸೂರ್ಯ ಜೊತೆ ಕೆಲ ಕಾಲ ಮಾತುಕತೆ ನಡೆಸಿದರು. ಶೂಟಿಂಗ್ ಬಗ್ಗೆ ಮಾಹಿತಿ ಪಡೆದುಕೊಂಡರು. ಕೆಲ ಕಾಲ 'ಗರಡಿ' ಶೂಟಿಂಗ್ ವೀಕ್ಷಣೆ ಮಾಡಿದ್ದಾರೆ ದರ್ಶನ್.

  ಅತಿಥಿ ಪಾತ್ರಗಳಲ್ಲಿ ದರ್ಶನ್!

  ಅತಿಥಿ ಪಾತ್ರಗಳಲ್ಲಿ ದರ್ಶನ್!

  ಈ ಹಿಂದೆಯೂ ಹಲವು ಚಿತ್ರಗಳಲ್ಲಿ ನಟ ದರ್ಶನ್ ಅತಿಥಿ ಪಾತ್ರ ಮಾಡಿದ್ದಾರೆ. ಪುನೀತ್ ರಾಜ್‌ಕುಮಾರ್ ಅಭಿನಯದ 'ಅರಸು', ಮಲ್ಟಿಸ್ಟಾರರ್ ಚಿತ್ರ 'ಚೌಕ' ಮತ್ತು ಪ್ರಜ್ವಲ್ ದೇವರಾಜ್‌ ಅಭಿನಯದ 'ಇನ್ಸ್‌ಪೆಕ್ಟರ್ ವಿಕ್ರಂ' ಚಿತ್ರ ಸೇರಿದಂತೆ ಕೆಲವು ಚಿತ್ರಗಳಲ್ಲಿ ದರ್ಶನ್ ಅಥಿತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಅದೆಲ್ಲವೂ ಚಿತ್ರದಲ್ಲಿ ದೊಡ್ಡ ತಿರುವು ಕೊಡುವ ಪಾತ್ರಗಳೇ ಆಗಿವೆ. ಈಗ 'ಗರಡಿ'ಯಲ್ಲಿ ದಚ್ಚು ಹೇಗೆ ಕಾಣಿಸಿಕೊಳ್ಳುತ್ತಾರೆ ಎನ್ನುವ ಕುತೂಹಲ ಮೂಡಿದೆ.

  English summary
  After Karnti Darshan Taking Kranthi Movie, He Is Palying Guest Role In Yograj Bhat Directional Garadi Movie
  Wednesday, March 30, 2022, 19:49
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X